|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
1. ದಿನಕ್ಕೊಂದು ಕಥೆ - 12 ಸಂಪುಟಗಳು: ೩೬೫ ಕಥೆಗಳು. `ದಿನಕ್ಕೊಂದು ಕಥೆ` ಎಂಬ ಕಥಾಮಾಲಿಕೆ ಶಿಶುಸಾಹಿತ್ಯಕ್ಕೆ ಅನುಪಮಾ ಅವರ ಅನುಪಮ ಕೊಡುಗೆಯಾಗಿದೆ. ದಿನಕ್ಕೊಂದು ಕಥೆ ಕನ್ನಡದಲ್ಲಿ ಪುರಾಣ ಕಥೆಗಳನ್ನು, ಇತರ ದೇಶಗಳ ಕಥೆಗಳನ್ನು, ಜಾನಪದ ಕಥೆಗಳನ್ನು ಒಟ್ಟುಗೂಡಿಸಿ ಸರಳವಾಗಿ ಹೆಣೆಯಲಾದ ಸಂಪುಟಗಳ ಮಾಲಿಕೆ. ವರ್ಷವಿಡೀ ದಿನಕ್ಕೊಂದು ಕಥೆಯಂತೆ ಓದಿಕೊಂಡು ಹೋಗಬಲ್ಲಂತೆ 365 ಕಥೆಗಳಿವೆ.
``ಹೇಗೂ ನೂರಾರು ಕಥೆ ಬರೀತೀರಿ. ಮುನ್ನೂರ ಅರವತ್ತೈದೇ ಬರೆದ್ಬಿಡಿ. ದಿನಕ್ಕೊಂದು ಕಥೆಯಾಗ್ತದೆ`` ಎಂದರು ಶ್ರೀ ನಿರಂಜನ, ಈ ರೀತಿ `ದಿನಕ್ಕೊಂದು ಕಥೆ`ಯ ಉದಯವಾಯಿತು` ಎಂದು ಈ ಕತೆಗಳಲ್ಲಿನ ಮುನ್ನುಡಿಯಲ್ಲಿ ಡಾ. ಅನುಪಮ ನಿರಂಜನ ಬರೆದಿದ್ದಾರೆ. ಇವರ ಅನೇಕ ಕೃತಿಗಳನ್ನು ಮೈಸೂರಿನ ಡಿ.ವಿ.ಕೆ. ಮೂರ್ತಿ ಪ್ರಕಟಿಸಿದ್ದಾರೆ.
|
ಡಾ. ಅನುಪಮಾ ನಿರಂಜನ (ಮೇ ೧೭, ೧೯೩೪ - ಫೆಬ್ರುವರಿ ೧೫, ೧೯೯೧) ಅವರು ಕನ್ನಡ ನಾಡಿನಲ್ಲಿ ಪ್ರಸಿದ್ಧ ಬರಹಗಾರ್ತಿ ಯಾಗಿ, ವೈದ್ಯರಾಗಿ ಜನಾನುರಾಗಿಗಳಾಗಿ ಅಪಾರವಾದ ಹೆಸರು, ಪ್ರಸಿದ್ಧಿ ಪಡೆದು ಅನುಪಮ ಬಾಳ್ವೆ ನಡೆಸಿದವರು.
ಅನುಪಮಾ ನಿರಂಜನ ಅವರು ೧೯೩೪ರ ಮೇ ೧೭ರಂದು ತೀರ್ಥಹಳ್ಳಿಯಲ್ಲಿ ಜನಿಸಿದರು. ಅನುಪಮಾ ಅವರಿಗೆ ತಂದೆ-ತಾಯಿ ಕೊಟ್ಟ ಹೆಸರು ವೆಂಕಟಲಕ್ಷ್ಮಿ. ವೃತ್ತಿಯಿಂದ ಅವರು ವೈದ್ಯರು. ಕುಟುಂಬದವರ ವಿರೋಧವನ್ನು ಎದುರಿಸಿ, ಕನ್ನಡದ ಮತ್ತೊಬ್ಬ ಪ್ರಮುಖ ಸಾಹಿತಿ ನಿರಂಜನ (ಕುಳಕುಂದ ಶಿವರಾವ್) ಅವರನ್ನು ಅಂತರ್ಜಾತೀಯ ವಿವಾಹವಾಗಿ ಸಮಾಜಕ್ಕೆ ಆದರ್ಶವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು - ತೇಜಸ್ವಿನಿ ನಿರಂಜನ ಮತ್ತು ಸೀಮಂತಿನಿ ನಿರಂಜನ. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಜೊತೆಜೊತೆಗೇ ಅವರು ಕನ್ನಡದಲ್ಲಿ ಸಾಹಿತ್ಯರಚನೆಯನ್ನೂ ಮಾಡಿದರು. ಅವರೊಬ್ಬ ಜನಪ್ರಿಯ ಲೇಖಕಿ. ಅವರ ಕಾದಂಬರಿಗಳು ಜನಪ್ರಿಯ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಹರಿದು ಬಂದವು. ಕಡೆಯ ದಿನಗಳಲ್ಲಿ ಅನುಪಮಾ ನಿರಂಜನ ಅವರು ಕ್ಯಾನ್ಸರ್ ಕಾಯಿಲೆಯಿಂದ ನರಳುತ್ತಿದ್ದರೂ, ತಮ್ಮ ಜೀವಿತದ ಕೊನೆಯವರೆಗೆ ಸಾಹಿತ್ಯ ಸೇವೆಯನ್ನು ನಿಲ್ಲಿಸಲಿಲ್ಲ.
ಸಾಹಿತ್ಯಕವಾಗಿ, ವೃತ್ತಿಪೂರ್ವಕವಾಗಿ ಮತ್ತು ಸಾಮಾಜಿಕವಾಗಿ ಮಹತ್ವದ ಸಾಧನೆಗಳನ್ನು ಮಾಡಿದ ಡಾ. ಅನುಪಮಾ ನಿರಂಜನ ಅವರು ಫೆಬ್ರುವರಿ ೧೫, ೧೯೯೧ರ ವರ್ಷದಲ್ಲಿ ನಿಧನರಾದರು.
|
|
| |
|
|
|
|
|
|
|
|
|