|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ರಿತೇಶ್, ಆಶಿಶ್, ರಾಮ್ಬಾಬು, ಸೋನು, ಕೃಷ್ಣ, ಸಂದೀಪ್ ಮತ್ತು ಮುಕೇಶ್ ಬಿಹಾರ ಮೂಲದ ವಲಸೆ ಕಾರ್ಮಿಕರು. ಇತರರ ಹಾಗೆ ಇವರೂ ಕೂಡ ತಮ್ಮ ಬೈಸಿಕಲ್ಗಳಲ್ಲಿ ಊರು ತಲುಪಲು ಹೋದರು. ಏಳು ದಿನಗಳ ಕಾಲ ಪೊಲೀಸರು ಹಾಗೂ ಆಡಳಿತ ವ್ಯವಸ್ಥೆಯ ಕೌರ್ಯ, ಹಸಿವು, ಅವಮಾನ, ಹತಾಶೆ ಎಲ್ಲವನ್ನೂ ಎದುರಿಸಿಯೂ ತಮ್ಮ ಗುರಿ ಮುಟ್ಟುವಲ್ಲಿ ಯಶಸ್ವಿಯಾದರು. ದೆಹಲಿ ಸಮೀಪದ ಗಾಜಿಯಾಬಾದ್ನಿಂದ ಶುರುವಾದ ಈ ಪ್ರಯಾಣ ಕೊನೆಗೊಳ್ಳುವುದು ಬಿಹಾರದ ಸಹರ್ಸಾದಲ್ಲಿ. ಈ ಏಳು ಮಂದಿ ತಮ್ಮ ಪ್ರಯಾಣದ ವೇಳೆ ಅನುಭವಿಸಿದ ಸವಾಲುಗಳನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ವಿನೋದ್ ಕಾಪ್ರಿ ತಮ್ಮ ``1232 km: The Long Journey Home`` ಕೃತಿಯಲ್ಲಿ ಕಟ್ಟಿಕೊಟ್ಟಿದ್ದರು. ಈ ಪುಸ್ತಕವನ್ನು ಪತ್ರಕರ್ತ ಸತೀಶ್ ಜಿ. ಟಿ. ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ನಮ್ಮೊಡನೆ ಇದ್ದರೂ ನಾವೆಂದೂ ಅರಿಯಲು ಬಯಸದ ವಲಸೆ ಕಾರ್ಮಿಕರೆಂಬ ಮನುಷ್ಯ ಜೀವಿಗಳ ಬದುಕನ್ನು, ನಮ್ಮ ಹೊಣೆಗೇಡಿತನವನ್ನು ನಮಗೆ ಪರಿಚಯಿಸುವ ``1232 ಕಿ.ಮೀ.`` ಕೃತಿ ಎಲ್ಲರೂ ಓದಲೇಬೇಕಿರುವ ಪುಸ್ತಕ.
|
ವಿನೋದ್ ಕಾಪ್ರಿ ಅವರು ಸಿನಿಮಾ ನಿರ್ದೇಶಕ. ಅವರು ನಿರ್ದೇಶಿಸಿದ `ಕಾಂಟ್ ಟೇಕ್ ದಿಸ್ ಶಿಟ್ ಎನಿಮೋರ್`(೨೦೧೪) ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿದೆ. ವಿಮರ್ಶಕರ ಮನ್ನಣೆಗೆ ಪಾತ್ರವಾದ ಅವರ `ಪಿಹು`(೨೦೧೭) ಚಿತ್ರಕ್ಕೆ ಎರಡು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಅವರು ೨೩ ವರ್ಷಗಳ ಕಾಲ ಅಮರ್ ಉಜಾಲ, ಜೀ ನ್ಯೂಸ್, ಸ್ಟಾರ್ ನ್ಯೂಸ್, ಇಂಡಿಯಾ ಟಿವಿ ಮತ್ತು ಟಿವಿ೯ ವಾಹಿನಿಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು
|
|
| | |
|
|
|
|
|
|
|