|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಆರ್ಯರು ಯಾರು ? ಆರ್ಯರಿಗಾಗಿ ಹುಡುಕಾಟ ನಡೆದ ಸಂದರ್ಭದಲ್ಲಿ ಹಲವು ಬಗೆಯ ಸಿದ್ಧಾಂತಗಳು ರೂಪುಗೊಂಡಿವೆ. ಆರ್ಯರನ್ನು ಗುರುತಿಸುವ ಸಮಸ್ಯೆಯನ್ನು ಬಗೆಹರಿಸಲು ಪ್ರಾಕ್ತನ ಶೋಧನ ಮಾರ್ಗ ಅನುಸರಿಸಬೇಕು ಎಂಬ ವಿಚಾರಕ್ಕೆ ಬದಲು, ಈ ಕೃತಿ ಆರ್ಯ ಸಮಸ್ಯೆಯ ಸಂಸ್ಕೃತಿಯನ್ನು ಗುರುತಿಸುವ ಮುಖ್ಯ ಚಿಹ್ನೆಗಳನ್ನು, ಅವು ಎಲ್ಲಿ, ಯಾವಾಗ ಹುಟ್ಟಿದವು ಎಂಬುದನ್ನು ವಿಶ್ಲೇಷಿಸುತ್ತದೆ. ಕುದುರೆ ಮತ್ತು ಕಡ್ಡಿಗಳುಳ್ಳ ಚಕ್ರದ ಬಳಕೆ, ಶವಸಂಸ್ಕಾರ ಪದ್ಧತಿ, ಅಗ್ನಿ ಹಾಗೂ ಸೋಮರಸದ ಆರಾಧನೆ, ಪಶುಮೇಧದ ಸಂಪ್ರದಾಯದಲ್ಲಿ ವಿಶೇಷವಾಗಿ ಆಚರಿಸಲ್ಪಟ್ಟ ಅಶ್ವಮೇಧ, ಜೀವನಾಧಾರಕ್ಕಾಗಿ ನಿರ್ಮಿಸಿಕೊಂಡ ಆರ್ಥಿಕ ವ್ಯವಸ್ಥೆ, ಪುರುಷ ಪ್ರಧಾನತೆ - ಮುಂತಾದ ಸಾಂಸ್ಕೃತಿಕ ಸೂಚಕಗಳನ್ನು ಚರ್ಚಿಸುತ್ತದೆ. ಆರ್ಯರು ಹೊರಗಿನಿಂದ ಬಂದವರಲ್ಲ. ಇಲ್ಲಿನವರೇ ಎಂಬ ಹೊಸ ಪೊಳ್ಳು ಸಿದ್ಧಾಂತವನ್ನು ಪ್ರಚಾರಗೊಳಿಸಲು ರಾಷ್ಟ್ರೀಯತೆಯ ಉಗ್ರ ಪ್ರತಿಪಾದಕರಾದ ಕೆಲವು ಮಂದಿ ಉತ್ಸಾಹ ತೋರುತ್ತಿರುವ ಈ ಸಂದರ್ಭದಲ್ಲಿ ಈ ಕೃತಿಯ ಪ್ರಸಕ್ತತೆ ಮತ್ತಷ್ಟು ಹೆಚ್ಚುತ್ತದೆ. ದಿ|| ಆರ್. ಎಸ್. ಶರ್ಮಾ ಮೂಲತಃ ಇಂಗ್ಲಿಷಿನಲ್ಲಿ ಬರೆದ ಈ ಕೃತಿಯನ್ನು ಶ್ರೀ ಎಸ್. ಗುರುದತ್ ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
|
| | |
|
|
|
|
|
|
|
|