|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಲೇಖಕ ಪ್ರಕಾಶ್ ನಾಯಕ್ ಅವರ "ಅಪರಿಚಿತ" ಕೃತಿಯು ಅನುವಾದಿತ ಕಾದಂಬರಿ. ಕೃತಿಯ ಮೂಲ ಲೇಖಕ ಆಲ್ಬರ್ಟ್ ಕಮೂ. ಇಲ್ಲಿ ಮರ್ಸೂ ಪಾತ್ರವು ಕತೆಯನ್ನು ಕಟ್ಟುತ್ತಾ ಹೋಗುತ್ತದೆ. ಆಲ್ಜೀಸ್ ನಗರದಲ್ಲಿ ಮಾಮೂಲಿ ಗುಮಾಸ್ತನಾಗಿರುವ ಮರ್ಸೂನ ವಿಕ್ಷಿಪ್ತ ಕತೆಯನ್ನು ಒಣ ನಿರ್ಭಾವುತನಕ್ಕೆ, ನಗ್ನ-ನಿರಾಡಂಬರವಾದ ಗದ್ಯದಲ್ಲಿ ಕಾದಂಬರಿ ನಿರೂಪಿಸುತ್ತದೆ. ಮರ್ಸೂನ ತಾಯಿ ವೃದ್ದಾಶ್ರಮದಲ್ಲಿ ತೀರಿಕೊಂಡ ಸುದ್ದಿಯೊಂದಿಗೆ ಕಾದಂಬರಿ ಶುರುವಾದರೂ, ಮರ್ಸೂಗೆ ಅವಳು ಯಾವಾಗ ತೀರಿಕೊಂಡವಳೆಂದು ಗೊತ್ತಿಲ್ಲ. ಸತ್ತವಳ ವಯಸ್ಸು ಎಷ್ಟೆಂದು ತಿಳಿದಿಲ್ಲ. ಹೆತ್ತವಳ ಮುಖವನ್ನು ಕೊನೆಯದಾಗಿ ನೋಡಲೂ ಅಸ್ಥೆಯಿಲ್ಲ. ಹೀಗೆ, ವ್ಯಕ್ತಿಯೋರ್ವನ ದುಃಖ ತಳಮಳ ಮತ್ತು ಬದುಕಿನ ಚಿತ್ರಣಗಳನ್ನು ಈ ಕೃತಿಯು ಬಿತ್ತುತ್ತದೆ. ಮನುಷ್ಯನ ಅದಮ್ಯ ಹಂಬಲಕ್ಕೆ ಪ್ರಕೃತಿಯೂ ನಿರ್ದಯ ಉದಾಸೀನತೆಯನ್ನು ತೋರುತ್ತದೆ. ಬದುಕಿಗೊಂದು ಅರ್ಥವಿಲ್ಲ ನಿಯಮವಿಲ್ಲದಿರುವ ಕಾರಣದಿಂದಲೇ ತನಗೆ ಅನಿಸಿದಂತೆ ತೀವ್ರವಾಗಿ ಬದುಕಬೇಕು ಎನ್ನುತ್ತಾ ಸಮಾಜದ ತೋರಿಕೆಯ ರಿವಾಜುಗಳಿಗೆ ವಿರುದ್ದವಾಗಿ ಸಾಗುವ ಮರ್ಸೂ ಅನ್ಯನಾಗಿ, ಅಪರಿಚಿತನಾಗಿ ಕಾಣುತ್ತಾನೆ. ಮರ್ಸೂ ಎಷ್ಟೇ ನಿರ್ಲಿಪ್ತ-ನಿರ್ಭಾವುಕ ವ್ಯಕ್ತಿವಾದಿಯಾಗಿದ್ದರೂ ತನಗೆ ಅರಿವಿಲ್ಲದೆಯೇ ರೇಮೋನ ಸಂಬಂಧಗಳ ಗೋಜಲುಗಳಿಗೆ ಸಿಕ್ಕಿಬೀಳುವ ಸಾಲಮಾನೋನ ಕ್ಷುಲ್ಲಕ ಪ್ರಲಾಪಗಳಿಗೆ ಸಾಕ್ಷಿಯಾಗುವ ಅಸಂಗತ ವ್ಯಂಗ್ಯವನ್ನು ಕಾದಂಬರಿ ತನ್ನ ಒಳ ವಿವರಗಳಲ್ಲಿ ಕಾಣಿಸುತ್ತದೆ.
|
| | |
|
|
|
|
|
|
|
|