|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇದುವರೆಗೆ ಕತೆ, ನಗೆಬರಹ, ಕಾದಂಬರಿ, ಹೀಗೆ ಸಮೃದ್ಧ ಕಾಲ್ಪನಿಕ ಲೋಕಗಳನ್ನು ಸೃಷ್ಟಿಸಿದ ಶ್ರೀನಿವಾಸ ವೈದ್ಯರು ಇದೀಗಷ್ಟೇ ವಾಸ್ತವ ಪ್ರಪಂಚಕ್ಕೆ ‘ಎಕ್ಸ್ಕರ್ಷನ್’ ಹೋಗಿಬಂದಿದ್ದರ ಫಲ ಈ ಅಪರೂಪದ ಪುಸ್ತಕ. ಆತ್ಮಚರಿತ್ರಾತ್ಮಕ ಎನ್ನಬಹುದಾದ ಈ ಬರಹದಲ್ಲಿ ಆತ್ಮೀಯ ಧಾಟಿಯಿದೆ. ವೈದ್ಯರಿಗೇ ವಿಶಿಷ್ಟವಾದ ವಿನೋದಪ್ರಜ್ಞೆಯಿದೆ; ‘ಮನದ ಮಾಮರದ’ ಕೆಳಗೆ ಅದೆಷ್ಟೋ ವರ್ಷಗಳಿಂದ ಬಿದ್ದ ಹಣ್ಣುಗಳಂತಿದ್ದ ಸ್ಥಳಗಳನ್ನು, ಜನರನ್ನು, ಪ್ರಸಂಗಗಳನ್ನು ಉದ್ದೀಪಿಸುವ ಶಕ್ತಿಯಿದೆ. ಜೀವನವನ್ನು ಅತ್ಯಂತ ಉತ್ಕಟವಾಗಿ ಪ್ರೀತಿಸುವ, ಅದನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಉದಾರ ಮನಸ್ಸೊಂದು ಇಲ್ಲಿ ಸ್ವಾನುಭವವನ್ನು ಅದರ ಸಹಜ ವರ್ಣದಲ್ಲಿ, ಧ್ವನಿಯಲ್ಲಿ, ವಿವರಗಳಲ್ಲಿ, ವಿಸ್ಮಯದಲ್ಲಿ ಹಿಡಿದಿರಿಸಿದೆ. ಎಲ್ಲ ಅತ್ಯುತ್ತಮ ಸಾಹಿತ್ಯದಲ್ಲಿರುವಂತೆ ಬದುಕಿನ ಒಲವು ನಲಿವು ದುಃಖ ಸುಖಗಳು ವೈದ್ಯರ ಬರವಣಿಗೆಯಲ್ಲಿ ಒಟ್ಟಿಗೇ ಇರುತ್ತವೆ. ಪ್ರಸ್ತುತ ಪುಸ್ತಕ ‘ಇನ್ನೊಂದು ಸಂತೆ’ಯು ಅವರ ಸೃಜನಶೀಲ ಪ್ರತಿಭೆಗೆ ಇನ್ನೊಂದು ಉದಾಹರಣೆ.
|
| |
|
|
|
|
|
|
|
|
|