|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಜೀನ್ಸ್ ಟಾಕ್’ ಬರೀ ಓದುವ ಸಂತಸವನ್ನಷ್ಟೇ ನೀಡುವುದಿಲ್ಲ. ನಮ್ಮ ಸುತ್ತುಮುತ್ತಲೂ ನಾವು ದಿನನಿತ್ಯ ಕೇಳಿ-ನೋಡಿದ ವಿಷಯಗಳನ್ನೇ ಲೇಖಕಿಯ ಸೂಕ್ಷ್ಮದೃಷ್ಟಿಯಲ್ಲಿ ಸೋಸಿ ಮತ್ತೊಮ್ಮೆ ನೋಡುವಾಗ ಆ ಸಮಸ್ಯೆಗಳಿಗೆ ಏನೆಲ್ಲಾ ಪರಿಹಾರಗಳಿವೆ ಮತ್ತು ಅವುಗಳನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು ಎನ್ನುವುದೂ ತಿಳಿಯುತ್ತೆ, ಲೇಖಕಿಯ ಬಗ್ಗೆ ಹೆಮ್ಮೆ ಮೂಡುತ್ತದೆ. ಅನಾದಿ ಕಾಲದಿಂದ ಆಧುನಿಕ ಯುಗದವರೆಗೂ ಹೆಣ್ಣೆ ನೀನೆಷ್ಟೇ ಮುಂದುವರಿದರೂ ಇನ್ನೂ ನಿನ್ನ ಜುಟ್ಟು ನಮ್ಮ ಕೈಯಲ್ಲೇ ಇದೆ ಎನ್ನುವ ಮನುವಾದಿಗಳ ಪೂರ್ವಾಗ್ರಹಕ್ಕೆ ಪೀಡಿತಳಾಗಿರುವ ನಮ್ಮ ಅಜ್ಜಿ, ಅಮ್ಮ, ಅಕ್ಕ, ತಂಗಿ, ನೆರೆಹೊರೆಯ ಆಂಟಿಯರು, ಗೆಳತಿಯರು ಎಲ್ಲರ ಸಮಸ್ಯೆಗಳೂ ಒಂದೇ, ನೋವು ಒಂದೇ. ನೋವಿಗೆ ಒಂದೇ ಬಣ್ಣ. ಒಂದೇ ದನಿ! ಆದರೆ ಕಣ್ಣೀರಿಗೆ ಯಾವ ಬಣ್ಣವೂ ಇಲ್ಲ. ದನಿಯಡಗಿಸುವ ಕಲೆಯೂ ಕಣ್ಣೀರು ಕಲಿತಿರುತ್ತದೆ. ಒಂದು ನಿಟ್ಟುಸಿರೂ ಗಟ್ಟಿದನಿಯಾಗಬಲ್ಲುದು, ಮೆಲುದನಿಯೂ ಒಕ್ಕೊರಲಾಗಬಹುದೆಂಬ ಆಶಯದ ಗಟ್ಟಿಗತನವನ್ನು ‘ಜೀನ್ಸ್ ಟಾಕ್’ಅನ್ನು ಓದುತ್ತಲೇ ಕಲಿತಿದ್ದೇವೆ.
|
| |
|
|
|
|
|
|
|
|
|