Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 50    
10%
Rs. 45/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 7
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 88
ಪುಸ್ತಕದ ಗಾತ್ರ : 1/8 Demy Size
ಕೋಡ್ : 156591

‘ಜೈಸಿದನಾಯ್ಕಾ’ ನಾಟಕದಲ್ಲಿ ನಮ್ಮ ಅತ್ಯುತ್ತಮ ಸಾಮಾಜಿಕ ನಾಟಕ ಹಾಗೂ ಜಾನಪದ ತಂತ್ರದ ಒಂದು ಕಲಾತ್ಮಕ ಬೆಸುಗೆ ಏರ್ಪಟ್ಟಿದೆ. ಸಿದನಾಯ್ಕ ಹಾಗೂ ಗುರುವಯ್ಯನವರು ಹೊರಗಿನ ಶಕ್ತಿಗಳಾಗಿ ಪ್ರವೇಶಿಸಿ ನಾಟಕದಲ್ಲಿ ತಾದ್ಯಾತ್ಮತೆಯನ್ನು ಪಡೆಯುತ್ತಾರೆ.

ಆಸ್ತಿಯ ಸ್ವಾರ್ಥದ ಮುಂದೆ ಕ್ರಾಂತಿಯ ಧ್ಯೇಯ ಅಡಗಿಹೋಗುತ್ತದೆ. ಹೀಗಾಗಿ ಹಸಿದಿರುವ ಬರಗಾಲದ ಬಡವರ ಸಮಸ್ಯೆ ಕ್ರಾಂತಿಯಲ್ಲ, ಧ್ಯೇಯವಲ್ಲ, ಸಮತೆಯಲ್ಲ, ಆದರೆ ಕೂಳಿಗಾಗಿ ಇರುವ ಆಶೆ ಹಾಗೂ ತನ್ನದೆಂಬ ಆಸ್ತಿಗಾಗಿ ಇರುವ ಇಚ್ಛೆ ಎಂಬುದನ್ನು ನಾಟಕ ತೋರಿಸಿ ವಾಮ ಪಂಥೀಯ ಧೋರಣೆಗಳನ್ನು ಬಿಂಬಿಸಿದರೂ, ಅನನುಭವಿಯಾದ ಮುಗ್ಧನೊಬ್ಬ ಕ್ರಾಂತಿಯ ಮುಂದಾಳಾದರೆ ಅವನು ಕೂಡ ವರ್ತಮಾನದ ಸಮಾಜ ಬಂಧವನ್ನೇ ಸೇರಿಕೊಳ್ಳುತ್ತಾನೆಂಬುದನ್ನು ತೋರಿಸಿ ಅದ್ಭುತವಾದ ಪಾರದರ್ಶಕತೆಯನ್ನು ಪಡೆಯುತ್ತದೆ.

ಪ್ರತಿಯೊಬ್ಬರಿಗೂ ದೇಸಾಯಿಯಾಗಬೇಕೆಂಬ ಹಂಬಲ; ಈ ಹಂಬಲಕ್ಕೆ ಕಾರಣ ಸೀಮಿತವಾಗಿರುವ ಆಸ್ತಿ! ನಮ್ಮ ಸಮಾಜದ ಈ ವಿಷವರ್ತುಲ ‘ಜೈಸಿದನಾಯ್ಕಾ’ದಲ್ಲಿ ಮೂಡಿ ಬಂದಿರುವಷ್ಟು ಸಮರ್ಥವಾಗಿ ಕನ್ನಡದ ಇತರ ಯಾವ ನಾಟಕದಲ್ಲಿಯೂ ಮೂಡಿಬಂದಿಲ್ಲ.

ಡಾ. ಚಂದ್ರಶೇಖರ ಕಂಬಾರ (ಜನನ - ಜನವರಿ ೨, ೧೯೩೭) ಬೆಳಗಾವಿ ಜಿಲ್ಲೆ ಘೋಡಿಗೇರಿ ಗ್ರಾಮದಲ್ಲಿ ಬಸವಣ್ಣೆಪ್ಪ ಕಂಬಾರ ಹಾಗೂ ಚೆನ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಗೋಕಾಕ್ ನ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಬಳಿಕ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿಎ ಪದವಿ, ೧೯೬೨ರಲ್ಲಿ `ಕರ್ನಾಟಕ ವಿವಿ`ಯಿಂದ ಎಂ.ಎ ಪದವಿ ಹಾಗೂ ಪಿ.ಎಚ್.ಡಿ.ಪದವಿ ಪಡೆದಿದ್ದಾರೆ. ಡಾ. ಚಂದ್ರಶೇಖರ ಕಂಬಾರರು ರಾಷ್ಟ್ರಮಟ್ಟದಲ್ಲಿ ಕನ್ನಡದ ಸಿದ್ಧಿ-ಸಾಧನೆಗಳನ್ನು ಎತ್ತಿ ಹಿಡಿದಿರುವ ಹಾಗೂ ಅದರ ಪ್ರತೀಕವಾಗಿರುವ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕಾವ್ಯ, ನಾಟಕ, ಕಾದಂಬರಿ ಮತ್ತು ಜಾನಪದ ಕ್ಷೇತ್ರಗಳಲ್ಲಿ ಮಹತ್ವದ ಕೃತಿಗಳನ್ನು ಕಾಣಿಕೆಯಾಗಿತ್ತಿರುವುದು ಮಾತ್ರವಲ್ಲದೆ, ತಮ್ಮ ಆಯ್ಕೆಯ ಈ ಎಲ್ಲ ಕ್ಷೇತ್ರಗಳಿಗೆ ಹೊಸ ಆಯಾಮವನ್ನು ಜೋಡಿಸಿದ ಹಿರಿಮೆಯೂ ಅವರದಾಗಿದೆ. ತಮ್ಮ ಸಾಹಿತ್ಯ ಕೃತಿಗಳಿಗಾಗಿ ಹಲವಾರು ರ‍್ಟ್ರಾಯ ಪ್ರಶಸ್ತಿಗಳನ್ನು ಗಳಿಸಿದ ಅವರು ಸಿನಿಮಾ ಕ್ಷೇತ್ರವನ್ನು ಪ್ರವೇಶಿಸಿದಾಗಲೂ ಅದೇ ವಿಕ್ರಮವನ್ನು ಮೆರೆದಿದ್ದಾರೆ. ಕನ್ನಡ ವಿಶ್ವವಿದ್ಯಾನಿಲಯದ ಪ್ರಥಮ ಕುಲಪತಿಗಳಾಗಿದ್ದ ಅವರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಾಧನೆಗಳು ಕನ್ನಡ ನಾಡಿಗೇ ಹೆಮ್ಮೆಯನ್ನು ತರುವಂಥ ಸಂಗತಿಗಳಾಗಿವೆ.

uploads/authorimages/729.jpg
ಲೇಖಕರ ಇತರ ಕೃತಿಗಳು
10%
ಜೋಕುಮಾರಸ್ವಾಮಿ (ನಾಟಕ)
ಚಂದ್ರಶೇಖರ ಕಂಬಾರ, Chandrashekhara Kambar
Rs. 50    Rs. 45
10%
ನೆಲಸಂಪಿಗೆ (ಸಮಗ್ರ ನಾಟಕಗಳು ....
ಚಂದ್ರಶೇಖರ ಕಂಬಾರ, Chandrashekhara Kambar
Rs. 525    Rs. 473
Rs. 50    Rs. 45
Rs. 395    Rs. 356
Best Sellers
ಸಮಗ್ರ ನಾಟಕ ಗಿರೀಶ್ ಕಾರ್ನಾಡ್
ಗಿರೀಶ ಕಾರ್ನಾಡ, Girish Karnad
Rs. 585/-   Rs. 650
ನಾನು ನಾನಲ್ಲ ನಮ್ಮೊಳಗಿನ Ego
ರಾಜು ಗಡ್ಡಿ, Raju Gaddi
Rs. 113/-   Rs. 125
ಸ್ಪೋಕನ್ ಇಂಗ್ಲಿಷ್(CD) , Spoken English - with CD
ದಯಾನಂದ ಅಲಮೂರಿ, Dayananda Alamuri
Rs. 176/-   Rs. 195
ಮಲ್ಲಿಗೆಯ ಮಳೆ
ನವಗಿರಿನಂದ, Navagirinanda
Rs. 36/-   Rs. 40

Latest Books
ಜ್ಞಾನಪೀಠಕೆ ಮೆರುಗು ಕನ್ನಡದ ಬೆಡಗು : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರ ಬದುಕು ಬರಹ
ಗೋಪಾಲ್ ಟಿ ಎಸ್, Gopal T S
Rs. 162/-   Rs. 180
ಯೇಸುಕ್ರಿಸ್ತ (ಜೀವನ ಚರಿತ್ರ)
ವಿಲಿಯಂ, William
Rs. 360/-   Rs. 400
Sex 60 Questions
ಚಂದ್ರಶೇಖರ್ ಸಿ ಆರ್, Chandrashekar C R
Rs. 18/-   Rs. 35
ಲಂಕೇಶ್ : ಬದುಕು ಬರೆಹ
ಮರುಳಸಿದ್ದಪ್ಪ ಕೆ, Marulasiddappa K
Rs. 108/-   Rs. 120


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.