|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸಾವಯವ ಕೃಷಿ ತಜ್ಞ ನಾಡೋಜ ಡಾ. ಎಲ್. ನಾರಾಯಣರೆಡ್ಡಿಯವರದು ಗಾಂಧೀ ತತ್ತ್ವದ ಹಿನ್ನೆಲೆಯಲ್ಲಿ ಅತ್ಯಂತ ಸರಳ, ಸ್ವಾವಲಂಬಿ ಹಾಗೂ ಆದರ್ಶ ಜೀವನವನ್ನು ನಡೆಸುತ್ತಿರುವರು. ಮಳೆಯಾಶ್ರಿತ ಭೂಮಿಯಲ್ಲಿ ಎಕರೆಗೆ 23 ಕ್ವಿಂಟಾಲ್ ರಾಗಿ ಬೆಳೆದರು. ಕ್ಷೌರದಂಗಡಿಯ ಕೂದಲನ್ನು ತಂದು ಕಾಡುಹಂದಿಗಳನ್ನು ಹತೋಟಿಗೆ ತಂಡರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ 150ಕ್ಕೂ ಹೆಚ್ಚು ಕೃಷಿ ಪ್ರಬಂಧಗಳನ್ನು ಮಂಡಿಸಿದರು. ಪ್ರತಿ ತಿಂಗಳು 15-20 ರೈತರಿಗೆ ಕೃಷಿ ತರೆಬೇತಿಯನ್ನು ನೀಡುತ್ತಿರುವರು. ವರ್ಷಕ್ಕೆ ಕನಿಷ್ಠ 50 ವಿದೇಶಿ ವಿದ್ಯಾರ್ಥಿಗಳಿಗೆ ಕೃಷಿ ಮಾರ್ಗದರ್ಶನವನ್ನು ಮಾಡುತ್ತಿರುವರು. ಸುಮಾರು 30 ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವನ್ನು ನೀಡುತ್ತಿರುವರು. ತಮ್ಮ ಎರಡನೆಯ ಮಗನಿಗೆ ಬಾಲ ವಿಧವೆಯೊಂದಿಗೆ ಮದುವೆ ಮಾಡಿದರು. ಸುಮಾರು 25,000 ಗಿಡಗಳನ್ನು ನೆಟ್ಟು ಮರಗಳನ್ನಾಗಿ ಮಾಡಿರುವರು. ದೇಶ ವಿದೇಶಗಳಿಗೆ ಭೇಟಿ ನೀಡಿ, ಪಂಚವಾರ್ಷಿಕ ಯೋಜನೆಯ ಸಲಹಾ ಸಮಿತಿಯ ಸದಸ್ಯರಾಗಿ ಇಂದಿಗೂ ದಿನಕ್ಕೊಂದು ಗಿಡವನ್ನು ನೆಡುತ್ತಿರುವರು.
|
ಶ್ರೀ ಎನ್ ಎಲ್ ಆನಂದ್ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಕಾರ್ಯ ಸ್ನಾತಕೋತ್ತರ ಪದವಿ, ಅನಂತಪುರದ ಕೃಷ್ಣದೇವರಾಯ ವಿ.ವಿ.ಯಿಂದ ಎಮ್.ಫಿಲ್. ಪದವಿಯನ್ನು ಪಡೆದಿದ್ದಾರೆ. ಹಲವು ಪರಿಸರದ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಸಮಾಜದ ಹುಲ್ಲು ಬೇರುಗಳೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಶ್ರೀ ಗುಂಡಪ್ಪ ದೇವಿಕೇರಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಕಾರ್ಯ ಸ್ನಾತಕೋತ್ತರ ಪದವಿ ಹಾಗೂ ತಮಿಳುನಾಡಿನ ಭಾರತಿ ದಾಸನ್ ವಿ.ವಿ.ಯಿಂದ ಎಮ್.ಫಿಲ್. ಪದವಿಯನ್ನು ಗಳಿಸಿದ್ದಾರೆ. ಇವರು ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸರ್ಕಾರಿ ಮತ್ತು ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
|
|
| |
|
|
|
|
|
|
|
|
|