|
|

| Rs. 350 | 10% |
Rs. 315/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬಹು ಧರ್ಮಗಳ, ಬಹು ಸಂಸ್ಕೃತಿಗಳ, ಬಹು ಜಾತಿಗಳ, ಬಹು ಭಾಷೆಗಳ ಬಹುಜನರ ಈ ದೇಶವನ್ನು ಒಂದೆಡೆಗೆ ತಂದು ‘ನೀವು ಭಾರತೀಯರು‘ ಎಂದು ಜವಾಬ್ದಾರಿಯುತರನ್ನಾಗಿಸುವ ‘ಪವಿತ್ರ ಗ್ರಂಥ‘ ಈ ದೇಶದಲ್ಲಿ ಯಾವುದಾದರು ಇದ್ದರೆ, ಅದು ನಮ್ಮ ಸಂವಿಧಾನವೊಂದೆ. ವಿವಿಧ ವೈಶಿಷ್ಟ್ಯಗಳನ್ನು ಹೊಮ್ದಿ ವಿವಿಧ ವೈಶಮ್ಯಗಳಲ್ಲೇ ಉಸಿರಾಡುವ ಈ ದೇಶಕ್ಕೆ ಸಂವಿಧಾನವೊಂದನ್ನು ಕಟ್ಟಿಕೊಡುವುದೆಂದರೆ ಅದು ಸಾಮಾನ್ಯರ ಕೈಯಲ್ಲಿ ಆಗದ ಕೆಲಸ. ಆದ್ದರಿಂದಲೇ ಅದರ ಜವಾಬ್ದಾರಿಯನ್ನು ಈ ದೇಶ ಕಂಡ ಅಸಾಮಾನ್ಯ ಅನುಭಾವಿ ಎನಿಸಿದ ಡಾ. ಬಿ.ಆರ್. ಅಂಬೇಡ್ಕರ್ರವರಿಗೆ ವಹಿಸಿದ್ದು. ಅಪಾರ ದೇಶಪ್ರೇಮಿ, ಅತೀವ ಜನಪರ ಕಾಳಜಿಯುಳ್ಳ ಬಾಬಾಸಾಹೇಬರು ಸಂವಿಧಾನದ ಆಶಯಗಳ ಬಗ್ಗೆ ಮಾತನಾಡುತ್ತಾ ‘ಸಂವಿಧಾನ ಎಷ್ಟೇ ಶ್ರೇಷ್ಟವಾದ ಆಶಯವನ್ನು ಹೊಂದಿರಲಿ, ಅದನ್ನು ಅನುಷ್ಠಾನಕ್ಕೆ ತರುವ ಸರ್ಕಾರ ಧ್ಯೇಯ ನಿಷ್ಠವಾಗಿಲ್ಲದಿದ್ದರೆ ಅಂಥ ಸಂವಿಧಾನದಿಂದ ಏನೂ ಪ್ರಯೋಜನವಾಗುವುದಿಲ್ಲ. ಸರ್ಕಾರ ನಡೆಸುವವರು ಧ್ಯೇಯ ನಿಷ್ಠರಾಗಿದ್ದರೆ ತಕ್ಕಮಟ್ಟಿಗೆ ಸಂವಿಧಾನದಿಂದಲೂ ಉತ್ತಮ ಸಾಧನೆಯನ್ನು ಸಾಧಿಸಬಹುದು..‘ ಎನ್ನುತ್ತಾರೆ.
ಭಾರತದ ಈ ಸಂವಿಧಾನ ಅತ್ಯುತ್ತಮವಾದುದೆಂದು ಇಡೀ ಜಗತ್ತೇ ಒಪ್ಪಿಕೊಂಡಿದೆ. “ಇದನ್ನು ಯತಾವತ್ತಾಗಿ ಜಾರಿಗೊಳಿಸಿದರೆ ಇನ್ನು ಕೇವಲ ಇಪ್ಪತ್ತು ವರ್ಷಗಳಲ್ಲಿ ಭಾರತ ಪ್ರಭುದ್ದ ಭಾರತವಾಗುತ್ತದೆ..“ ಎನ್ನುವ ಡಾ.ಅಂಬೇಡ್ಕರರು ಈಗ ಜೀವಂತವಾಗಿದ್ದಿದ್ದರೆ ಈಗಿನ ಸ್ಥಿತಿಗತಿ ಕಂಡು ಅದೆಷ್ಟು ನೋವು ಅನುಭವಿಸುತ್ತಿದ್ದರೊ? ಈ ಸಂವಿಧಾನ ಪ್ರಭಾವಶಾಲಿಯಾಗಿ ಜಾರಿಗೆ ಬಾರದಿದ್ದರೂ ಅದೇ ನಮ್ಮ ಏಕೈಕ ಆಶಾಕಿರಣ.
|
| |
|
|
|
|
|
|
|
|