Items
0
Total
  0.00 
Welcome Guest.

 
Rs. 200    
10%
Rs. 180/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 248
ಪುಸ್ತಕದ ಗಾತ್ರ : 1/8 Demy Size
ISBN : 9788173023316
ಕೋಡ್ : 001586

ಎರವಲು ಪದಗಳು ಕನ್ನಡದ ಸ್ವಭಾವವನ್ನೂ ಸ್ವರೂಪವನ್ನೂ ಹೇಗೆ ಪಡೆಯುತ್ತವೆ ಎಂಬುದನ್ನು ತಿಳಿದಾಗ ಅಚ್ಚರಿಯಾಗುತ್ತದೆ. ಸಾಮಾನ್ಯವಾಗಿ ಜನರು ತಮ್ಮ ಧ್ವನ್ಯಂಗಗಳಿಗೆ ಹೊಂದಿಕೊಳ್ಳುವಂತೆ ಹೊಸ ಶಬ್ದಗಳನ್ನು ಉಚ್ಚರಿಸಿ, ಅವುಗಳಿಗೆ ಸ್ವರೂಪವನ್ನೂ ಉಚ್ಚಾರಣೆಯನ್ನೂ ನಿರ್ಧರಿಸುತ್ತಾರೆ. ಅವು ಹಾಗೇ ನಿಂತುಬಿಡುತ್ತವೆ. ಹೀಗೆ ಮಾಡುವವರು ಭಾ‍ಷಾಶಾಸ್ತ್ರಜ್ಝರಾಗಲೀ, ವಿದ್ವಾಂಸರಾಗಲೀ ಇಲ್ಲ. ಹೀಗೆ ಹಲವು ಭಾಷೆಗಳಿಂದ ಬಂದ ಎರವಲು ಪದಗಳ ಮೂಲವನ್ನು ಶೋಧಿಸಲು ಮಾಡಿದ ಪ್ರಯತ್ನವೇ ಈ ಎರವಲು ಪದಕೋಶ.

ವಿದ್ಯ, ವಿದ್ವತ್ತು, ಸೃಜನಶೀಲ ಪ್ರತಿಭೆ ಮತ್ತು ವಿನಯಗಳಿಂದ ಕೂಡಿದ ಹಳೆಯ ತಲೆಮಾರಿನ ಸಾರಸ್ವತಲೋಕದ ವಿಶಿಷ್ಟ ಮಾದರಿಗೆ ಒಂದು ಜೀವಂತ ನಿದರ್ಶನ ಪ್ರೊ|| ಜಿ. ವೆಂಕಟಸುಬ್ಬಯ್ಯನವ್ರು. ವಂಶವಾಹಿಯಾಗಿ ವಿದ್ವತ್ತನ್ನು ಬಳುವಳಿಯಾಗಿ ಪಡೆದ ವೆಂಕಟಸುಬ್ಬಯ್ಯನವ್ರು ಸ್ವಂತ ಅಧ್ಯಯನ, ಬೋಧನೆ, ಸಂಶೋಧನೆಗಳಿಂದ ಗುಪ್ತಗಾಮಿನಿಯಾಗಿ ರಕ್ತದೊಳಗಿದ್ದ ಈ ಆಜ್ಯವನ್ನು ಹೊತ್ತಿಸಿ, ಪ್ರಜ್ವಲಿಸುವಂತೆ ಮಾಡಿ ಅದನ್ನು ಶಿಖೆಯಲ್ಲಿ `ವಿದ್ಯಾಲಂಕಾರ`ವಾಗಿ ಮುಡಿದವರು; ಸಾವಿರಾರು ಜನ ಶಿಷ್ಯರಿಗೆ ಸಾಹಿತ್ಯಪಿಪಾಸುಗಳಿಗೆ ಜ್ಞಾನದೀವಿಗೆಯಾದವರು. ವೆಂಕಟಸುಬ್ಬಯ್ಯನವರ ಪ್ರತಿಭೆಯ ಆಯಾಮಗಳು ಹಲವಾರು. ಈ ಸೃಜನಶೀಲ ಪ್ರತಿಭೆಗೆ ವಿದ್ವತ್ತಿನ ಸ್ಪರ್ಶವೂ ಕೂಡಿದಾಗ ಹಲವಾರು ಕುಡಿಗಳು ಕೊನರಿದವು. ಇಂಥ ಕುಡಿಗಳಲ್ಲಿ ಕನ್ನಡ ನಿಘಂಟು ದಾಂಗುಡಿ ಇಟ್ಟು ಒಂದು ಮಹಾವೃಕ್ಷವಾಗಿಯೇ ಬೆಳೆದು ಇಂದು ಕನ್ನಡಿಗರ ಮನೆಮನೆಗಳಲ್ಲಿ ಬೆಳಗುತ್ತಿದೆ. ಎಂ.ಎ. ಪದವಿಯಲ್ಲಿ ಸುವರ್ಣಪದಕ ವಿಜೇತರಾಗಿ ಕಾಲೇಜಿನಿಂದ ಹೊರಬಂದ ವೆಂಕಟಸುಬ್ಬಯ್ಯನ್ಬವರು ನಲವತ್ತು ವರ್ಷಗಳ ಕಾಲ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ದುಡಿದು ಅದಕ್ಕೆ ಹೆಗಲೆಣೆಯಾಗಿಯೇ ಕನ್ನಡ ನುಡಿಯ ಕೆಲಸಗಳಲ್ಲಿ ಅಹರ್ನಿಶಿ ಕ್ರಿಯಾಶೀಲರಾಗಿ ಯುವಪೀಳಿಗೆಗೆ ಮೇಲ್ಪಂಕ್ತಿಯಾಗಿ ನಿಂತವರು. ಕನ್ನಡ ನುಡಿಯ ಅರ್ಥ, ಅಂತರಾರ್ಥಗಳನ್ನು, ಅದರ ಆಜು-ಬಾಜುಗಳನ್ನು, ಆಳ-ವಿಸ್ತಾರಗಳನ್ನು ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲ ಕೆಲವೇ ವಿದ್ವಾಂಸರಲ್ಲಿ ವೆಂಕಟಸುಬ್ಬಯ್ಯನವರು ಅಗ್ರಗಣ್ಯರು. ಚಲನಶೀಳವಾದ ಭಾಷೆಯ ಜೊತೆಗೇ ಲೇಖಕನಾದವನು ಬೆಳೆಯುತ್ತಾನೆ ಎಂಬುದಕ್ಕೆ ಸ್ಫಟಿಕಸದೃಶ ನಿದರ್ಶನ ವೆಂಕಟಸುಬ್ಬಯ್ಯನವರು. ಪ್ರತಿಭಾನ್ವಿತನ ಕೈಯಲ್ಲಿ ಎಷ್ಟು ಸಮರ್ಥವಾಗಿ ವಾಚ್ಯಾರ್ಥ ಧ್ವನ್ಯರ್ಥಗಳಿಂದ ಕೂಡಿ ಹೇಗೆ ಮಾತು ಮಾಣಿಕ್ಯವಾಗಬಲ್ಲದು ಎಂಬುದನ್ನು ಅಂಗೈನೆಲ್ಲಿಯಂತೆ ಸ್ಪಷ್ಟವಾಗಿ ತೆರೆದಿಟ್ಟು ಅವರು ನಿಮ್ಮನ್ನು ವಿಸ್ಮಯಗೊಳಿಸುತ್ತಾರೆ. ಎಂದೇ ಅವರ `ಇಗೋ ಕನ್ನಡ` ನಮ್ಮ ಅತ್ಯಂತ ಜನಪ್ರಿಯ ಅಂಕಣ. ಹದಿನೈದು ವರ್ಷಗಳಷ್ಟು ಹಿಂದಿನಿಂದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ನುಡಿಮಾಲೆಯಾಗಿ ಕಂಗೊಳಿಸುತ್ತಾ ಸಹಸ್ರಾರು ಜನರ ಭಾಷಾಜ್ಞಾನದ ಎಲ್ಲೆಗಳನ್ನು ವಿಸ್ತರಿಸುತ್ತಿರುವ ಈ ಅಂಕಣದ ಬರಹಗಳು ಈ ಪುಸ್ತಕ ರೂಪದಲ್ಲಿ ಬಂದು ಕನ್ನಡಿಗರ ಮನೆಗಳನ್ನು ಅಲಂಕರಿಸಲಿರುವುದು, ಮನಗಳನ್ನು ಬೆಳಗಿಸಲಿರುವುದು ನಮಗೆ ಹೆಮ್ಮೆಯ ವಿಚಾರ, ಸಂತೋಷದ ಸಂಗತಿ.

ಲೇಖಕರ ಇತರ ಕೃತಿಗಳು
10%
ಕುಮಾರವ್ಯಾಸನ ಅಂತರಂಗ : ....
ವೆಂಕಟಸುಬ್ಬಯ್ಯ ಜಿ, Venkatasubbaiah G
Rs. 145    Rs. 131
Rs. 350    Rs. 315
10%
ಕನ್ನಡ ಕ್ಲಿಷ್ಟಪದ ಕೋಶ ....
ವೆಂಕಟಸುಬ್ಬಯ್ಯ ಜಿ, Venkatasubbaiah G
Rs. 225    Rs. 203
10%
ಇಗೋ ಕನ್ನಡ ಸಂಪುಟ ....
ವೆಂಕಟಸುಬ್ಬಯ್ಯ ಜಿ, Venkatasubbaiah G
Rs. 275    Rs. 248
Best Sellers
ಶರಣ ಚರಿತಾಮೃತ (Hard Cover)
ಸಿದ್ಧಯ್ಯ ಪುರಾಣಿಕ, Siddhaiah Puranika
Rs. 540/-   Rs. 600
Mathematics Can Be Fun
Perelman Y
Rs. 315/-   Rs. 350
ಭಾರತೀಯ ವಿಜ್ಞಾನದ ಹಾದಿ - ಒಂದು ಅವಲೋಕನ
ರಾಮಕೃಷ್ಣ ಜಿ, Ramakrishna G
Rs. 270/-   Rs. 300
Physics Formulae - English
Shivam
Rs. 32/-   Rs. 35

Latest Books
ವ್ಲಾದಿಮೀರ್ ಲೆನಿನ್ (ವಿಶ್ವಮಾನ್ಯರು)
ಮುರಳಿ ಕೃಷ್ಣ ಮ ಶ್ರೀ, Murali Krishna M S
Rs. 23/-   Rs. 25
ಮಸಾಲೆ ದೋಸೆಗೆ ಕೆಂಪು ಚಟ್ನಿ
ಜೋಗಿ, Jogi
Rs. 135/-   Rs. 150
ಊರು ಕಂಡಂತೆ ಅನಂತ ಮೂರ್ತಿ
ಸಂಪಾದನಾ : ಪಿ ಶಾಂತಾರಾಮ ಪ್ರಭು
Rs. 270/-   Rs. 300
ಬಿಕರಿಯ ಮಾಲುಗಳು : ಬಾನುಲಿ ನಾಟಕಗಳು
ಸಾರಾ ಅಬೂಬಕ್ಕರ್, Sara Aboobakar
Rs. 135/-   Rs. 150


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.