|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ: ಇಲ್ಲಿ ಸಂಗ್ರಹಿಸಿರುವ ಬಹುತೇಕ ಪ್ರಬಂಧಗಳು ಹಿಂದೂ ಕೋಮುವಾದದ ಬೆಳವಣಿಗೆಯ ಇತ್ತೀಚಿನ ಸಂದರ್ಭದಲ್ಲಿ ರಚಿತವಾದುವು. ಈ ಕೋಮುವಾದ ಹೇಗೆ ತ್ನ್ನದೇ ಬೆಳವಣಿಗೆಗೆ ಪರಿಕರವಾಗಿ ಇಅತಿಹಾಸ ಮತ್ತು ಸಂಸ್ಕೃತಿ ಕ್ಷೇತ್ರವನ್ನು ಬಳಸಿಕೊಳ್ಳುತ್ತದೆ ಎನ್ನುವುದುನ್ನು ಈ ಲೇಖನಗಳು ಅವಲೋಕಿಸುತ್ತವೆ.
ಭಾರತದ ಇತಿಹಾಸ ಅಂದರೆ ಹಿಂದೂ ಇತಿಹಾಸ, ಭಾರತದ ಸಂಸ್ಕೃತಿ ಅಂದರೆ ಹೊಂದೂ ಸಂಸ್ಕೃತಿ ಎನ್ನುವಂತೆ ಬಿಂಬಿಸುತ್ತದೆ ಈ ಕೋಮುವಾದ. ಈ ದೇಶ ಕೇವಲ ಹಿಂದೂಗಳದ್ದು; ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಅವರ ಬೆಂಬಲಕ್ಕೆ ನಿಂತ ಕಮ್ಯುನಿಸ್ಟರು ಇವರಿಗೆ ರಾಷ್ಟ್ರದ ಈ ಕಲ್ಪನೆಯಲ್ಲಿ ಸ್ಥಾನವಿಲ್ಲ ಎಂದು ಕೋಮುವಾದಿಗಳು ವಾದಿಸುತ್ತಾರೆ.
ಈ ಪುಸ್ತಕದಲ್ಲಿನ ಪ್ರಬಂಧಗಳು ಸಾಂಸ್ಕೃತಿಕತೆ ಮತ್ತು ರಾಷ್ಟ್ರೀಯತೆಯ ನಡುವಿನ ನಂಟು ಎಂಥದು ಎಂದು ಸಂಶೋಧಿಸುತ್ತವೆ. ಆಚರ್ಚೆಯ ಮೂಲಕ ಭಾರತದ ಪ್ರಜಾಪ್ರಭುತ್ವಕ್ಕೆ ಪೋಷಣಿ ನೀಡುವ ಸಂಯುಕ್ತ ಸಂಸ್ಕೃತಿಯ ಸ್ವರೂಪವನ್ನು ಸ್ಪಷ್ಟಗೊಳಿಸಲು ಯತ್ನಿಸುತ್ತವೆ.
|
ಪ್ರೊ. ಕೆ. ಎನ್ ಪಣಿಕ್ಕರ್ (೧೯೩೬) ಅವರು ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿ ಹಾಗೂ ಸಮಾಜ ವಿಜ್ಞಾನ ವಿಭಾಗದ ಡೀನ್ ಆಗಿ ನಿವೃತ್ತರಾಗಿದ್ದಾರೆ. ಕೇರಳ ದ ಶ್ರೀ ಶಂಕರಾಚರ್ಯ ವಿಶ್ವವಿದ್ಯಾಲಯದ ಕುಲಪಾತಿಗಳಾಗಿದ್ದರು. ಕೇರಳ ರಾಜ್ಯ ಉನ್ನತ ಶಿಕ್ಷಣ ಸಮಿತಿಯ ಉಪಾಧ್ಯಕ್ಷರಾಗಿದ್ದಾರು. ಈಹ ಕೇರಳ ರಾಜ್ಯ ಹಿಸ್ಟಾರಿಕಲ್ ರೀಸರ್ಚ್ ಕೌನ್ಸಲ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವ್ರಿ ಇತಿಹಾಸ ಕ್ಷೇತ್ರದಲ್ಲಿ ನೀಡಿರುವ ಆಪಾರ ಕೊಡುಗೆ, ಅವರ ಪ್ರಮುಖ ಅಸಕ್ತಿ ಭಾರತದ ಸಾಂಸ್ಕೃತಿಕ ಮತ್ತು ಬೌದ್ಧಿಕ ಇತಿಹಾಸದ ಕ್ಷೇತ್ರವನ್ನು ಕುರಿತದ್ದು. ಕೋಮುವಾದದಿಂದ, ರಾಷ್ಟ್ರೀಯ ಬಹುಸಂಸ್ಕೃತಿಯ ಒಕ್ಕೂಟಕ್ಕೆ ಧಕ್ಕೆಯಾಗುತ್ತಿರುವ ಬಗ್ಗೆ ತೀವ್ರವಾದ ಮಿಮರ್ಶೆ ನಡೆಸಿದ್ದಾರೆ.
|
|
| | |
|
|
|
|
|
|
|