Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಗಿರಿಜಾ ಪರಸಂಗ (ಗಿರಿಜಾ ಲೋಕೇಶ್ ಆತ್ಮ ಕಥನ)
ಲೇಖಕರು: ಜೋಗಿ, Jogi

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 350    
10%
Rs. 315/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಉತ್ತಮ
ಪುಟಗಳು : 300
ಪುಸ್ತಕದ ಗಾತ್ರ : 1/8 Demy Size
ISBN : 9789387192973
ಕೋಡ್ : 1126828

"ಗಿರಿಜಾ ಪರಸಂಗ" ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಅವರ ಜೀವನ ಚರಿತ್ರೆ. ರಂಗಭೂಮಿಯಿಂದ ಬಣ್ಣದ ಜಗತ್ತಿಗೆ ಪಾದಾರ್ಪಣೆ ಮಾಡಿ, ಕಿರುತೆರೆ, ಹಿರಿತೆರೆಗಳಲ್ಲೂ ಅತ್ಯುತ್ತಮ ಕಲಾವಿದೆಯಾಗಿ ಇಂದಿಗೂ ಜನರ ಕಣ್ಣಲ್ಲಿ ಗಿರಿಜಮ್ಮನಾಗಿ, ಇಡೀ ಕುಟುಂಬವನ್ನು ಕಲೆಯ ತವರಾಗಿಸಿರುವ ಗಿರಿಜಾ ಲೋಕೇಶ್ ಅವರ ಅರ್ಥಪೂರ್ಣ ಬದುಕಿನ ವಿವರಗಳನ್ನು ಲೇಖಕ ಜೋಗಿಯವರು ನಿರೂಪಿಸಿದ್ದಾರೆ. ಹಿರಿಯ ಕಲಾವಿದ ಲೋಕೇಶ್ ಅವರೊಂದಿಗೆ ಬದುಕು ಕಟ್ಟಿಕೊಂಡು ಕಲಾಸೇವೆಯನ್ನು ಮುಂದುವರೆಸಿದ ಗಿರಿಜಮ್ಮನ ಬಣ್ಣದ ನೆನಪುಗಳು ಕನ್ನಡ ರಂಗಭೂಮಿ ಮತ್ತು ಕಲಾಜಗತ್ತಿನ ಸುಂದರ ನೆನಪುಗಳನ್ನು ಜೀವಂತಗೊಳಿಸುತ್ತವೆ. ಕಲೆಯೊಂದಿಗೆ ಸಾಗಿದ ಗಿರಿಜಾ ಲೋಕೇಶ್ ಅವರ ಬದುಕಿನ ವಿವರಣಗಳನ್ನು ಅರ್ಥವತ್ತಾಗಿ ಚಿತ್ರಿಸಿರುವ ಕೃತಿ "ಗಿರಿಜಾ ಪರಸಂಗ"

ಜೋಗಿ ಎಂಬ ಹೆಸರಿನಿಂದ ಜನಪ್ರಿಯರಾಗಿರುವವರು ಲೇಖಕ ಗಿರೀಶ್ ರಾವ್ ಹತ್ವಾರ್. ಇವರ ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹುಟ್ಟಿದ್ದು ನವೆಂಬರ್ ೧೬. ೧೯೬೫. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ, ಕನ್ನಡದ ಹೊಸಕಾಲದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದು ಹಲವಾರು ಕತೆ, ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅಂಕಣ ಬರಹಗಳಿಂದಲೂ ಪ್ರಸಿದ್ಧಿಯಾಗಿದ್ದಾರೆ. ಧಾರಾವಾಹಿ, ಸಿನೆಮಾಗಳ ಗೀತಸಾಹಿತ್ಯ, ಚಿತ್ರಕಥೆ ಸಂಭಾಷಣೆ ರಚನೆಯಲ್ಲೂ ತೊಡಗಿಕೊಂಡಿದ್ದಾರೆ. ವೃತ್ತಿಯಿಂದ ಪತ್ರಕರ್ತರಾಗಿದ್ದು ಪ್ರಸ್ತುತ ಪುರವಣಿ ಸಂಪಾದಕರಾಗಿದ್ದಾರೆ.

uploads/authorimages/989.jpg
ಲೇಖಕರ ಇತರ ಕೃತಿಗಳು
10%
ನಾಳೆ ಬಾ
ಜೋಗಿ, Jogi
Rs. 95    Rs. 86
10%
ಗುರುವಾಯನಕೆರೆ : ಒಂದು ....
ಜೋಗಿ, Jogi
Rs. 120    Rs. 108
10%
ನನ್ನ ತೋಟದ ನೀಲಿ ....
ಜೋಗಿ, Jogi
Rs. 115    Rs. 104
10%
ಒಂದಾನೊಂದು ಊರಲ್ಲಿ : ....
ಜೋಗಿ, Jogi
Rs. 100    Rs. 90
Best Sellers
ಭಾರತೀಯ ಕಾವ್ಯಮೀಮಾಂಸ
ತೀ ನಂ ಶ್ರೀಕಂಠಯ್ಯ (ತೀ ನಂ ಶ್ರೀ), Sreekantaiya T N (T M Sri)
Rs. 234/-   Rs. 260
ನನ್ನ ಊರು ಪುಣ್ಯಭೂಮಿ (ಅಣ್ಣಾ ಹಜಾರೆ ಆತ್ಮಕಥೆ)
ಅಣ್ಣಾ ಹಜಾರೆ, Anna Hazare
Rs. 158/-   Rs. 175
ಮಧುರ ಮಧುರವೀ ಮಂಜುಳಗಾನ. ಸಂಚಿಕೆ - 1 (ಕನ್ನಡ ಚಿತ್ರಗೀತೆಗಳು)
ಗುರುರಾಜ್, Gururaj
Rs. 475/-   Rs. 500
ಬುದ್ಧ ಅಂಬಿಗ ಮತ್ತು ದಡ (ಬುದ್ಧ ಸಾಹಿತ್ಯ ಮಾಲೆ - 19)
ರಾಜಶೇಖರ್ ಸಿ ಎಚ್, Rajashekar C H
Rs. 135/-   Rs. 150

Latest Books
ಇಂಡಿಯಾದೊಳಗೊಂದು ಇಣುಕು : ಪ್ರವಾಸಾನುಭವಗಳ ಸಂಕಲನ
ಡಾ. ಜೆ. ಕೆ. ರಮೇಶ, Dr. J K Ramesh
Rs. 144/-   Rs. 160
ಆಮ್ಲ, ಪ್ರತ್ಯಾಮ್ಲ ಮತ್ತು ಲವಣಗಳು
ವೇಣುಗೋಪಾಲ್ ಆರ್, Venugopal R
Rs. 99/-   Rs. 110
ಅವರವರ ಭಾವಕ್ಕೆ : ಅಂಕಣ ಬರಹಗಳು
ಪ್ರಕಾಶ್ ರೈ, Prakash Rai
Rs. 135/-   Rs. 150
ನಾನು ಕಸ್ತೂರ್ : ಕಸ್ತೂರಬಾ ಜಿವನ ಕಥನ
ಅನುಪಮಾ ಎಚ್ ಎಸ್, Anupama H S
Rs. 198/-   Rs. 220


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.