Items
0
Total
  0.00 
Welcome Guest.

 
Rs. 95    
10%
Rs. 86/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 156
ಪುಸ್ತಕದ ಗಾತ್ರ : 1/8 Demy Size
ಕೋಡ್ : 174091

ಸಾಮಾಜಿಕ-ಸಾಂಸ್ಕ್ಕೃತಿಕ-ರಾಜಕೀಯ ಆಯಾಮಗಳನ್ನೂ ಮೀರಿದ ಒಂದು ಬಗೆಯ ತಾತ್ವಿಕ ಶೋಧ ಈ ಸಂಕಲನದ ಸ್ಥಾಯಿ ಗುಣವೆನ್ನಬಹುದು. ಇಲ್ಲಿ ಏನನ್ನೂ ಸ್ಥಾಪಿಸುವ ಧಾವಂತವಿಲ್ಲ. ‘ಖಚಿತತೆ’, ‘ಸ್ಪಷ್ಟತೆ’ ಎಂಬುವು ಇತ್ಯಾತ್ಮಕ, ‘ಅನಿಶ್ಚಿತತೆ’, ‘ಅಸ್ಪಸ್ಟತೆ’, ‘ದ್ವಂದ್ವ’ ಎಂಬುವು ನೇತ್ಯಾತ್ಮಕ ಎಂಬ ಗೃಹೀತವನ್ನು ಈ ಸಂಕಲನದ ಕತೆಗಳು ಒಡೆಯುವಂತಿವೆ. ಅಂದರೆ ಇಲ್ಲಿ ಲೇಖಕರು ತಾವು ಈಗಾಗಲೇ ನಂಬಿರುವ ತತ್ವಗಳಿಗೆ, ತಲುಪಿರುವ ತೀರ್ಮಾನಗಳಿಗೆ ಕೇವಲ ಕಥಾರೂಪವನ್ನು ಕೊಡುವ ಉದ್ದೇಶವನ್ನು ಇಟ್ಟುಕೊಂಡಿಲ್ಲ. ಜೀವನ ಸಂದರ್ಭಗಳ ಬಹುಮುಖಿ ಶೋಧದ ಸದ್ಯದ ತುರ್ತಿನ ಪ್ರಕ್ರಿಯೆಯಲ್ಲಿ ಹೊರಹೊಮ್ಮುವ ಸತ್ಯಗಳಿಗೆ, ಅವು ಸಮಕಾಲೀನ ರಾಜಕೀಯ ನಂಬಿಕೆಗಳು ಮತ್ತು ವರ್ತನೆಗಳಿಗೆ ಸಲ್ಲದಿದ್ದರೂ, ತೆರೆದುಕೊಳ್ಳುವ ಎದೆಗಾರಿಕೆ ಈ ಕತೆಗಳಲ್ಲಿ ಕಂಡುಬರುತ್ತದೆ... ಪರಸ್ಪರ ತದ್ವಿರುದ್ಧವೆನ್ನಿಸುವ ಹಲವು ಸಂಗತಿ-ಸಂದರ್ಭ-ಪಾತ್ರಗಳನ್ನು ಸಮಾನ ಕುತೂಹಲ ಮತ್ತು ಸಹಾನುಭೂತಿಗಳಿಂದ ಹಲವು ನೆಲೆಗಳಲ್ಲಿ ಪರಿಶೀಲಿಸಿ ಪರಿಭಾವಿಸಿಕೊಳ್ಳುತ್ತಾ ಈ ಪ್ರಕ್ರಿಯೆಯನ್ನೇ ಓದುಗರ ಮುಂದೆ ಒಡ್ಡಿಕೊಳ್ಳುವುದು ಇಲ್ಲಿನ ಕತೆಗಳ ವಿನ್ಯಾಸವೆನ್ನಬಹುದು.

ಯು.ಆರ್. ಅನಂತಮೂರ್ತಿಯವರು ಹುಟ್ಟಿದ್ದು ೧೯೩೨ರಲ್ಲಿ, ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ. ೧೯೫೬ರಲ್ಲಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ. ಎ. ಪದವಿ ಪಡೆದರು; ೧೯೬೩ರಲ್ಲಿ ಕಾಮನ್ವೆಲ್ತ್ ಫೆಲೊಶಿಪ್ ಪಡೆದು ಇಂಗ್ಲೆಂಡಿಗೆ ಹೋಗಿ ಬರ್ಮಿಂಗಂ ವಿಶ್ವವಿದ್ಯಾಲಯದಿಂದ ಪಿ.ಎಚ್ಡಿ ಗಳಿಸಿದರು; ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ, ಮೈಸೂರಿನ ರೀಜನಲ್ ಕಾಲೇಜಿನಲ್ಲಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು; ಅಮೆರಿಕದ ಅಯೋವಾ ವಿಶ್ವವಿದ್ಯಾಲಯದಲ್ಲಿ, ಟಫ್ಟ್ಸ್ ವಿಶ್ವವಿದ್ಯಾಲಯದಲ್ಲಿ, ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ, ಕಾರ್ನೆಗಿ ವಿಶ್ವವಿದ್ಯಾಲಯದಲ್ಲಿ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಫುಲ್ಬ್ರೈಟ್ ಪ್ರೊಫೆಸರ್ ಆಗಿ ಬೋಧಿಸಿದರು; ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷ, ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ನ ನಿರ್ದೇಶಕ, ಹೀಗೆ ಹಲವು ಹುದ್ದೆಗಳನ್ನು ನಿರ್ವಹಿಸಿದರು. ಸಂಸ್ಕಾರ ಅನಂತಮೂರ್ತಿಯವರ ಮೊದಲ ಕಾದಂಬರಿ. ಇದು ಭಾರತದ ಭಾಷೆಗಳಿಗಲ್ಲದೆ, ಯೂರೋಪಿನ ಹಾಗೂ ಏಷ್ಯದ ಹಲವು ಭಾಷೆಗಳಿಗೆ ಭಾಷಾಂತರಗೊಂಡಿದೆ; ಚಲನಚಿತ್ರವಾಗಿಯೂ ಪ್ರಸಿದ್ಧವಾಗಿದೆ. ಎಂದೆಂದೂ ಮುಗಿಯದ ಕಥೆ, ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಸೂರ್ಯನ ಕುದುರೆ, ಪಚ್ಚೆ ರಿಸಾರ್ಟ್ ಅವರ ಮುಖ್ಯ ಕಥಾ ಸಂಕಲನಗಳು. ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ, ಶತಮಾನದ ಕವಿ ಯೇಟ್ಸ್, ಶತಮಾನದ ಕವಿ ರಿಲ್ಕೆ ಅವರ ಕವನ ಸಂಕಲನಗಳು. ಭಾರತೀಪುರ, ಅವಸ್ಥೆ, ಭವ, ದಿವ್ಯ ಅವರ ಇತರ ಕಾದಂಬರಿಗಳು. ಪ್ರಜ್ಞೆ ಮತ್ತು ಪರಿಸರ, ಸನ್ನಿವೇಶ, ಸಮಕ್ಷಮ, ಪೂರ್ವಾಪರ, ಬೆತ್ತಲೆ ಸೇವೆ ಯಾಕೆ ಕೂಡದು?, ಯುಗಪಲ್ಲಟ, ನವ್ಯಾಲೋಕ, ವಾಲ್ಮೀಕಿಯ ನೆವದಲ್ಲಿ, ಆಚೀಚೆ, ಮಾತು ಸೋತ ಭಾರತ, ಕಾಲಮಾನ ಮೊದಲಾದ ವಿಮರ್ಶಾತ್ಮಕ ಚಿಂತನಪರ ಪ್ರಬಂಧ ಸಂಕಲನಗಳು ಪ್ರಕಟವಾಗಿವೆ. ಅನಂತಮೂರ್ತಿಯವರು ಪಡೆದಿರುವ ಪ್ರಶಸ್ತಿ ಪುರಸ್ಕಾರಗಳಲ್ಲಿ ಹಲವು ವಿಶ್ವವಿದ್ಯಾಲಯಗಳ ಗೌರವ ಡಿ.ಲಿಟ್, ಹೋಮಿಬಾಬಾ ಫೆಲೊಶಿಪ್, ಮಾಸ್ತಿ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ, ಭಾರತ ಸರ್ಕಾರ ನೀಡುವ ಪದ್ಮಭೂಷಣ ಪ್ರಶಸ್ತಿ ಮುಖ್ಯವಾದುವು. ೨೦೦೨ರಲ್ಲಿ ಅವರು ತುಮಕೂರಿನಲ್ಲಿ ನಡೆದ ೬೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

uploads/authorimages/616.jpg
ಲೇಖಕರ ಇತರ ಕೃತಿಗಳು
10%
ಯು. ಆರ್. ಅನಂತಮೂರ್ತಿ ....
ಅನಂತಮೂರ್ತಿ ಯು ಆರ್, Ananthamurthy U R
Rs. 480    Rs. 432
10%
ಶತಮಾನದ ಕವಿ ರಿಲ್ಕೆ
ಅನಂತಮೂರ್ತಿ ಯು ಆರ್, Ananthamurthy U R
Rs. 50    Rs. 45
Rs. 100    Rs. 90
Best Sellers
ಮಂಕು ಬೂ(ಮೋ)ದಿ (ನರೇಂದ್ರ ಮೋದಿ)
ಸುರೇಶ ಭಟ್ ಬಾಕ್ರಬೈಲು, Suresh Bhat Bakrabail
Rs. 72/-   Rs. 80
ಎ ಆರ್ ಕೃಷ್ಣಶಾಸ್ತ್ರಿ (ಜೀವನ ಮತ್ತು ಸಾಧನೆ)
ಶ್ರೀಧರ ಬಿ ವಿ, Sridhar B V
Rs. 54/-   Rs. 60
ನಮ್ಮ ದಿನನಿತ್ಯದ ಆಹಾರ
ಸೋಮೇಶ್ವರ ನಾ, Someshwara N
Rs. 90/-   Rs. 100
ಕೇಡಿಲ್ಲವಾಗಿ ಹಾಡುವೆ (ವಚನಗಾಯನ ಪರಂಪರೆಯ ನೆಲೆ ನಿಲುವುಗಳು)
ಜಯದೇವಿ ಜಂಗಮಶೆಟ್ಟಿ, Jayadevi Jangamashetty
Rs. 225/-   Rs. 250

Latest Books
ಆಪೋಶನ : ನೀರು ಕುಡಿಯೋರು ಒಂದ್ಸಲ ಓದ್ಕೊಳ್ರೀ (ಕಾದಂಬರಿ)
ಕಟ್ಟೆ ಗುರುರಾಜ್, Katte Gururaj
Rs. 90/-   Rs. 100
ಆರೆಸ್ಸೆಸ್ ಮತ್ತು ಬಿಜೆಪಿ - ಒಂದೇ ಹಾದಿ : ಭಿನ್ನ ಶ್ರಮ
ನೂರಾನಿ ಎ ಜಿ, Noorani A G
Rs. 135/-   Rs. 150
ಮೈಸೂರು ವಾಸುದೇವಾಚಾರ್ಯ (ವಿಶ್ವಮಾನ್ಯರು)
ಗೋಪಾಲ್ ಟಿ ಎಸ್, Gopal T S
Rs. 27/-   Rs. 30
ಕಾಳಿ ಗಂಗಾ : ಕಾದಂಬರಿ
ಮಹಾಬಳೇಶ್ವರ ಸೈಲ್, Mahabaleshwar Sail
Rs. 248/-   Rs. 275


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.