|
|
|

| Rs. 1450/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕಲಾವಿದ ಪುಂಡಲೀಕ ಕಲ್ಲಿಗನೂರು ಮತ್ತು ಅವರ ತಂಡ ಹಾಸನ ಜಿಲ್ಲೆಯ ಹೊಯ್ಸಳ ದೇವಾಲಯಗಳಾದ ಬೇಲೂರು–ಹಳೇಬೀಡಿನ ಶಿಲ್ಪಕಲೆಯನ್ನು ಕಲಾತ್ಮಕವಾಗಿ ಸೆರೆ ಹಿಡಿದು ಈ ಪುಸ್ತಕದಲ್ಲಿ ಕೊಟ್ಟಿದೆ.
ಇಲ್ಲಿ ಕೊಡಲಾಗಿರುವ ಪ್ರತಿಯೊಂದು ಚಿತ್ರವೂ ಬಣ್ಣದಾಗಿದ್ದು ಶಿಲ್ಪಕಲೆಯ ಹಲವು ಆಯಾಮಗಳನ್ನು, ಅದು ಮುಟ್ಟಿರುವ ಎತ್ತರವನ್ನು, ಅದರ ಸೂಕ್ಷ್ಮತೆಯನ್ನು ಸೂಚಿಸುವಂತಿದೆ. ಛಾಯಾಚಿತ್ರಕ ಪುಂಡಲೀಕ ಕಲ್ಲಿಗನೂರು ತಮ್ಮ ಚಿತ್ರಗಳೂ ಸೇರಿದಂತೆ ಸಹ ಚಿತ್ರಕರಾದ ದೀಪು ಬೇಲೂರು, ಮಹಾಲಿಂಗು, ಎಂ. ವಿಶ್ವನಾಥ್, ವಿಪಿನ್ ಬಾಳಿಗಾ ಅವರ ಚಿತ್ರಗಳನ್ನು ಇಟ್ಟುಕೊಂಡು ಈ ಸಂಪುಟವನ್ನು ಸಂಪಾದಿಸಿದ್ದಾರೆ. ಇವರೆಲ್ಲರ ಅಪಾರ ಶ್ರಮ ಇಲ್ಲಿ ಪ್ರತಿ ಪುಟಗಳಲ್ಲಿ ಕಾಣುತ್ತದೆ. ಜೊತೆಗೆ ಆ ಶಿಲ್ಪಗಳ ಕುರಿತ ವಿವರಣೆಯೂ ಈ ಸಂಪುಟದಲ್ಲಿದೆ.
ಬೇಲೂರಿನ ಚೆನ್ನಕೇಶವ, ನಾಟ್ಯರಾಣಿ ಶಾಂತಲೆ, ರತಿ–ಮನ್ಮಥರು, ವಿಷ್ಣು ಶಿಲ್ಪಗಳು, ಶಿಲಾಬಾಲಿಕೆಯರ ಶಿಲ್ಪಗಳ ಹಾಗೂ ಹಳೇಬೀಡಿನ ಹೊಯ್ಸಳೇಶ್ವರ ಮತ್ತು ಶಾಂತಲೇಶ್ವರ ಜೋಡಿ ದೇವಾಲಯಗಳು, ಅಲ್ಲಿನ ದೇವತೆಗಳು, ಮಿಥುನ ಶಿಲ್ಪಗಳು, ರಾಮಾಯಣ–ಮಹಾಭಾರತ ಕಥಾಪಟ್ಟಿಕೆ ಮತ್ತಿತರ ಚಿತ್ರಗಳನ್ನು ಇಲ್ಲಿ ಕೊಡಲಾಗಿದೆ.
ಈ ದೇವಾಲಯಗಳ ಎಲ್ಲ ಕಡೆಯೂ ಇರುವ ಶಿಲ್ಪಗಳು ಪುರಾಣ, ಇತಿಹಾಸ, ಧರ್ಮ, ಕಲೆಗಳ ಮೂರ್ತು ರೂಪವಾಗಿವೆ. ದ್ರಾವಿಡ–ನಾಗರ ಶೈಲಿಯ ಬೆರಕೆ ಈ ಶಿಲ್ಪಗಳು.ಇಲ್ಲಿನ ಚಿತ್ರಗಳ ಹಿಂದಿರುವುದು ಕಲಾತ್ಮಕ ದೃಷ್ಟಿಕೋನ ಮಾತ್ರವಲ್ಲ, ಅವುಗಳ ಸೌಂದರ್ಯವನ್ನು ಕನ್ನಡಿಗರಿಗೆ ವಿವರವಾಗಿ ತೋರುವ ಮಾರ್ಗದರ್ಶಿ ಗುಣವೂ ಇದೆ. ಈ ಶಿಲ್ಪಕಲೆಯ ಪ್ರತಿಯೊಂದು ಭಾಗವನ್ನೂ ಪುಂಡಲೀಕ ಮತ್ತು ಅವರ ತಂಡ ಸೆರೆಹಿಡಿಯಲು ಪ್ರಯತ್ನಿಸಿದೆ. ಈಗಾಗಲೇ ಈ ದೇವಾಲಯಗಳ ಅಸಂಖ್ಯ ಚಿತ್ರಗಳನ್ನು ಅನೇಕರು ಚಿತ್ರಿಸಿದ್ದಾರೆ ಮತ್ತು ಅವನ್ನು ದಾಖಲಿಸಿದ್ದಾರೆ. ಅವುಗಳ ನಡುವೆ ಇದು ಎಲ್ಲಿ ನಿಲ್ಲುತ್ತದೆ ಎಂಬುದನ್ನು ಪರಿಣತರು ನಿರ್ಧರಿಸಬಹುದು.
|
| |
|
|
|
|
|
|
|
|