Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 90   
10%
 
 
Rs. 81/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಕೊಂಕಣಿ
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 80
ಪುಸ್ತಕದ ಗಾತ್ರ : 1/8 Demy Size
ISBN : 9789392451089
ಕೋಡ್ : 003810

ಕಡುಮೌನ ಹಾಗೂ ನಿಗೂಢತೆ ತುಂಬಿಕೊಂಡು ಇರತಕ್ಕಂತಹ ದಟ್ಟ ಕಾಡಿನ ಪರಿಸರದ ಹಿನ್ನೆಲೆಯ ಕಥಾವಸ್ತುವನ್ನು ಹೊಂದಿರುವ ಈ ಕಿರುಕಾದಂಬರಿಯಲ್ಲಿ ಅಸಹಾಯಕ ಸಾಧುಪ್ರಾಣಿಗಳನ್ನು ಕೊಂದು ಮುಗಿಸುವ ಕಾಡುಪಾಣಿಗಳ ಕೂರ ಹಸಿವು, ಆಕ್ರಮವಾಗಿ ಮರ ಕಡಿದು ಸಾಗಿಸುವ ಮನುಷ್ಯನ ಹಣದ ದಾಹ, ಅಧಿಕಾರಿಗಳ ಹೊಣೆಗೇಡಿತನ, ಕಾಡಿನ ಕಾವಲುಗಾರನಾಗಿಯೂ, ದಾರುಣ ಸಾವಿಗೆ ಶರಣಾಗುವ ತನ್ನ ಜೀವನಸಂಗಾತಿಯನ್ನು ಕಾಪಾಡಿಕೊಳ್ಳಲಾಗದ ವಿನಾಯಕನ ಅಸಹಾಯಕತೆ, ತನ್ನ ಮೇಲೆ ನಡೆಯುವ ಅತ್ಯಾಚಾರವನ್ನು ವಿರೋಧಿಸಲಾಗದ ಮಿತಾಳ ಮತಿಭ್ರಾಂತ ನಿಲುವು ಇತ್ಯಾದಿ ವಿವರಗಳು ಮನಸ್ಸಿಗೆ ತಟ್ಟುವ ರೀತಿಯಲ್ಲಿ ನಿರೂಪಿತಗೊಂಡಿವೆ. ಸ್ವತಃ ಅರಣ್ಯಾಧಿಕಾರಿಯಾಗಿ ಯಲ್ಲಾಪುರ ವಿಭಾಗದಲ್ಲಿ ಕಾರ್ಯನಿರ್ವಹಿಸಿರುವ ಕಾದಂಬರಿಕಾರ ಮಹಾಬಳೇಶ್ವರ್ ಸೈಲ್ ಅವರ ಕಥನ ಶೈಲಿ ಮತ್ತು ವಿಷಯ ನಿರೂಪಣೆ, ಅವರು ನೀಡುವ ಕಾಡಿನ ಬದುಕಿನ ವಾಸ್ತವ ವಿವರಗಳು ಗಮನವನ್ನು ಸೆಳೆಯುತ್ತವೆ. ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಈ ಕಾದಂಬರಿಯನ್ನು ಆಧರಿಸಿದ "ಪಲತಡಚೊ ಮನೀಸ್" (ಆ ಕಡೆಯ ಮನುಷ್ಯ) ಕೊಂಕಣಿ ಚಲನಚಿತ್ರಕ್ಕೆ ಕೆನಡಾ ದೇಶದ ಟೊರೆಂಟೊ ಚಿತ್ರೋತ್ಸವ ಪ್ರಶಸ್ತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರೆತಿದೆ. "ಅದೃಷ್ಟ" ಕೊಂಕಣಿ ಕಾದಂಬರಿಯನ್ನು ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದವರು ಡಾ. ಗೀತಾ ಶೆಣೈ.

ಮಹಾಬಳೇಶ್ವರ ಸೈಲ್ : ಕೊಂಕಣಿಯ ಪ್ರಮುಖ ಕಥಾ ಲೇಖಕರು. ಇವರ "ತರಂಗ", "ಬಾಯನೆಟ್ ಫಾಯರಿಂಗ್", "ನಿಮಾಣೊ ಅಶ್ವತ್ಥಾಮಾ" ಸೇರಿದಂತೆ 5 ಕಥಾಸಂಕಲನಗಳು, "ಕಾಳಿಗಂಗಾ", "ಅರಣ್ಯಕಾಂಡ", "ಹಾವಠಣ", "ಯುಗಸಾಂವರ್" ಮೊದಲಾದ 10 ಕಾದಂಬರಿಗಳು, "ಸೈಮದೇವ್" ಎಂಬ ಬಾಲ ಸಾಹಿತ್ಯ ಕೃತಿ ಪ್ರಕಟವಾಗಿವೆ. ಇವರು ಮರಾಠಿಯಲ್ಲಿಯೂ ನಾಟಕ, ಕಾದಂಬರಿ, ಅನುವಾದ ಕೃತಿ ರಚನೆ ಮಾಡಿದ್ದಾರೆ. ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ, ಗೋವಾ ಕಲಾ ಅಕಾಡೆಮಿ, ಗೋವಾ ಭಾಷಾಮಂಡಳದ ಪ್ರಶಸ್ತಿಗಳು, ವಿಮಲಾ ವಿ. ಪೈ ವಿಶ್ವಕೊಂಕಣಿ ಸಾಹಿತ್ಯ ಪುರಸ್ಕಾರ ಮತ್ತು 2016ನೇ ಸಾಲಿನ "ಸರಸ್ವತಿ ಸಮ್ಮಾನ್" ದೊರೆತಿವೆ

uploads/authorimages/3124.jpg
ಲೇಖಕರ ಇತರ ಕೃತಿಗಳು
10%
ಅರಣ್ಯಕಾಂಡ : ಕಾದಂಬರಿ
ಮಹಾಬಳೇಶ್ವರ ಸೈಲ್, Mahabaleshwar Sail
Rs. 100    Rs. 90
Rs. 290    Rs. 232
Best Sellers
A to Z Nursery Rhymes (Mini Book)
Navakarnataka
Rs. 14/-   Rs. 15
ಐ ಬಿ ಎಚ್ ಕನ್ನಡ ಕನ್ನಡ ಇಂಗ್ಲಿಷ್ ನಿಘಂಟು (Paper Back)
ವೆಂಕಟಸುಬ್ಬಯ್ಯ ಜಿ, Venkatasubbaiah G
Rs. 342/-   Rs. 360
ಚಿಣ್ಣರ ಲೋಕದಲ್ಲಿ ಕಾರಂತರು : Set of 2 Vol.
ಸಂಪಾದಕರು : ಮಾಲಿನಿ ಮಲ್ಯ, Sampadakaru : Malini Malya
Rs. 315/-   Rs. 350
ಚದುರಂಗ (ಜೀವನ ಮತ್ತು ಸಾಧನೆ)
ವೇದಾ ಎಂ ಎಸ್, Veda M S
Rs. 68/-   Rs. 75

Latest Books
ಬೇಟೆಯ ಉರುಳು
ಕೆದಂಬಾಡಿ ಜತ್ತಪ್ಪ ರೈ, Kedambady Jathappa Rai
Rs. 135/-   Rs. 150
ನಾನೇಕೆ ರಾಜೀನಾಮೆ ನೀಡಿದೆ ?
ಶಶಿಕಾಂತ ಸೆಂಥಿಲ್, Shashikanth Senthil
Rs. 36/-   Rs. 40
ಬೃಹತ್ ರಾವಣ ಸಂಹಿತಾ (ಪೂರ್ವಾರ್ಧ ಮತ್ತು ಉತ್ತರಾರ್ಧ)
ಶ್ರೀಧರಾನಂದ, Sridharananda
Rs. 720/-   Rs. 800
ಸು ಬಿಟ್ಟರೆ ಬಣ್ಣ ಬ ಬಿಟ್ಟರೆ ಸುಣ್ಣ : ನಾಟಕ
ಕಾರ್ಲೋ ಕೊಲೊಡಿ, karlo kolodi
Rs. 86/-   Rs. 95


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.