|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
’ಕನ್ನಡ ಕಾವ್ಯಲೋಕದ ಗಾರುಡಿಗ’ ಎಂದೇ ಖ್ಯಾತರಾಗಿದ್ದ ದ.ರಾ. ಬೇಂದ್ರೆ ಅವರು ೧೯೫೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿದರು. ಅವರು ಕನ್ನಡ ಸಾಹಿತ್ಯಲೋಕ ಕಂಡ ಅಪರೂಪದ ಕವಿ; ಕನ್ನಡಿಗರನ್ನು ನಿಜವಾಗಿಯೂ ಭಾವಲೋಕದ ರಸಯಾತ್ರೆಗೆ ಕೊಂಡೊಯ್ದದ ಕವಿ. ಕಷ್ಟ-ಕಾರ್ಪಣ್ಯ, ನೋವು-ನಿಟ್ಟುಸಿರುಗಳ ನಡುವೆಯೇ ಅರಳಿದ ಬದುಕು ಅವರದು. ಆದರೂ “ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ!” ಎಂಬ ಆದರ್ಶವನ್ನು ಮೆರೆದವರು. “ರಸವೇ ಜನನ, ವಿರಸ ಮರಣ, ಸಮರಸವೇ ಜೀವನ” ಎಂಬ ಅವರ ಸಂದೇಶವಂತೂ ಚಿರಸ್ಮರಣೀಯವಾಗಿದೆ. ಬೇಂದ್ರೆಯವರ ಒಡನಾಡಿಯಾಗಿ, ಸುಮಾರು ಐದು ದಶಕಗಳ ಕಾಲ ಅವರೊಡನೆ ನಿಕಟವಾದ ಸಂಬಂಧವನ್ನಿರಿಕೊಂಡಿದ್ದ ಹಿರಿಯ ಲೇಖಕರಾದ ಶೀ ಎನ್ಕೆ. ಕುಲಕರ್ಣಿ ಈ ಪುಸ್ತಕದ ಲೇಖಕರು.
|
| |
|
|
|
|
|
|
|
|
|