Items
0
Total
  0.00 
Welcome Guest.

 
Rs. 1200    
15%
Rs. 1020/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 1032
ಪುಸ್ತಕದ ಗಾತ್ರ : 1/4 Crown Size
ಕೋಡ್ : 125489

ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ
ಮೊದಲು ಸಹಸ್ರಮಾನದ ಶಾಸನಗಳ ಪ್ರಮಾಣ ಸಂಚಲನವನ್ನುಂಟು ಮಾಡುವಂತಹದು, ಏಕೆಂದರೆ ಇಷ್ಟೊಂದು ಸಂಖ್ಯೆಯ ಹಳಗನ್ನಡ ಶಾಸನಗಳಿರುವ ಕಲ್ಪನೆ ಈ ಮೊದಲು ನಮಗಿರಲಿಲ್ಲ. ಇನ್ನಾವ ದೇಶೀಭಾಷೆ ಅಥವಾ ಪ್ರದೇಶದಲ್ಲೂ ಈ ಪ್ರಮಾಣದ ಶಾಸನಗಲಿಲ್ಲವೆಂದಾಗ ಇವುಗಳ ಬಗ್ಗೆ ಆಸಕ್ತಿ ಇನ್ನೂ ಹೆಚ್ಚಾಗುವುದು. ಶಾಸನ ಇತಿಹಾಸದಲ್ಲಿ ತಮಿಳರಿಗೆ ವಿಶಿಷ್ಟ ಸ್ಥಾನವಿರುವುದು ನಿಜ. ಆದರೆ ಅದನ್ನವರು ಸಾಧಿಸಿಕೊಂಡದ್ದು ಎರಡನೇ ಸಹಸ್ರಮಾನದಲ್ಲಿ, ಮೊದಲ ಸಹಸ್ರಮಾನದಲ್ಲಲ್ಲ, ಎಂಬುದು ಮತ್ತೊಂದು ಹೊಸ ವಿಷಯ. ಈ ಎಲ್ಲ ಕಾರಣಗಳಿಂದಾಗಿ ಆರಂಭ ಕಾಲದ ದೇಶೀ ಅಕ್ಷರ ಇತಿಹಾಸದಲ್ಲಿ ಕೆಳದಖ್ಖಣಕ್ಕೆ, ವಿಶೇಷವಾಗಿ ಕರ್ನಾಟಕಕ್ಕೆ, ವಿಶಿಷ್ಟ ಸ್ಥಾನವಿರುವುದಂತೂ ಪ್ರಶ್ನಾತೀತ.

ಸಂಸ್ಕೃತೀಕರಣ ಮತ್ತು ಬ್ರಾಹ್ಮಣೀಕರಣ ಪ್ರಕ್ರಿಯೆ ಅವ್ಯಾಹತ ಹಾಗೂ ಸಾರ್ವತ್ರಿಕವಾಗಿ ಸಾಗಿತ್ತೆಂಬ ಸಿದ್ಧಾಂತವನ್ನು ಕೆಳದಖ್ಖಣದ ಅಪಾರ ಪ್ರಮಾಣದ ಆಕರಗಳು ಬೆಂಬಲಿಸುವುದಿಲ್ಲವೆಂಬುದಂತೂ ನಿಜ. ಮೊದಲ ಸಹಸ್ರಮಾನ ಕಾಲದ ಸಂಸ್ಕೃತ ಮತ್ತು ಕನ್ನಡ ಭಾಷಾ ವ್ಯವಹಾರಗಳ ಗೊತ್ತುಗುರಿಗಳೂ ಭಿನ್ನ ಭಿನ್ನವಾಗಿದ್ದವೆನಿಸುವುದು. ಸಂಸ್ಕೃತ ಭಾಷಾ ವ್ಯವಹಾರವು ಬಹುತೇಕ ಒಂದು ಸಮಾಜದ ಒಂದೇ ಬಗೆಯ ಕೊಡು ಕೊಳ್ಳುವಿಕೆಗೆ ಸೀಮಿತವಾಗಿದ್ದರೆ, ಕನ್ನಡ ಭಾಷಾ ವ್ಯವಹಾರವು ಬ್ರಾಹ್ಮಣರನ್ನೊಳಗೊಂಡು ಸಮಾಜದ ಎಲ್ಲಾ ವರ್ಗಗಳ – ಶೂದ್ರಾದಿ ಶುದ್ರರಾದ ಮಾದಿಗ ಮತ್ತು ಚರ್ಮಕಾರರನ್ನೊಳಗೊಂಡು- ಬಹುಮಖೀ ಕೊಡು ಕೊಳ್ಳುವಿಕೆಗೆ ವಿಸ್ತರಿಸಿಕೊಂಡಿತು. ಇಷ್ಟೇ ಸೋಜಿಗದ ಸಂಗತಿ ಎಂದರೆ ಈ ಕಾಲದ ಎರಡು ಸಹಸ್ರ ಕನ್ನಡ ಶಾಸನಗಳಲ್ಲಿ ಒಮ್ಮೆಯೂ `ವರ್ಣ` ಪದ ಬಳಕೆಯಾಗದಿರುವುದು, ‘ಜಾತಿ’ ಪದವಿದ್ದರೂ ಅದು `ಜಾತ ಜನನ`, ಎಂಬ ಅರ್ಥದಲ್ಲಿ ಬಂದಿರುವುದು, `ಕುಲ` ಪದವನ್ನು ವಂಶ ಅಥವಾ ಮನೆತನ (ಯಾದವ ಕುಲ) ಎಂಬ ಅರ್ಥದಲ್ಲಿ ಮಾತ್ರ ಬಳಸಿರುವುದು. ಅಂದರೆ ವೈದಿಕ ಸಾಮಾಜಿಕ ಶ್ರೇಣೀಕರಣಕ್ಕೆ ಸರಿಹೊಂದುವ ಅರ್ಥದಲ್ಲಿ ಈ ಮೂರೂ ಪದಗಳು ಬಳಕೆಯಾಗಿಲ್ಲವೆನ್ನಬಹುದು. ಇದರಿಂದಾಗಿ ಈವರೆಗೂ ನಾವು ನಿರ್ಮಿಸಿಕೊಂಡು ನಂಬುತ್ತಾ ಬಂದಿರುವ ವರ್ಣವ್ಯವಸ್ಥೆಯು ಗ್ರಾಂಥಿಕ-ಜ್ಞಾನವೋ ಅಥವಾ ವಾಸ್ತವ ವ್ಯವಸ್ಥೆಯೋ? ಎಂಬ ಭೂತಾಕಾರದ ಪ್ರಶ್ನೆಯೊಂದು ಉದ್ಭವಿಸಿದೆ. ಷ ಶೆಟ್ಟರ್ (ಪ್ರಸ್ತಾವನೆಯಿಂದ )

ಹೆಸರಿಗೆ ತಕ್ಕಂತೆ ನಮ್ಮ ತೆಲೆಮಾರಿನ ಪ್ರಾಧ್ಯಾಪಕ ಪರಿವಾರದಲ್ಲಿ `ಶ್ರೇಷ್ಠರು` ಎನಿಸಿದರು ಪ್ರೊಫೆಸರ್ ಷ. ಶೆಟ್ಟರ್ ಬೋಧನೆಯಂತೆ ಬರಹದ ಮೂಲಕವೂ ಪ್ರಸಿದ್ಧರು. ಇವರ ಇತ್ತಿಚೀನ ಬರವಣಿಗೆಯಾಗಿರುವ ‘ಹಳಗನ್ನಡ ಲಿಪಿ, ಲಿಪಿಕಾರ, ಲಿಪಿವ್ಯವಸಾಯ ‘ವು ಮಹತ್ವಾಕಾಂಕ್ಷೆಯ ಕೃತಿಯಾಗಿದೆ; ಶೀರ್ಷಿಕೆಯನ್ನೂ ಮೀರಿ ಬೆಳೆದ ಅಭ್ಯಾಸವಾಗಿದೆ.

ಕಳೆದ ನೂರು ವರ್ಷಗಳಿಂದ ಕನ್ನಡ ನಾಡಿನ ಶಾಸನಗಳನ್ನು ಬಳಸಿಕೊಂಡು ಅನೇಕ ವಿದ್ವಾಂಸರು ಕೃತಿ ರಚಿಸಿದ್ದುಂಟು. ಇವೇ ಶಾಸನಗಳನ್ನು ಬಳಸಿಕೊಂಡು ಪ್ರೊ ಶೆಟ್ಟರ್ ಇಲ್ಲಿ ಭಿನ್ನ ಫಲಿತಾಂಶ ಪ್ರಕಟಿಸಿದ್ದಾರೆ. ನಿಜವಾದ ಸಂಶೋಧಕನಿಗೆ ಹೊಸ ಆಕರ ಬೇಕೆಂದೇನೂ ಇಲ್ಲ. ತನ್ನ ವ್ಯಾಖ್ಯಾನ ಸಾಮರ್ಥ್ಯದಿಂದ ಅವನು ಹಳೆಯ ಆಕರಗಳಿಂದಲೇ ಹೊಸ ಸಂಶೋಧನೆಯಲ್ಲಿ ಅಧ್ಯಯನ ವಿಧಾನಕ್ಕೆ ( methodology) ಮಹತ್ವದ ಸ್ಥಾನವಿದೆ. ಈವರೆಗೂ ಕನ್ನಡ ಶಾಸನಗಳ ಅಧ್ಯಯನದಲ್ಲಿ ಸಾಂಪ್ರದಾಯಿಕ ಸಂಶೋಧನ ವಿಧಾನವೊಂದು ರೂಢಿಯಲ್ಲಿದ್ದಿತು. ಇದಕ್ಕೆ ಭಿನ್ನವೆಂಬಂತೆ ಆಕರನಿಷ್ಠ – ವಿಶ್ಲೇಷಣನಿಷ್ಟ-ವ್ಯಾಖ್ಯಾನನಿಷ್ಠ, ಇನ್ನೂ ಮುಖ್ಯವಾಗಿ ಕಾಲದೇಶಗಳನ್ನು ಗಮನಿಸುತ್ತ ಮುಂದುವರಿದ `ಸಂಖ್ಯಾನಿಷ್ಠ` ಶೋಧದ ಅಸಾಂಪ್ರದಾಯಿಕ ಹಾಗೂ ಅಪೂರ್ವ ಸಂಶೋಧನ ವಿಧಾನವೊಂದು ಇಲ್ಲಿ ತೆರೆದುಕೊಂಡಿದೆ. `ನಾವು ಶಿಲ್ಪವನ್ನು ಅಭ್ಯಾಸಿಸಿದ್ದೇವೆ, ಶಿಲ್ಪಗಳನ್ನು ಮರೆತಿದ್ದೇವೆ; ಲಿಪಿಯನ್ನು ಅಭ್ಯಸಿಸಿದ್ದೇವೆ, ಲಿಪಿಕಾರರನ್ನು ಮರೆತಿದ್ದೇವೆ` ಎಂದು ಮೇಲಿಂದ ಮೇಲೆ ಎಚ್ಚರಿಸುತ್ತ ಬಂದಿರುವ ಪ್ರೊ ಶೆಟ್ಟರ್, ಈಗ ಮೊದಲ ಸಹಸ್ರಮಾನದ ನಮ್ಮ ಶಾಸನ ಲಿಪಿಕಾರರನ್ನು ಕುರಿತು ಇನ್ನೊಬ್ಬರು ಕೈಯಿಡದಂತೆ ಪೂರ್ಣ ಅಭ್ಯಾಸವನ್ನು ಪೂರೈಸಿದ್ದಾರೆ.

ಪ್ರೊ. ಷ. ಶೆಟ್ಟರ್ ಅವರು ಜನಿಸಿದ್ದು ೧೯೩೫ ನೇ ಇಸವಿಯಲ್ಲಿ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ನಲ್ಲಿ ಉನ್ನತ ವ್ಯಾಸಂಗ ಪಡೆದ ಇವರು ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳೆಗನ್ನಡ ಕಾವ್ಯ ಕುರಿತು ಸುಮಾರು ೨೭ ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕುವಲ್ಲಿ ಇವರ ಸಂಶೋಧನೆಗಳ ಕೊಡುಗೆ ಬಹಳ ಇದೆ.

ಶ್ರೀಯುತರು ದೇಶ-ವಿದೇಶಗಳಲ್ಲಿ ಮನ್ನಣೆ ಪಡೆದಿರುತ್ತಾರೆ. ಕೇಂಬ್ರಿಜ್, ಹಾರ್ವರ್ಡ್, ಹೈಡಲ್ ಬರ್ಗ್, ಅಥೆನ್ಸ್, ಲೈಡನ್, ಮಾಸ್ಕೋ ವಿಶ್ವವಿದ್ಯಾನಿಲಯಗಳಲ್ಲಿ ಕೆಲಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಲವಾರು ರಾಜ್ಯ ಹಾಗು ರಾಷ್ಟ್ರ ಪ್ರಶಸ್ತಿಗಳು ಇವರಿಗೆ ಸಂದಿವೆ. ಇವರು ಭಾರತೀಯ ಇತಿಹಾಸ ಅನುಸಂಧಾನ ಪರಿಷತ್, ದಕ್ಷಿಣ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ ಹಾಗು ಕರ್ನಾಟಕ ಇತಿಹಾಸ ಅನುಸಂಧಾನ ಪರಿಷತ್ ಗಳ ಸರ್ವಾಧ್ಯಕ್ಷ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ವಿಶ್ವಸಂಸ್ಕೃತ ಸಮ್ಮೇಳನದ ವಿಭಾಗೀಯ ಅಧ್ಯಕ್ಷ ಸ್ಥಾನದ ಗೌರವವನ್ನೂ ಇವರು ಪಡೆದಿದ್ದಾರೆ.
೧೯೬೦-೯೬: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬೋಧನೆ
೧೯೭೮-೯೫: ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕತ್ವ
೧೯೯೬-೯೯: ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಅಧ್ಯಕ್ಷ ಸ್ಥಾನ
೨೦೦೨-೧೦: ಬೆಂಗಳೂರಿನ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ನಲ್ಲಿ ಡಾ. ಎಸ್. ರಾಧಾಕೃಷ್ಣನ್ ಪ್ರಾಧ್ಯಾಪಕತ್ವ ಹಾಗು ೨೦೧೦ ರಿಂದ ಇದೇ ಸಂಸ್ಥೆಯಲ್ಲಿ ಎಮೆರಿಟಸ್ ಪ್ರಾಧ್ಯಾಪಕ ಸ್ಥಾನ[೧]
೨೦೦೫ ರಿಂದ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಕೇಂದ್ರ ದಕ್ಷಿಣ ಭಾರತ ಶಾಖೆಯ ಗೌರವ ನಿರ್ದೇಶಕತ್ವ[೨].

uploads/authorimages/611.jpg
ಲೇಖಕರ ಇತರ ಕೃತಿಗಳು
10%
ಹಳಗನ್ನಡ ಲಿಪಿ, ....
ಶೆಟ್ಟರ್ ಷ, Shettar S
Rs. 600    Rs. 540
10%
ಸಾವನ್ನು ಸ್ವಾಗತಿಸಿ, ಸಾವನ್ನು ....
ಶೆಟ್ಟರ್ ಷ, Shettar S
Rs. 750    Rs. 675
10%
ಕರ್ನಾಟಕ - ಬಹುತ್ವದ ....
ಶೆಟ್ಟರ್ ಷ, Shettar S
Rs. 75    Rs. 68
10%
ಪ್ರಾಕೃತ ಜಗದ್ವಲಯ : ....
ಶೆಟ್ಟರ್ ಷ, Shettar S
Rs. 250    Rs. 225
Best Sellers
ಹಾಸ್ಯ ಸಂಭ್ರಮ
ಸಂಪಟೂರು ವಿಶ್ವನಾಥ್, Sampaturu Vishwanath
Rs. 18/-   Rs. 20
ತಂತು (Paper Back)
ಭೈರಪ್ಪ ಎಸ್ ಎಲ್, SL Byrappa
Rs. 784/-   Rs. 825
ಆರೋಗ್ಯ ದರ್ಪಣ
ಪಂಡಿತ ಶಿವಕುಮಾರ ಸ್ವಾಮಿ, Pandit Shivakumar Swami
Rs. 360/-   Rs. 400
ನೀಲಿಬಾನಿನಲ್ಲಿ ಕೆಂಪು ಸೂರ್ಯ : ಜೆಎನ್ಯೂ (JNU) ಆಜಾದಿ ಭಾಷಣಗಳು
ಚೇತನಾ ತೀರ್ಥಹಳ್ಳಿ, Chetana Teerthahalli
Rs. 90/-   Rs. 100

Latest Books
ದಿಲ್ಲಿ ಡೈರಿಯ ಪುಟಗಳು
ರೇಣುಕಾ ನಿಡಗುಂದಿ, Renuka Nidagundi
Rs. 126/-   Rs. 140
ತುದಿ ಮಡಚಿಟ್ಟ ಪುಟ : ಕತೆಗಳು
ಸುನಂದಾ ಪ್ರಕಾಶ ಕಡಮೆ, Sunanda Prakasha Kadame
Rs. 135/-   Rs. 150
ಏಕತಾರಿ-ಸಣ್ಣ ಕಥೆಗಳು
ಚನ್ನಪ್ಪ ಕಟ್ಟಿ, Channappa katti
Rs. 108/-   Rs. 120
ಯುದ್ಧ : ಅಂತರರಾಷ್ಟ್ರೀಯ ವಿದ್ಯಮಾನಗಳು ಬಗೆಗಿನ ಲೇಖನಗಳು
ಪ್ರೇಮಶೇಖರ, Premashekhar
Rs. 144/-   Rs. 160


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.