|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಚಂಬಲ್ ಕಣಿವೆ! ಚಂಬಲ್ ಕಣಿವೆಯ ಹೆಸರನ್ನು ಕೇಳಿದರೆ ಸಾಕು ಅಲ್ಲಿನ ಡಕಾಯಿತರ ನೆನಪಾಗಿ ಮೈ ಒಮ್ಮೆ ತಣ್ಣಗಾಗುತ್ತದೆ. ಚಂಬಲ್ ಕಣಿವೆಯ ಕ್ರೂರ ದರೋಡೆಕೋರ ಮಾನ್ ಸಿಂಗ್ನ ಮಗ ತೆಹಲ್ ಸಿಂಗ್! ಡಕಾಯಿತರಿಗೂ ತಲೆಮರೆಸಿಕೊಂಡು, ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಗೊತ್ತು ಗುರಿಯಿಲ್ಲ ಬದುಕನ್ನು ನಡೆಸುವ ಬದಲು, ಎಲ್ಲರೊಡನೆ ಒಂದಾಗಿ ನಾಗರಿಕರಾಗಿ ಸಮಾಜದಲ್ಲಿ ಬದುಕುವ ಆಸೆ! ಆದರೆ ‘ಡಕಾಯಿತರಾದ ನಮ್ಮನ್ನು ಸರ್ಕಾರ ಸ್ವಾಗತಿಸುತ್ತದೆಯೆ? ಜನಸಾಮಾನ್ಯರು ಸ್ವೀಕರಿಸುತ್ತಾರೆಯೇ?‘ ಎಂಬ ಅನುಮಾನವು ತೀವ್ರವಾಗಿ ಕಾಡಿತು. ತಮಗೆ ಹೊಸ ಬದುಕನ್ನು ನೀಡಲು ಆಚಾರ್ಯ ವಿನೋಬಾ ಭಾವೆಯವರು ಮಾತ್ರ ಸಮರ್ಥರೆಂದು ಭಾವಿಸಿ ಪತ್ರ ಬರೆದರು. ಆಚಾರ್ಯರು ಚಂಬಲ್ ಕಣಿವೆಗೆ ಬಂದರು. ತೆಹಲ್ ಸಿಂಗ್ ಹಾಗೂ ಇತರ 20 ದರೋಡೆಕೋರರು ಆಚಾರ್ಯರ ಪಾದದ ಬಳಿ ಬಂದೂಕನ್ನಿಟ್ಟು ಶರಣಾದರು. ನಾಘರಿಕ ಲೋಕದಲ್ಲಿ ಅವರು ಹೇಗೆ ತಾನೆ ಗೌರವಯುತ ಬದುಕನ್ನು ನಡೆಸಿಯಾರು? ಕೊನೆಗೆ ಆಚಾರ್ಯರೇ ತಮಗೆ ಭೂದಾನ ರೂಪದಲ್ಲಿ ಬಂದಿದ್ದ ಭೂಮಿಯನ್ನು ದರೋಡೆಕೋರರಿಗೆ ದಾನ ಮಾಡಿ ಹೊಸ ಬದುಕಿಗೆ ನಾಂದಿ ಹಾಡಿದರು!
|
ಶ್ರೀ ಎನ್ ಎಲ್ ಆನಂದ್ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಕಾರ್ಯ ಸ್ನಾತಕೋತ್ತರ ಪದವಿ, ಅನಂತಪುರದ ಕೃಷ್ಣದೇವರಾಯ ವಿ.ವಿ.ಯಿಂದ ಎಮ್.ಫಿಲ್. ಪದವಿಯನ್ನು ಪಡೆದಿದ್ದಾರೆ. ಹಲವು ಪರಿಸರದ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಸಮಾಜದ ಹುಲ್ಲು ಬೇರುಗಳೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಶ್ರೀ ಗುಂಡಪ್ಪ ದೇವಿಕೇರಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಕಾರ್ಯ ಸ್ನಾತಕೋತ್ತರ ಪದವಿ ಹಾಗೂ ತಮಿಳುನಾಡಿನ ಭಾರತಿ ದಾಸನ್ ವಿ.ವಿ.ಯಿಂದ ಎಮ್.ಫಿಲ್. ಪದವಿಯನ್ನು ಗಳಿಸಿದ್ದಾರೆ. ಇವರು ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸರ್ಕಾರಿ ಮತ್ತು ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
|
|
| |
|
|
|
|
|
|
|
|
|