|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
`ಮೆಲೂಹದ ಮೃತ್ಯುಂಜಯ`
ಅದು ಕ್ರಿಸ್ತಪೂರ್ವ 1900. ಭಾರತೀಯರು ಅರಿವಿಲ್ಲದೆ ಸಿಂಧೂ ಬಯಲಿನ ನಾಗರೀಕತೆ ಎಂದು ನಂಬಿದ್ದ ಕಾಲ. ಆಗ ಮೆಲೂಹ ಎಂಬ ಸಾಮ್ರಾಜ್ಯವೊಂದಿತ್ತು. ನೂರಾರು ಶತಮಾನಗಲ ಹಿಂದೆ ವೈಭವದಿಂದ ರಾಜ್ಯಭಾರ ಮಾಡಿದ ಯುಗಪುರುಷ, ಮರ್ಯಾದಾ ಪುರುಷೋತ್ತಮ ಶ್ರೀರಾಮ ಕಟ್ಟಿದ ಅದ್ಭುತ ಸಾಮ್ರಾಜ್ಯ ಅದು. ಒಮ್ಮೆ ಆ ಸಾಮ್ರಾಜ್ಯವನ್ನು ಆಳುತ್ತಿದ ಸೂರ್ಯವಂಶಿಗಳಿಗೆ ಸಂಕಷ್ಟವೊಂದು ಎದುರಾಯಿತು. ಅಂತಹ ಸಂದಿಗ್ಧ ಸಮಯದಲ್ಲಿ ಯುಗಾವತಾರಿಯೊಬ್ಬ ತಮ್ಮ ರಕ್ಷಣೆಗೆ ಬಂದೇ ಬರುತ್ತಾನೆ ಎಂಬ ಏಕೈಕ ಭರವಸೆಯೊಂದಿಗೆ ಮೆಲೂಹನ್ನರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಅಂತಹ ಯುಗಪುರುಷ ಯಾರಿರಬಹುದು? ಆತ ಕೈಲಾಸ ಪರ್ವತದ ತಪ್ಪಲಿನಲ್ಲಿರುವ ಮಾನಸ ಸರೋವರದಿಂದ ಆಗಮಿಸಬಹುದೆ? ಹೀಗೆ ಸಾಮಾನ್ಯ ಮನುಷ್ಯನಾಗಿದ್ದು ತನ್ನ ಸತ್ಕರ್ಮಗಳಿಂದಲೇ ದೇವರ ದೇವ ಮಹಾದೇವನಾಗಿ ರೂಪುಗೊಂಡ ಶಿವನ ರೋಚಕ ಕಥನವೇ ಈ ಪುಸ್ತಕದ ಜೀವಾಳ. ‘ಮೆಲೂಹದ ಮೃತ್ಯುಂಜಯ’ ಶಿವ ಸರಣಿಯ ಮೊದಲ ಕೃತಿ.
`ನಾಗಾ ರಹಸ್ಯ`
ಹುಡುಕಾಟ ಈಗಷ್ಟೇ ಪ್ರಾರಂಭವಾಗಿದೆ. ದುಷ್ಟ ನಾಗಾಗಳು ಶಿವನ ಜೀವದ ಗೆಳೆಯ ಬೃಹಸ್ಪತಿಯನ್ನು ಕೊಂದಿದ್ದಾರೆ. ಪ್ರೀತಿಯ ಮಡದಿಯನ್ನು ಕೊಲ್ಲಲು ಯೋಜನೆ ರೂಪಿಸಿದ್ದಾರೆ. ದುಷ್ಟಸಂಹಾರಿ ಶಿವ ವೈರಿಗಳನ್ನು ಹುಡುಕಿ ಧ್ವಂಸಮಾಡದೆ ವಿರಮಿಸಲಾರ. ಸೇಡು, ಪ್ರತೀಕಾರ ತೀರಿಸಿಕೊಳ್ಳುವ ತವಕದಲ್ಲಿ ದುಷ್ಟಶಕ್ತಿಯನ್ನು ಹುಡುಕುತ್ತಾ ಹೊರಟ ಆತ ಅಂತಿಮವಾಗಿ ಬಂದು ಸೇರಿದ್ದು ನಾಗಾ ನಗರಿಯನ್ನು. ಶಿವನಿಗೆ ದುಷ್ಟಶಕ್ತಿ ತಲೆಯೆತ್ತಿರುವ ಸುಳಿವು ದೊರೆತಿದೆ. ಸೋಮರಸದ ಕೊರತೆಯಿಂದ ಇಡೀ ಸಾಮ್ರಾಜ್ಯ ಅಳಿವಿನ ಅಂಚಿಕೆ ಬಂದಿದೆ. ರಾಜಕುಮಾರ ನಿಗೂಢವಾಗಿ ಕೊಲೆಯಾಗಿದ್ದಾನೆ. ಶಿವನ ಮಾರ್ಗದರ್ಶಕರೂ ತತ್ವಜ್ಞಾನಿಗಳೂ ಆದ ವಾಸುದೇವ ಪಂಡಿತರು ನಂಬಿಕೆಗೆ ದ್ರೋಹ ಬಗೆದು ಶತ್ರುಗಳ ಪರವಾಗಿ ನಿಂತಿದ್ದಾರೆ. ಮೈಕಾ ವ್ಯವಸ್ಥೆಯ ವಜ್ರಮುಷ್ಠಿಗೆ ಸಿಲುಕಿ ಪರಿಪೂರ್ಣ ಸಾಮ್ರಾಜ್ಯ ಮೆಲೂಹ ನಲುಗುತ್ತಿದೆ.
ದುಷ್ಕೃತ್ಯಗಳ ಹಿಂದಿರುವ ಸೂತ್ರಧಾರಿ ತನಗಿಷ್ಟ ಬಂದಂತೆ ಆಟವಾಡುತ್ತಿದ್ದಾನೆ. ಆದರೆ ಆತ ಯಾರು ಎನ್ನುವುದು ಶಿವನಿಗೆ ತಿಳಿಯುವುದಿಲ್ಲ. ಶಿವ ನಿಗೂಢ ನಾಡಿನ ಉದ್ದಗಲಕ್ಕೂ ಸಂಚರಿಸುತ್ತಾ ಸತ್ಯ ಶೋಧನೆಯಲ್ಲಿ ತೊಡಗಿದ್ದಾನೆ. ಸಂಭವನೀಯ ಯುದ್ಧಕ್ಕೆ ಅಣಿಯಾಗುತ್ತಿದ್ದಾನೆ. ಹೊಸ ಹೊಸ ಸ್ನೇಹಿತರು ಆತನನ್ನು ಕೂಡಿಕೊಳ್ಳುತ್ತಿದ್ದಾರೆ. ಇಂತಹ ಹತ್ತಾರು ನಿಗೂಢ ರಹಸ್ಯಗಳ ಆಗರ ಈ ಹೊತ್ತಿಗೆ. ‘ಮೆಲೂಹದ ಮೃತ್ಯುಂಜಯ’ದ ನಂತರ ಪ್ರಕಟಗೊಂಡಿರುವ ಅಪೂರ್ವ ಕೃತಿ.
|
| |
|
|
|
|
|
|
|
|
|