|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ರಾಮೇಶ್ವರಂ ದ್ವೀಪದ ಅಲ್ಪಸಂಖ್ಯಾತರ ಬಡ ಹುಡುಗನೊಬ್ಬ ಭಾರತ ಗಣರಾಜ್ಯದ ರಾಷ್ಟ್ರಾಧ್ಯಕ್ಷರಾಗುವುದು, ದೇಶದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಮುಖ್ಯಸ್ಥರಾಗುವುದು, ಮೂರು ಸೇನೆಗಳ ಮಹಾ ದಂಡನಾಯಕರಾಗುವುದು ಒಂದು ಪವಾಡ ಅಲ್ಲವೇ ಅಲ್ಲ. ಇಂತಹದ್ದು ಭಾರತ ದೇಶದಲ್ಲಿ ಮಾತ್ರ ಘಟಿಸಲು ಸಾಧ್ಯ. ಭಾರತರತ್ನ ಡಾ|| ಎ.ಪಿ.ಜೆ. ಅಬ್ದುಲ್ ಕಲಾಮ್ ಕೇವಲ ತಮ್ಮ ಶುದ್ಧ ಪ್ರತಿಭೆ ಹಾಗೂ ಸಾಮರ್ಥ್ಯದ ಆಧಾರದ ಮೇಲೆ ವಿಶ್ವಮಾನ್ಯರಾಗಿರುವುದು ಎಲ್ಲರೂ ಹೆಮ್ಮೆ ಪಡಬಹುದಾದ ಸಂಗತಿ.
ವಿಜ್ಞಾನಿಯಾಗಿ, ಉತ್ತಮ ಆಡಳಿತಾಧಿಕಾರಿಯಾಗಿ, ಲೇಖಕನಾಗಿ, ಕವಿಯಾಗಿ, ರುದ್ರವೀಣೆಯ ಪರಿಣತನಾಗಿ ಎಲ್ಲಕಿಂತ ಮಿಗಿಲಾಗಿ ಬಾಲ್ಯದಲ್ಲಿಯೇ ಜಾತಿ ಭೇದಗಳನ್ನು ಮೀರಿ ವಿಶ್ವಮಾನ್ಯರಾಗಿ, ಭಾರತರತ್ನವಾಗಿ 40ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಪಡೆದ ಕಲಾಮ್ ತಮ್ಮ ಬದುಕಿನಲ್ಲಿಯೇ ದಂತಕಥೆಯಾದರು. ಇಂತಹ ಮಹಾನ್ ವ್ಯಕ್ತಿಯ ಬದುಕು-ಸಾಧನೆಯ ಚಿತ್ರವನ್ನು ಶ್ರೀಮತಿ ಅಸ್ಮಾ ಅನ್ಸಾರಿಯವರು ಈ ಪುಸ್ತಕದಲ್ಲಿ ಸೊಗಸಾಗಿ ಸೆರೆಹಿಡಿದಿದ್ದಾರೆ.
|
| |
|
|
|
|
|
|
|
|