Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಗೋಪಾಲಕೃಷ್ಣ ಪೈ (ಜೀವನ ಮತ್ತು ಸಾಧನೆ)
ಲೇಖಕರು: ಗೀತಾ ಶೆಣೈ , Geetha Shenoy

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Demy Size
ISBN : 9788184673197
ಕೋಡ್ : 002051

೨೦೧೧ರಲ್ಲಿ ತಮ್ಮ ಸ್ವಪ್ನ ಸಾರಸ್ವತ ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದ ಶ್ರೀ ಗೋಪಾಲಕೃಷ್ಣ ಪೈ ಅವರು ಒಂದು ವಿಶಿಷ್ಟ ವಿಕ್ರಮವನ್ನೇ ಮೆರೆದಿದ್ದಾರೆ. ತಾವು ಬರೆದಿರುವ ಒಂದೇ ಒಂದು ಕಾದಂಬರಿಗೇ ಈ ಪ್ರಶಸ್ತಿಯನ್ನು ಗಳಿಸಿದ ಹಿರಿಮೆ ಅವರದಾಗಿದೆ. ಸ್ವಪ್ನ ಸಾರಸ್ವತ ಕೂಡಲೇ ಸಾಹಿತ್ಯಾಸಕ್ತರ ಗಮನವನ್ನು ಸೆಳೆದುದೇ ಅಲ್ಲದೆ, ೨೦೧೦ರಲ್ಲಿಯೇ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೂ ಪಾತ್ರವಾಯಿತು. ೨೦೧೧ನೆಯ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಸೂರೆಗೊಂಡಿತು. ಸ್ವಪ್ನ ಸಾರಸ್ವತ ವೈಶಿಷ್ಟ್ಯಪೂರ್ಣ ಸಮುದಾಯವೊಂದರ ಇತಿಹಾಸವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ, ಅದಕ್ಕೆ ಅವಿಸ್ಮರಣೀಯವೂ, ಅಭೂತಪೂರ್ವವೂ ಆದ ಸಾಹಿತ್ಯರೂಪವನ್ನು ನೀಡಿ ಕನ್ನಡ ಕಾದಂಬರಿಗಳ ಇತಿಹಾಸಕ್ಕೇ ಒಂದು ಹೊಸ ಆಯಾಮವನ್ನು ಮೂಡಿಸಿದ್ದು. ಭಾರತೀಯ ಸಾಹಿತ್ಯದಲ್ಲಿಯೇ ಇದು ಈ ಬಗೆಯ ಏಕೈಕ ಸಾಹಿತ್ಯಿಕ ಸಾಧನೆ. ೨೦೦೯ರಿಂದ ೨೦೧೨ರ ನಡುವಣ ಅವಧಿಯಲ್ಲಿ ಐದು ಆವೃತ್ತಿಗಳನ್ನು ಕಂಡಿರುವ ಈ ಕೃತಿ ಕನ್ನಡಿಗರ ಸಾಹಿತ್ಯ ಪ್ರೀತಿಗೆ, ವಿಮರ್ಶಾಲೋಕದ ರುಚಿಶುದ್ಧಿಗೂ ನಿದರ್ಶನವಾಗಿದೆ.

ಡಾ|| ಗೀತಾ ಶೆಣೈ ತಮ್ಮ ಬರವಣಿಗೆಯಲ್ಲಿ ಸೌಂದರ್ಯ ಮತ್ತು ಲಾಲಿತ್ಯವನ್ನು ಕಾಪಿಟ್ಟುಕೊಂಡವರು. ಕನ್ನಡದಲ್ಲಿ ಎಂ.ಎ., ಪಿಎಚ್.ಡಿ. ಪದವೀಧರರು. ಕನ್ನಡ, ಇಂಗ್ಲಿಷ್, ಹಿಂದಿ, ತುಳು, ಕೊಂಕಣಿ ಭಾಷೆಗಳನ್ನು ಬಲ್ಲವರು. ಸಂಶೋಧನೆ, ಭಾಷಾಂತರ ಬರೆಹಗಳಂತಹ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಉತ್ಸಾಹ. ಕರ್ನಾಟಕದ ಅನೇಕ ಪತ್ರಿಕೆಗಳಲ್ಲಿ ಇವರ ನೂರಕ್ಕು ಹೆಚು ಬರೆಹಗಳು ಪ್ರಕಟವಾಗಿವೆ. ಹಲವಾರು ಸಂಸ್ಥೆಗಳಲ್ಲಿ ಗೌರವ ಹುದ್ದೆ, ಸದಸ್ಯತ್ವ ಹೊಂದಿದ್ದವರು. ಸಾಹಿತ್ಯ ಸಂಪದ ಮಾಲಿಕೆಯ ‘ಗೋಪಾಲಕೃಷ್ಣ ಪೈ’, ಡಾ|| ಜ್ಯೋತ್ಸ್ನಾ ಕಾಮತ್ ಕೊಂಕಣಿಯಲ್ಲಿ ಬರೆದ ‘ಕಮಲಾದೇವಿ ಚಟ್ಟೋಪಾಧ್ಯಾಯ : ಬದುಕು-ಸಾಧನೆ’ಯನ್ನು ಕನ್ನಡಕ್ಕೆ ಅನುವಾದಿಸಿದ್ದು ಅವು ನವಕರ್ನಾಟಕದಿಂದ ಪ್ರಕಟವಾಗಿವೆ. ಇವರ ಸುಮಾರು 31 ಕೃತಿಗಳು ಇದುವರೆಗೆ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಕಮಲಾದೇವಿ ಚಟ್ಟೋಪಾಧ್ಯಾಯ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 25    Rs. 23
10%
ಕಸ್ತೂರಬಾ ಗಾಂಧಿ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 30    Rs. 27
10%
ಆನಿ ಬೆಸೆಂಟ್ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 25    Rs. 23
10%
ಆರ್ ಕಲ್ಯಾಣಮ್ಮ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 25    Rs. 23
Best Sellers
ವಾಯುಪುತ್ರರ ಶಪಥ
ಅಮೀಶ್, Amish
Rs. 342/-   Rs. 380
ನಾವು ಕಟ್ಟಿದ ಸ್ವರ್ಗ
ಶಿವರಾಮ ಕಾರಂತ ಕೆ, Shivarama Karantha K
Rs. 126/-   Rs. 140
ಮಹಾದರ್ಶನ
ದೇವುಡು, Devudu
Rs. 225/-   Rs. 250
ಚೀನಾದ ಚಿಟ್ಟೆ ಕಥೆಗಳು (ಕಿರಿಯರ ಕಥಾಮಾಲೆ)
ಬೇದ್ರೆ ಮಂಜುನಾಥ, Bedre Manjunatha
Rs. 45/-   Rs. 50

Latest Books
ತಿಳಿದು ತಿನ್ನೋಣ ಬನ್ನಿ... : ಸಿರಿಧಾನ್ಯಗಳ ಪ್ರಯೋಜನ ಮತ್ತು ಮಹತ್ವ ಅರಿತು
ಡಾ. ಖಾದರ್, Dr. Khadar
Rs. 135/-   Rs. 150
ಕನ್ನಡ ಛಂದಸ್ಸು (ಟಿ ಎಸ್ ಗೋಪಾಲ್)
ಗೋಪಾಲ್ ಟಿ ಎಸ್, Gopal T S
Rs. 36/-   Rs. 40
ಹಂಸ ಏಕಾಂಗಿ : ಕಬೀರನ ಪದಗಳು
ಕೇಶವ ಮಳಗಿ, Keshava Malagi
Rs. 158/-   Rs. 175
ತನು ಬಿಂದಿಗೆ : ಕತೆಗಳು
ನಾಗರಾಜ ಕೋರಿ, Nagaraj Kori
Rs. 63/-   Rs. 70


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.