Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 225    
10%
Rs. 203/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಎ ಜಿ ಬುಕ್ಸ್, AGe Books
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2018
ರಕ್ಷಾ ಪುಟ : ಸಾದಾ
ಪುಟಗಳು : 287
ಪುಸ್ತಕದ ಗಾತ್ರ : 1/8 DEmy Size
ಕೋಡ್ : 113265874

 Reviews

 ಜೀವಾತ್ಮಗಳ ವಿಕ್ರಯ ಕಾದಂಬರಿಯು ನಮ್ಮ ದೇಶದ ಭೂಸ್ವಾಧೀನ ಮಾಡುವ ವ್ಯವಸ್ಥೆಯ ಹಿನ್ನೆಲೆಯಲ್ಲಿ ನಡೆದ ಹಳ್ಳಿಯ ಯುವಕರ ಅಪೂರ್ವ ಮುಗ್ಧ ಪ್ರೇಮದ ಕಲ್ಪಿತ ವರ್ಣನೆ. ತಮ್ಮ ಪೂರ್ವಜರ ಮನೆ ಮಠ ಮತ್ತು ಪರಂಪರೆಯ ಆಸ್ಥಿಯ ಹಳ್ಳಿಗಳನ್ನು ಉಳಿಸಿಕೊಳ್ಳಲು ಇಂದಿಗೂ ನಡೆದಿರುವ ಹೋರಾಟದ ಕತೆ ಇದು. ರೋಶನಿ ಎಂಬ ಹಳ್ಳಿಯ ತರುಣಿ ವಕೀಲೆ ಮುಗ್ಧ ಹಳ್ಳಿಗರೊಂದಿಗೆ ಕೈಜೋಡಿಸಿ ಅವರ ಪೂರ್ವಜರ ಹಳ್ಳಿಗಳನ್ನು ಉಳಿಸಿಕೊಳ್ಳಲು ಶಕ್ತಿಶಾಲಿ ಪ್ರಭಾವಿ ಶ್ರೀಮಂತ ಉಧ್ಯಮಿ ಮತ್ತು ರಾಜಕಾರಣಿಗಳೊಡನೆ ಸಮರ ಸಾರುತ್ತ ಸಮರನ ಪ್ರೇಮದಲ್ಲಿ ಸೆರೆಯಾಗುತ್ತಾಳೆ. ಸಮರ ಅದೆ ಊರಿನ ವಿದ್ಯಾವಂತ ಯುವಕ ಪ್ರಾದ್ಯಾಪಕ ಶಾಂತಿಯುತವಾಗಿ, ಈ ಸಮಸ್ಯೆಗೆ ಪರಿಹಾರ ಕಾಣಲು ರೋಶನಿಯೊಂದಿಗೆ ನಿಂತು ಹೋರಾಟದ ಸನ್ನಿವೇಶದಲ್ಲಿ ಪಾಲುದಾರನಾಗಿ ಅವಳ ಸ್ನೇಹ ಪ್ರೇಮವಾಗಿ ಚಿಗುರೊಡೆಯುತ್ತದೆ. ಭಾರತ ದೇಶದ ಅಭಿವದ್ಧಿಗಾಗಿ ಮಾಡಿದ ಭೂಸ್ವಾಧೀನದ ಸಮಸ್ಯೆಗಳನ್ನು ಪರಿಗಣಿಸಿ, ಈ ಕಾದಂಬರಿಯನ್ನು ಉತ್ತರ ಕನ್ನಡ ಜಿಲ್ಲೆಯ ಸೃಷ್ಠಿ ಸೌಂದರ್ಯದ ತಾಣವಾದ ಕಾರವಾರದ ಮೂರು ಹಳ್ಳಿಗಳು,ನಂದಿಗ್ರಾಮ,ಕುಡಾಂಕುಲಮ ಮತ್ತು ದೇಶದ ಇತರ ಪ್ರಾಂತಗಳಲ್ಲಿ ಭೂಸ್ವಾಧೀನವಾದ ಸನ್ನೀವೇಷದದೊಂದಿಗೆ ವರ್ಣಿಸಿ ಬರೆಯಲಾಗಿದೆ. ದೂರದ ಕೊಂಪೆಯೊಂದರಲ್ಲಿ ಈ ವೈವಿಧ್ಯಮಯವಾದ ಸುಂದರ ಪರಿಸರದ ಊರುಗಳು ಭೂಸ್ವಾಧೀನಕ್ಕೆ ಒಳಪಟ್ಟು ಅನುಭವಿಸಿದ ಕಷ್ಟದೊಂದಿಗೆ ಹೋರಾಟವು ಕಥಾವಸ್ತುವಾಗಿ ಈ ಕಾದಂಬರಿಯನ್ನು ಮೆರಗುಗೊಳಿಸುತ್ತದೆ. ಇದೊಂದು ಅತಿ ಸೂಕ್ಷ್ಮ ವಿಷಯದ ಪ್ರಾರ್ಥನೆಯಾಗಿದ್ದು ಬಡತನದ ವಿರುದ್ಧ ಅಭಿವದ್ಧಿ ಮತ್ತು ಪರಿಸರದ ದ್ವಂದ್ವದ ಸುತ್ತ ನಡೆದಿರುವ ಸ್ವಾರಸ್ಯಕರ ಸಂಘರ್ಷದ ಸನ್ನಿವೇಷದ ಕಾದಂಬರಿ. ನಮ್ಮ ದೇಶದ ಬಡತನವನ್ನು ನಿವಾರಿಸಲು ಅಭಿವದ್ಧಿ ಮಾಡಿ ಪರಿಸರಕ್ಕೆ ಹಾನಿ ಮಾಡುವುದು ಸೂಕ್ತವೊ? ಅಥವಾ ಅಭಿವದ್ಧಿ ಬೇಡವೊ? ಇದು ಓದುಗರ ವಿವೇಕದ ಚಿಂತನೆಗೆ ಸಮರ್ಪಿತ. ಈ ಕಾದಂಬರಿಯ ಕುರಿತು ನಿವೃತ್ತ ಉಚ್ಛನ್ಯಾಯಾಲಯದ ನ್ಯಾಯಾಧೀಷ ಮತ್ತು ಕರ್ನಾಟಕದ ಲೋಕ ಆಯುಕ್ತರಾದ ಶ್ರೀ ಸಂತೋಷ ಹೆಗ್ಡೆಯವರು ಪ್ರಶಂಸಿದ್ದಾರೆ. " ಈ ಕಾದಂಬರಿಯು ಸಮಕಾಲೀನ ಹೃದಯಂಗಮದ ಅತ್ಯಮೂಲ್ಯವಾಗಿ ಓದಿಸಿಕೊಂಡು ಹೋಗುವ ಶ್ರೇಷ್ಟ ಸಮಾಜಮುಖಿ ನೈಜ ಜೀವನದ ಸಂಘರ್ಷಗಳಿಗೆ ಸಂಬಂಧಿಸಿದ ಪುಸ್ತಕವಾಗಿದೆ." ಕಾದಂಬರಿಯ ಕುರಿತು ಡೆಕ್ಕನ ಕೃನಿಕಲ್ ದಿನ ಪತ್ರಿಕೆಯ ಪ್ರಶಂಸೆ. " ಜೀವಾತ್ಮಗಳ ವಿಕೃಯದ ಶಿರೋನಾಮೆಯಲ್ಲಿ ಸಮಗೃ ಸಾರಾಂಶ ಅಡಗಿದೆ. ಇದೊಂದು ಮಹತ್ವದ ಕಥೆ."

 ಜೀವಾತ್ಮಗಳ ವಿಕ್ರಯ ಒಂದು ಹಳ್ಳಿಯ ಭೂಸ್ವಾಧೀನ ವಿಷಯ ಆಧಾರಿತ ಕಾದಂಬರಿ.ಆರಂಭದಲ್ಲಿ ಸಾಧಾರಣ ಕಾದಂಬರಿಯೆನಿಸಿ ಓದುಗರನ್ನು ಆಸಕ್ತಿಯಿಂದ ಓದಿಸುವಲ್ಲಿ ಯಶಸ್ವೀಯಾಗಿದೆ. ಹಳ್ಳಿಯ ಸಹಜ ಸಾಧಾರಣ ಜೀವನವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ನಡೆಯುತ್ತಿರುವ ಭೂಮಿ ರಾಜಕೀಯವನ್ನು ನ್ಯೆಜತೆಯಿಂದ ವಿವರಿಸಿ ಬಡವರ ಬಡತನ ಮತ್ತು ಶೋಷಣೆಯನ್ನು ಕೂಡ ಎತ್ತಿ ತೋರಿಸಿದ್ದಾರೆ. ಕೊನೆಗೆ ಬುದ್ದಿ ಜೀವಿಗಳಿಗೆ ಯೋಚಿಸಲು ಸಮತೋಲ ಅಭಿವೃದ್ಧಿಯ ವಿಷಯವನ್ನು ಸಂಭಾಷಣೆಯಲ್ಲಿ ವಿವರಿಸಿ ಓದುಗರಿಗೆ ಯೋಚಿಸಿ ಅವರ ವಿವೇಚನೆಗೆ ನಿರ್ಧರಿಸಲು ಬಿಟ್ಟಿದ್ದಾರೆ. ಒಟ್ಟಾರೆ ಎಲ್ಲರಿಗೂ ಓದುವಂತ ಒಂದು ವಿಭಿನ್ನವಾದ ಕಾದಂಬರಿಯಾಗೆ ಮೂಡಿ ಬಂದಿದೆ.

 *ಶ್ರೀ ವಿದ್ಯಾಧರ ದುಗೇ೯ಕರವರ* *ಜೀವಾತ್ಮಗಳ ವಿಕ್ರಯ* ಇಪ್ಪತ್ರೊಂಬತ್ತು ಅಧ್ಯಾಯವಾಗಿ ಎರಡುನೂರಾ ತೊಂಬತ್ತೈದು ಪುಟುಗಳಗಲಿ ಮುದ್ರಣಗೊಂಡ ಕಾದಂಬರಿ ಬಗ್ಗೆ ಸ್ವಲ್ಪ ಅನಿಸಿಕೆಗಳು ಹೇಳಿಕೊಳ್ಳುತಿರುವೆ ಓದು ಓದುತಾ ಹೋದಂತೆ ನಾನೆ ಕಥೆವಳಗೆ ಮಗ್ನನಾದಂತೆ ಭಾಸವಾಯಿತು ಖಂಡಿತ ಓದುಗುರ ಮೆಚ್ಚುಗೆ ಪಡೆದೆಪಡೆಯುತ್ತೆ *ಈ ಕಾದಂಬರಿ ಕುರಿತು ನಿವೃತ್ತ ಉಚ್ಚನ್ಯಾಧೀಶರು ಮತ್ತು ಕಣಾ೯ಕದ ಲೋಕ ಆಯುಕ್ತರಾದ ಶ್ರೀ ಮಾನ ಸಂತೋಷ ಹೆಗ್ಗಡೆಯವರ ಪ್ರಶಂಸೆ ಪಡಿಸಿದ ಕಾದಂಬರಿ* ಕಾರವಾರದಿಂದ ಅಲಿಗದ್ದೆ ಹಳ್ಳಿಗೆ ಹೋಗಲು ಅಂಕೊಲಾದಿಂದ ಕೊನೆಯ ಬಸ್ಸು ಆಗಿದ್ದರಿಂದ ತುಂಬಿತುಳುಕುತ್ತಿದ್ದ ಬಸ್ಸಲ್ಲಿ ಅವನ ಫರಸ್ ಕಳಕೊಂಡು ಟಿಕೆಟ್ ಕೊಳ್ಳಕ್ಕೆ ದುಡ್ಡಿನ ಸಮಸ್ಯೆಯಿಂದ ಶುರುವಾಗವ ಕಾದಂಬರಿ *ಸಮರ* ಎಂಬ ಪ್ರೊಫೆಸರ್ ಅವರ ಸಹದ್ಯೋಗಿಗಳು ಸಮರ ಪಿ ಎಚ್ ಡಿ ಮುಗಿಸಿದ ಖುಷಿಯಿಂದಾ ಅಭಿನಂದನಾ ಕಾಯ೯ಕ್ರಮ ಮುಗಿಸಿ ಹೋರಡುವದರಿಂದ ಕೊನೆಯ ಬಸ್ಸು ಆಗಿತ್ತು ಕಳ್ಳಯಾರಂತ ತಿಳಿದರು ದಾಂಡಿಗರ ಜೊತೆ ಹೊಡೆದಾಡವಕ್ಕೆ ಸಮಯವಿಲ್ಲಾ ಎಟಿಎಮ್ ಹಣತೆಗೆಯಲು ಹೋದರೆ ಎಟಿಎಮನಲ್ಲಿ ಹಣ ಇರುದಿಲ್ಲಾ ದಿನಾ ಅದೆ ಬಸ್ಸಿನಲ್ಲಿ ಬರುವದು ಗೊತ್ತಿದ್ದರು ಡ್ರೈವರ್ ನಿಸಹಾಯಕ ಅಲ್ಲಿರುವರು ನೋಡಿ ಯಾರು ಅವನ ಸಹಾಯಕ್ಕೆ ಬರಲ್ಲಾ ಅಲಿಗದ್ದೆಯ ಹಳ್ಳಿಯವಳಾದ ರೋಶನಿ ಎಂಬ ವಕೀಲೆ ಅವನ ಬಾಲ್ಯದ ಗೆಳತಿ ಸಹಾಯದಿಂದ ಒಟ್ಟಿಗೆ ಊರುತಲುಪುತಾರೆ ಕೋಣಕಲ್ಲ ನದಿದಾಟಿಹೋಗಬೇಕಿತ್ತು ಜೋನ ಎಂಬ ದೋಣಿ ಸಹಾಯಕನಿಂದ ಸಾಗಬೇಕಾಗುತ್ತೆ *ಅರಿಗೆ ಮತ್ತು ಬಿಣಗೆ ಎಂಬ ಗ್ರಾಮಕ್ಕೆ ಹೋಗುತಿದ್ದರು ಆ ಊರಲ್ಲಿ ಕಲಿತವರು ಬಹಳ ಕಮ್ಮಿ ಬಡವ ಅಜ್ಜಾ ಅಜ್ಜಿ ಆಶ್ರೆಯದಲ್ಲಿ ಕಲಿತವನು ಸಮರ ಸಜ್ಜನ ಮುಗ್ಧದತೆಯಿಂದ ಕೊನೆಯದರಿಗು ಕಥೆ ಹೇಳುತಾನೆ ಹೋಗುತಾನೆ ಹಾಗೂ ರೋಶನಿ ಅದೆ ಊರಿನ ಮಧ್ಯಮವರ್ಗದ ಸಂಪ್ರದಾಯಸ್ತದ ಕುಟುಂಬವಳಾದ ಕಲಿತ ವಕೀಲೆ ಬಹಳ ಧೈಯ೯ವಂತಳು ಇಬ್ಬರ ಸ್ನೇಹ ಪ್ರೇಮಾ ಮಧ್ಯೆ ಮಧ್ಯೆ ರೋಮಾಂಚಕ ನುಡಿಗಳಿಂದ ಮನಸ್ಸು ಆನಂದ ಕೊಡುತ್ತದೆ ಜಾತಿ ಅಡ್ಡವಾಗಿದಕ್ಕೆ ಕೊನೆಯವರಿಗು ಒಬ್ಬರನ್ನೊಬ್ಬರು ಬಿಟ್ಟು ಕೊಡದೆ ಸಾಗುತಾ ಹೋಗತೆ ಇದ್ದಕಿದ್ದಂಗೆ ಸರಕಾರದವರು ಭೂಸ್ವಾಧೀನ ಅಭಿವೃದ್ಧಿ ನೇಪದಲ್ಲಿ ಕಾಸಿಗೆ ಉದ್ಯೋಮಿಗಳಿಗೆ ಕೊಡುತಾರೆ ಆ ಊರಿನ ಹಿರಿಯರು ಸೇರಿ ಬಡಜನರ ಭೂಮಿ ಉಳಿಸುವದಕ್ಕಾಗಿ ಆಂದಲೋನಕ್ಕೆ ಮುಂದಾಗುತಾರೆ ಅಪ್ಪನಿಗೆ ಸಹಾಯಕಳಾಗಿ *ರೋಶನಿ ಮತ್ತು ಸಮರ* ಮುಂದಾಗುತಾರೆ ಭೂಸ್ವಾಧಿನ ಮಾಹಿತಿಗಾಗಿ ಜಿಲ್ಲಾಕಾಯ೯ಲಯದಲ್ಲಿ ಕಲಿತವರಿಗೆ ಇಷ್ಟು ಪರದಾಡಿಸುವ ಜನರಿಗೆ ಸರಕಾರಿ ನೌಕರದಾರು ಇನ್ನೂ ಕಲಿಯದಿದ್ದವರಿಗು ಎಷ್ಟು ಗೋಳು ಹೊಯ್ಯಕೋಳ್ಳುವರು ದೇವರೆ ಬಲ್ಲಾ ಅನಿಸಿತು ಆ ಊರಿನ ಕುಬೇರ ಮತ್ತು ದಾಮು ಎಂಬವರು ಇಬ್ಬರು ರಾಜಕೀಯಕುತಂತ್ರಿಗಳು ಕದಿಮರು ಕಳ್ಳನಾಯಕರ ಪಾತ್ರಧಾರಿಯಾಗಿ ಬರುತಾರೆ ಬಡ ರೈತರ ಬಡ ಮೀನುಗಾರ ಮಧ್ಯಮವರ್ಗದ ಒಟ್ಟು ಮೂರುನೂರ ಮನೆಯ ಭೂಸ್ವಾಧೀನಕ್ಕೆ ಕುಡಿಯೊದ್ಕೆ ತಿನೋದಕ್ಕೆ ಕೊಟ್ಟು ಆಂದಲೋನಕ್ಕೆ ಸಹಾಯಕರಂತೆ ಬಂದು ಅವರನ್ನು ಬೆಂಗರೂರಿನಲ್ಲಿ ಕೇಸನ್ನು ಸೋಲಿಸುತಾರೆ ಮತ್ತೊಮ್ಮೆ ಎರಡು ಹಳ್ಳಿಯವರು ಒಟ್ಟಾಗಿ ಹೋರಾಟಕ್ಕೆ ಇಳಿದಾಗ ಗುಂಡಾಗಳಿಂದ ಗಲಿಬೆ ಹರಡಿಸಿ ಪೋಲಿಸರ್ ಗುಂಡಿನ ಚಕಮಕಿಗೆ ಅಮಾಯಕ ಎರಡು ಜೀವಗಳ ಬಿದ್ದು ಆಕ್ರಂದನ ಹೊಳೆ ಹರಿಯುತ್ತದೆ ಸಮರ ರೋಶನಿ ಹಲವಾರು ಜನರನ್ನು ಬಂಧಿಸಿ ಕರೆದುಕೊಂಡು ಹೋದಾಗ ರೋಶನಿ ಕಾರವಾರದ ಸೀನಿಯರ್ ವಕೀಲರಾದ ರೂಪಾಲಿಯವರ ಸಹಾಯದಿಂದ ಎಲ್ಲರೂ ಹೊರಬರುತಾರೆ ರೋಶನಿ ಒಬ್ಬಳೇ ಬರುವಾಗ ದಾಮುವರ ಕಡೆಯಿಂದ ಎಳೆದಾಟಾ ದುಡಾಡುವಾಗ ಜೋನ ದೋಣಿಚಾಲಕ ಅವರನ್ನು ಕತ್ತಿತೋರಿಸಿ ಓಡಿಸುತಾನೆ ಅದು ಸಮರಗೆ ತಿಳಿದು ಮನದೊಳಗೆ ಆಕ್ರೋಶ ತುಂಬಿಕೊಂಡು ರೋಷನಿ ಮನೆಗೆ ಬಂದಾಗ ಎನು ಹೇಳುದಿಲ್ಲಾ ಮಾಟಾಮಂತ್ರ ಅಂತಾ ಮರಿಮ್ಮನ ಮೂಡನಂಬಿಕೆಗೆ ಹೆತ್ತವರ ಸಮಾಧಾನಕ್ಕೆ ಹೋಗುತಾರೆ ದಾಮುವಿನ ಕಳ್ಳಸಾಗಣಿಕೆಗೆ ಕಡಿವಾಣ ಹಾಕಲು ಐದು ಸ್ನೇಹಿತರು ಸೇರಿ ಸಮರ ಜೋನ ಹುಸೇನ್ ಮತ್ತ ಇಬ್ಬರು ಮುಖವಾಡ ಧರಿಸಿ ರಾತ್ರಿ ನಡೆಯುವ ಕಳಸಾಗಣೆ ಮಾಡುವ ದಾಂಡಿಗರಿಗೆ ಥಳಸಿ ಊರಿನ ಜನ ಒಟ್ಟಾಗಿ ಬಂದಾಗ ಕಳ್ಳರು ಓಡಿಹೋಗುತಾರೆ ಬ್ರೋನ ಸುಗರ್ ಸುಟ್ಟಹಾಕಿ ಚಿನ್ನದ ಬಿಸ್ಕೇಟ ಮತ್ತು ಬೆಲೆ ಬಾಳುವ ವಜ್ರದ ಹಳ್ಳಗಳು ಬಡಜನರಿಗೆ ಹಂಚಿ ಕಷ್ಟಕ್ಕೆ ಬಳಸಿಕೊಳ್ಳಿ ಎಂದು ಮುಖವಾಡ ಧರಸಿ ಅಲಿಂದ ಹೋಗಿ ಎಂದಿನಂತೆ ಕೆಲಸ ಹೋಗುತಾರೆ ಒಬ್ಬ ಗೆಳಾಯ ಕುಡುನಾಗಿದ್ದರಂದಿ ಮೋಸದ ಜಾಲಕ್ಕೆ ಬಿದ್ದು ದಾಮುಕಡೆಯವರು ಎಷ್ಟೇ ಹೊಡೆದರು ಹೇಳಿದೆ ಅವರಿಗೆ ತಪ್ಪಿಸಿಕೊಂಡು ಗೆಳಯರತ್ತ ಹೇಳತಾನೆ ಆ ಊರಿನ ಕಾಡಿನ ಮಧ್ಯೆ ಇರುವ ಶ್ರೀ ಚಂಡಮ್ಮದೇವಿಯ ಜಾತ್ರೆ ಎಲ್ಲರನ್ನು ದಡಮುಟ್ಟಿಸು ದೋಣಿ ಚಾಲಕ ಜೋನ ಜಾತ್ರೆ ಮುಗಿದ ನಂತರ ಹೆಣವಾಗಿ ಕಂಡು ರಾಮು ಕಡೆಯವರು ಕೆಲಸವೆಂದು ತಿಳಿದು ಹಿರಿಯರೊಂದಿಗೆ ಹೇಳಿ ಪೋಲೀಸ್ ರಗೆ ಕಂಪ್ಲೇಂಟ್ ಕೊಡುತಾರೆ ಆದರೆ ಅವರು ಕುಡಾ ದಾಮುವಿನ ಗುಲಾಮರೆ ಆಗಿರುತಾರೆ ಮತ್ತೆ ಎಲ್ಲ ಹಿರಿಯರು ಸೇರಿ ಕರವಾರಕ್ಕೆ ಭೂಸ್ವಾಧಿನದ ಬಗ್ಗೆ ಚಚೆ೯ಗೆ ಹೋದಗಾ ಸರಕಾರದ ಅಲ್ಪಸ್ವಲ್ಪ ಧನಸಹಾಯಕ್ಕೆ ಅವರ ಮುಗಿಬಿದ್ದು ಭೂಮಿ ಬರೆದುಕೊಟ್ಟು ಮೀನುಗಾರರು ಬಡಜನರು ಮುಂದಾಗುತಾರೆ ಕೊನೆಗೆ ಹೋರಾಟಕ್ಕೆ ಬೆಲೆ ಸಿಗದೇ ಕಾನೂನಿನ ಪ್ರಕಾರ ಅಲಿಗದ್ದೆಯಿಂದ ಐವತ್ತು ಕಿಮೀ ದೂರಾಕಳಿಸುತ್ತಾರೆ ಅಲ್ಲಿಯ ನಡೆದ ಘಟನೆಗೆ ರೋಶನಿ ಅವರ ಅಪ್ಪನಿಗೆ ಹೃದಯಘಾತದಿಂದ ಕಾರವಾರದ ದಾವಾಖಾನೆಗೆ ಸೇರಿಸುತ್ತಾರೆ ಸಮರಸಹಾ ಕಾರವಾರದಲ್ಲಿ ಇದ್ದರೂ ಮದ್ಯೆ ರಾತ್ರಿಯೇ ರೋಶನಿಯವರ ಮನೆ ಹೋಗಿ ಪೋಲೀಸರು ದಬ್ಬಾಳಿಕೆ ಕೇಳಿ ಆಳು ಮಕ್ಕಳಿಗೆ ಊರುಬಿಡಲು ಹೇಳುತ್ತಾರೆ ಕಾರವಾರ ದಿಂದ ಗೆಳೆಯನ ಬೈಕ ಸಹಾಯಕ್ಕೆ ತೊಗೊಂಡು ರಾತ್ರಿಯೆ ಅಲಿಗದ್ದೆ ಬರುತಾರೆ ಇದಕ್ಕೆ ಎಲ್ಲಾ ರಾಮು ಕುಬೇರ ಕಾರಣ ಎಂದು ತಿಳಿದರು ಅನಿವಾರ್ಯ ಹೋಗುವ ಸಂಭವ ಬಂದಾಗ ಆ ಊರಿನ ಪೂಜಾರಿ ಆಚಾರ ನೀ ಏನು ಮಾಡುವೆ ಕಾಲೇಜು ಫಕ್ಕನೆ ಬಾಡಿಗೆ ಮನೆಯ ಹಿಡಿದಿದ್ದೆ ಕರೆದುಕೊಂಡು ಹೋಗುವೆನು ಹೇಳುವಾಗ ಮದುವೆಯ ಬಂದಾಗ ಅಂತರ ಜಾತಿಯ ಭಯದಿಂದ ಹೇಳಲಾಗದ ಮಾತು ಊರಜನರ ಮುಂದೆ ರೋಶನಿಯನ್ನು ಪ್ರೀತಿಯಸುವದು ಹೇಳುತಾನೆ ಅವಳು ಅಪ್ಪಿಕೊಂಡು ಒಪ್ಪಿಕೊಳ್ಳುತಾಳೆ ಇಬ್ಬರು ಖುಷಿಯಾದರು ಅಪ್ಪನ ಸಹಾಯಕ್ಕೆ ಅವರ ಊರಿನವರ ಜೊತೆ ಕಳಿಸುತಾರೆ ಅವಳಹಿಂದೆ ಬಿದ್ದರೆ ನಿನ್ನ ಕೊಂದು ಹೊಡೆದು ಬಡಿದು ಹೆದರಿಸುತಾರೆ ಪ್ರೀತಿ ಪ್ರೇಮಾ ಬಿಟ್ಟು ನಿನ್ನ ಜೀವನದ ಬಗ್ಗೆ ಮಾಡು ಆಚಾರರು ಹೇಳಿ ಹೋಗುತ್ತಾರೆ, ಸಂತೋಷ ವಿ ಪಿಶೆ ಹಾವೇರಿ

 *ಜೀವಾತ್ಮಗಳ ವಿಕ್ರಯ* ವಿದ್ಯಾಧರ ದುರ್ಗೇಕರ ರ ಜೀವಾತ್ಮಗಳ ವಿಕ್ರಯ ಒಂದು ಆಂಗ್ಲ ಕಾದಂಬರಿ. ಅದನ್ನು ಕನ್ನಡದಲ್ಲೂ ತರಬೇಕೆನ್ನುವ ಉದ್ದೇಶ ಇಟ್ಟು ಕನ್ನಡಕ್ಕಾನುವಾದಿಸಿ ಬಿಡುಗಡೆ ಮಾಡಿದ್ದಾರೆ. ಇದು ಅವರ ಕನ್ನಡದ ಮೇಲಿನ ಅಭಿಮಾನವನ್ನು ತೋರಿಸುತ್ತದೆ. ನೈಜ ಘಟನೆ ಆಧಾರಿತ ಕಾದಂಬರಿ; ಪರಿಸರ,ರಾಜಕೀಯ, ಸಾಮಾಜಿಕ,ಧಾರ್ಮಿಕ ದ ಜೊತೆಗೆ ಪ್ರೇಮಕಥೆಯನ್ನು ಬಿತ್ತರಿಸಿಕೊಂಡು ಹೋಗುತ್ತದೆ. ಲೇಖಕನೇ ಇಲ್ಲಿ ನಾಯಕನಾಗಿ ಪಾತ್ರವಹಿಸಿ ಸಾಗಿದ ಕಥೆಯಲ್ಲಿ ಹಲವಾರು ಪಾತ್ರಗಳು ಬಂದು ಹೋಗುತ್ತದೆ. ಬಡವ ಶ್ರೀಮಂತ ಮಧ್ಯೆ ಅಂತರ, ಜಾತಿ ಜಾತಿಗಳ ಮಧ್ಯೆ ಭೇದ ಭಾವ, ಹಳ್ಳಿ ಪಟ್ಟಣದ ಮಧ್ಯೆ ವ್ಯತ್ಯಾಸ, ಹಳ್ಳಿಗರ ಮೇಲಿನ ದೌರ್ಜನ್ಯ, ಸಹಾಯದ ಹೆಸರಲ್ಲಿ ಹಳ್ಳಿಗರಿಗೆ ಮಾಡುವ ಮೋಸ ಹೀಗೆ ಹಲವು ವಿಚಾರಗಳ ಮೇಲೆ ಬೆಳಕು ಬೀರುವ ಒಂದು ಉತ್ತಮ ಕಾದಂಬರಿ. ಕಾದಂಬರಿ ಎಂದಾಗ ಮಹಿಳಾ ಪ್ರಧಾನ ಕೌಟುಂಬಿಕ ಪ್ರೀತಿ ಪ್ರೇಮ ಪ್ರಣಯ ಇವುಗಳ ಸುತ್ತ ಹೆಣೆಯುವ ಕಥೆಗಳೇ ಹೆಚ್ಚು ಅಂತಹ ಕಾದಂಬರಿಗಳ ಮಧ್ಯೆ ವಿಶೇಷವಾಗಿ ನಿಲ್ಲುತ್ತದೆ ಈ ಕಾದಂಬರಿ. ಸುಂದರ ಸೊಬಗಿನ ಕಡಲ ತೀರದ ಕಾರವಾರ ಸಮೀಪದ ಹಳ್ಳಿಯ ಕಥೆ. ಕಡಲು,ನದಿ,ಬೆಟ್ಟ, ಹೀಗೆ ಪ್ರಕೃತಿಯ ಸೌಂದರ್ಯವನ್ನು ವರ್ಣಿಸುತ್ತ ಪರಿಸರ ಕಾಳಜಿಯನ್ನು ತೋರಿಸುವ ಕಾದಂಬರಿ. ನಿಶ್ಚಿಂತೆಯಿಂದ ಹಳ್ಳಿ ಜನರು ಪರಿಸರದ ಮಡಿಲಲ್ಲಿ ಕೃಷಿ ಮೀನುಗಾರಿಕೆಯಲ್ಲಿ ನೆಮ್ಮದಿಯ ಜೀವನ ಮಾಡುತ್ತಿದ್ದರು ಅಂತಹ ಹಳ್ಳಿ ಭೂಸ್ವಾದೀನಕ್ಕೆ ಒಳಗಾದಾಗ ಹಳ್ಳಿಯ ವಾತಾವರಣವೇ ಬದಲಾಗುತ್ತೆ ತಮ್ಮ ನೆಮ್ಮದಿಯನ್ನು ಕಳೆದು ಕೊಳ್ಳಬೇಕಾಗುತ್ತದೆ. ಕೊನೆಗೆ ಪೋಲಿಸ್ ಸ್ಟೇಷನ್ ನೋಡದ ಹಳ್ಳಿಗರು ಅದನ್ನು ನೋಡಬೇಕಾಗುತ್ತದೆ. ನಾಯಕ ಸಮರ ಲಾಯರ್ ಆಗಿದ್ದ ರೋಶನಿ ಹಳ್ಳಿಯರ ಕಷ್ಟ ಅರಿತು ಸಹಾಯ ಮಾಡಲು ಮುಂದಾಗುತ್ತಾರೆ. ಅದಕ್ಕಾಗಿ ಅಲೆದಾಟ ಹೊಡೆದಾಟ ಹೋರಾಟ ಎಲ್ಲವೂ ನಡೆದು ಹೋಗುತ್ತದೆ. ಇದರ ಮಧ್ಯೆ ಚಿಗುರೊಡೆಯುವ ಪ್ರೀತಿ ನೋವು ಸಮಸ್ಯೆ ಹೀಗೆ ಹಲವು ಮಜಲುಗಳ ಕಾದಂಬರಿ. ಇಲ್ಲಿ ಬರುವ ಪಾತ್ರಗಳೆಲ್ಲ ಮುಖ್ಯ. ದಾಮುವಿನಂತಹ ರಾಜಕೀಯ ಪುಡಾರಿ ಹಳ್ಳಿಗರ ಮುಗ್ಧತೆ ಉಪಯೋಗಿಸಿ ಕಣ್ಣೀರು ಒರೆಸುವ ನಾಟಕ ಆಡಿ ತನ್ನ ಬೇಳೆ ಬೇಯಿಸುಕೊಳ್ತಾನೆ. ತಿರುಗಿ ಬಿದ್ದವರಿಗೆ ಹಣ ಬಲದಿಂದ ಜನ ಬಲದಿಂದ ಮರೆಯಲ್ಲೇ ನಿಂತು ಹಿಂಸೆ ನೀಡುತ್ತಾನೆ. ಇಂತಹ ರಾಜಕಾರಣಿಗಳು ನಮ್ಮ ಸುತ್ತ ಇರುವುದು ಸಾಮಾನ್ಯವೇ ಆಗಿದೆ. ಹಳ್ಳಿಯೇ ಸರ್ವಸ್ವ ಆಗಿರುವ ಹಳ್ಳಿಜನರಿಗೆ ಎದ್ದೇಳಬೇಕೆಂದಾಗ ಹಳ್ಳಿಯ ಜನರ ಪೀಕಲಾಟ, ಹೋರಾಟ ನಾನಾ ತೊಂದರೆಗಳು ಎಲ್ಲವೂ ಮನಮುಟ್ಟುವಂತಿದೆ. ಜೊತೆಗೆ ಸರಕಾರಿ ಕೆಲಸ ದೇವರ ಕೆಲಸ ಎಂದು ಬೋರ್ಡ್ ಹಾಕಿ ಎದುರೆದುರೇ ಲಂಚ ಪಡೆಯವ, ಜನ ಸಾಮಾನ್ಯನನ್ನು ಲೆಕ್ಕಿಸದೇ ಅಧಿಕಾರದ ದರ್ಪತೋರಿಸುವ ಸರಕಾರಿ ಅಧಿಕಾರಿಗಳ ಮನಸ್ಥಿತಿ ಇಲ್ಲಿ ಕಾಣಬಹುದು. ಕೊನೆಗೂ ಹಳ್ಳಿಗರು ಊರು ಬಿಡಬೇಕಾದ ಪರಿಸ್ಥಿತಿ, ನಾಯಕನ ಪ್ರೀತಿ ಎಲ್ಲಾ ಜೀವತ್ಮಾಗಳ ವಿಕ್ರಯವಾಗಿ ಸಾಗುವ ಕಾದಂಬರಿ. ಬಂಡವಾಳಶಾಹಿ ಜಾಗತಿಕರಣದಲ್ಲಿ ಮುಗ್ಧ ಹಳ್ಳಿಗರ ಮೇಲೆ ನಡೆಯುವ ದೌರ್ಜನ್ಯ,ವಂಚನೆ ಎಲ್ಲಾ ಕಾಣುತ್ತದೆ. ಒಂದು ಉತ್ತಮ ಕಾದಂಬರಿ ಮಿಸ್ ಮಾಡಬೇಡಿ ಕೊಂಡು ಓದಿ..... ✍ಯತೀಶ್ ಕಾಮಾಜೆ

 #ವಿಶ್ವ_ಪುಸ್ತಕ_ದಿನ #ಪುಸ್ತಕ_ವಿಮರ್ಶೆ #ಕಾದಂಬರಿ_ಜೀವಾತ್ಮಗಳ_ವಿಕ್ರಯ "ಜೀವಾತ್ಮಗಳ ವಿಕ್ರಯ" ಕಾದಂಬರಿಯ ಹೆಸರೇ ನನ್ನ ಓದಲು ಪ್ರೇರೇಪಿಸಿತು. ಹೆಸರಾಂತ ಆಂಗ್ಲ ಕಾದಂಬರಿಕಾರರಾದ ಶ್ರೀ ವಿದ್ಯಾಧರ ದುರ್ಗೇಕರ್ ರವರ ಮೊದಲ ಕನ್ನಡ ಕಾದಂಬರಿ ಈ ಜೀವಾತ್ಮಗಳ ವಿಕ್ರಯ ಅಭಿವೃದ್ಧಿ ಮತ್ತು ಪರಿಸರದ ವಿಷಯಗಳು ಬಂದಾಗ ಬಹಳ ಸಲ‌ ಅಭಿವೃದ್ಧಿಯ ಹೆಸರಿನಲ್ಲಿ ಮುಗ್ದ ಜನರ ಶೋಷಣೆ ಮತ್ತು ಪರಿಸರದ ಮೇಲಿನ ದೌರ್ಜನ್ಯವು ಗೆಲುವು ಸಾಧಿಸಿರುವುದನ್ನು ನಾವು ಕಾಣುತ್ತೇವೆ. ಈ ಕಾದಂಬರಿ ಸಹ ಅದೇ ರೀತಿಯ ಕಥಾವಸ್ತು ಇಟ್ಟುಕೊಂಡು ವಿಭಿನ್ನವಾದ ನಿರೂಪಣೆಯೊಂದಿಗೆ ಓದುಗರ ಮನಸೆಳೆಯುತ್ತದೆ. ಬಯಲು ಸೀಮೆಯ ನನಗೆ ಕರಾವಳಿಯ ಬದುಕು ಅಷ್ಟಾಗಿ ಪರಿಚಿತವಿರಲಿಲ್ಲ ಈ ಕಾದಂಬರಿಯ ಮೊದಲೆರಡು ಅದ್ಯಾಯ ಓದುವಾಗ ಕರಾವಳಿಯ ಚಿತ್ರಣ ನನ್ನ ಕಣ್ಣ ಮುಂದೆ ಹಾದು ಹೋಯಿತು. ಪ್ರಸ್ತುತ ಕಾದಂಬರಿಯಲ್ಲಿ ಕಾದಂಬರಿಕಾರರು ಬೃಹತ್ ಕೈಗಾರಿಕಾ ಸ್ಥಾಪನೆಗೆ ಅಲಿಗದ್ದೆ ಸೇರಿದಂತೆ ಮೂರು ಹಳ್ಳಿಗಳನ್ನು ವಶಪಡಿಸಿಕೊಳ್ಳಲು ರಾಜಕಾರಣಿಗಳಾದ ಕುಬೇರ, ಮತ್ತು ದಾಮು ಹೇಗೆ ಹೊಂಚು ಹಾಕಿ ಸಂಚು ಮಾಡುವರು. ಇದಕ್ಕೆ ‌ಯುವ ವಕೀಲೆ ರೋಶನಿ ಮತ್ತು ಕಾಲೇಜು ಅದ್ಯಾಪಕ ಅಮರ್ ಹೇಗೆ ಎಲ್ಲಾ ರೀತಿಯಲ್ಲಿ ಪ್ರತಿಭಟನೆಗಳನ್ನು ಆಯೋಜಿಸಿ ಹಳ್ಳಿಯ ಜನರಿಗೆ ನ್ಯಾಯ ಕೊಡಿಸಲು ಬಹಳ ‌ಪ್ರಾಮಾಣಿಕ ಪ್ರಯತ್ನ ಮಾಡುವರು, ಆದರೆ ಭ್ರಷ್ಟಾಚಾರದ ವ್ಯವಸ್ಥೆ, ಅಪ್ರಮಾಣಿಕ ಪೊಲೀಸರು, ಅನಕ್ಷರಸ್ಥರು, ಚಟದಾಸರು ಈಗೆ ಹಲವಾರು ಜನರ ಷಡ್ಯಂತ್ರದಿಂದ ಹಳ್ಳಿಯ ಜನರು ಕೇವಲ ತಮ್ಮ ಜಮೀನನ್ನು ಬಿಟ್ಟು ಹೊರಡುವುದಿಲ್ಲ ತಮ್ಮ ಜೀವಾತ್ಮಗಳ ಮಾರಿಕೊಂಡು ನಿರ್ಜೀವವಾಗಿ ತಿಳಿಯದ ಜಾಗಕ್ಕೆ ಹೊರಡುವ ಜನರ ಕಂಡು ಕಾದಂಬರಿಯ ಕಡೆಯಲ್ಲಿ ನಮ್ಮ ಕಣ್ಣಲ್ಲಿ ಒಂದೆರಡು ಹನಿ ಜಿನುಗದಿರದು . ಕುಬೇರ ಮತ್ತು ದಾಮುರಂತಹ ಗೋಮುಖ ವ್ಯಾಘ್ರರು ಹಳ್ಳಿಯ ಜನರನ್ನು ವಂಚಿಸುತ್ತಾ ಬಹುರಾಷ್ಟ್ರೀಯ ಕಂಪನಿಗೆ ಒಳಗೊಳಗೆ ಹೇಗೆ ಸಹಕರಿಸಿ ಸ್ವ ಕಲ್ಯಾಣ ಮಾಡಿಕೊಳ್ಳುವರು. ಹಾಗೂ ಹಳ್ಳಿಯಲ್ಲಿ ಅನೈತಿಕ ಚಟುವಟಿಕೆಗಳನ್ನು ಪ್ರೋತ್ಸಾಹ ನೀಡಿ ಹೇಗೆ ಹಳ್ಳಿಯ ವಾತಾವರಣದಲ್ಲಿ ಕೆಟ್ಟ ಬದಲಾವಣೆ ತಂದರು ಎಂಬುದನ್ನು ಕಾದಂಬರಿಕಾರರು ಚೆನ್ನಾಗಿ ಬಿಂಬಿಸಿದ್ದಾರೆ ಇಂದಿಗೂ ನಮ್ಮ ಸಮಾಜದಲ್ಲಿ ಇಂತವರು ಇರುವುದು ದುರದೃಷ್ಟಕರ. ಹಳ್ಳಿಯಲ್ಲಿ ಧರ್ಮ ಸಮನ್ವಯತೆಯನ್ನು ಬಿಂಬಿಸುವಲ್ಲಿ ಕಾದಂಬರಿಕಾರರು ಉತ್ತಮವಾದ ಚಿತ್ರ ಕಟ್ಟಿಕೊಟ್ಟಿದ್ದಾರೆ, ಜೋನ್ , ಅಲೋಮ, ಪ್ರಾನ್ಸಿಸ್, ಮತ್ತು ಕಥಾನಾಯಕನ ನಡುವಿನ ಸಂಬಂಧ ,ಹಳ್ಳಿಯ ಜನರ ಅನ್ಯೋನ್ಯತೆ ಬಿಂಬಿಸಿದ್ದಾರೆ ಇದು ಇಂದಿನ ಸಮಾಜಕ್ಕೆ ಬೇಕಾದ ತುರ್ತು ಅಗತ್ಯ ಗಂಭೀರವಾದ ವಿಷಯದ ಕುರಿತ ಕಾದಂಬರಿಯಲ್ಲಿ ಎರಡು ಮೂರು ಕಡೆ ಲೇಖಕರು ಓದುಗರಿಗೆ ಶೃಂಗಾರ ರಸದೌತಣ ನೀಡಿದ್ದಾರೆ. ಯುವ ಜೋಡಿ ರೋಶನಿ ಮತ್ತು ಸಮರ್ ರೊಮ್ಯಾಂಟಿಕ್ ದೃಶ್ಯಗಳು ಓದುವಾಗ ಮೈಬಿಸಿಯಾಗುವುದು ಸುಳ್ಳಲ್ಲ . ಒಟ್ಟಾರೆ ಹೇಳುವುದಾದರೆ ಈ ಕಾದಂಬರಿಯಲ್ಲಿ‌ ಅಲ್ಲಲ್ಲಿ ಕೆಲವು ಅನುವಾದ ದೋಷಗಳನ್ನು ಹೊರತುಪಡಿಸಿದರೆ ಚಿಂತನೆಗೆ ಹಚ್ಚುವ, ಸಮಾಜದ ಬಗ್ಗೆ ಕಾಳಜಿ ಇರುವ ,ಪರಿಸರ ಕಾಳಜಿ ಇರುವ ನಮ್ಮಲ್ಲಿ ಜಾಗೃತಿ ಮೂಡಿಸುವ ಒಂದು ಸುಂದರ ಕಾದಂಬರಿ ಎಂದು ಹೇಳಬಹುದು. ಇಂದು ವಿಶ್ವ ಪುಸ್ತಕ ದಿನ ಈ ದಿನದಂದು ನೀವು ಸಹ ಇಂತಹ ಕಾದಂಬರಿಯನ್ನು ಓದಲು ಸಲಹೆ ನೀಡುವೆನು. ವಂದನೆಗಳೊಂದಿಗೆ ಸಿ ಜಿ ವೆಂಕಟೇಶ್ವರ ತುಮಕೂರು ಕಾದಂಬರಿ ಹೆಸರು: ಜೀವಾತ್ಮಗಳ ವಿಕ್ರಯ ಕಾದಂಬರಿಕಾರರ ಹೆಸರು: ವಿದ್ಯಾಧರ ದುರ್ಗೇಕರ್. ಪ್ರಕಾಶನ: ಅವಂತ ಗಾರ್ಡೆ ಪ್ರಕಾಶನ ಬೆಂಗಳೂರು. -ಸಿ.ಜಿ.ವೆಂಕಟೇಶ್ವರ ಬೆಲೆ:೨೨೫

Best Sellers
ಏರದ ಬಳೆ
ಬೀChi, Beechi
Rs. 117/-   Rs. 130
ಮಾರ್ಗ ತೋರುವ ಮಹಾ ಚೇತನಗಳು
ಅಬ್ದುಲ್ ಕಲಾಂ ಎ ಪಿ ಜೆ, Abdul Kalam A p j
Rs. 144/-   Rs. 160
Junior Encyclopedia Awesome Facts About Science
Adrien Pierces
Rs. 113/-   Rs. 125
ನಾಳೆಗೂ ಇರಲಿ ನೀರು : ಜಲದಾಹದಿಂದ ತತ್ತರಿಸುತ್ತಿರುವ ಜಗತ್ತಿಗೆ ಇಸ್ರೇಲ್ ನ ಪರಿಹಾರ
ಸೇತ್ ಎಂ. ಸಿಗೆಲ್, SETH M. SIEGEL
Rs. 203/-   Rs. 225

Latest Books
ಸೀತಾಳೆದಂಡೆಯ ಸದ್ದಿಲ್ಲದ ಕಥೆಗಳು
ಭಾರತಿ ಹೆಗಡೆ, Bharathi Hegde
Rs. 198/-   Rs. 220
ಶ್ರೀರಾಮಾಯಣ ದರ್ಶನಂ : ಕುವೆಂಪು
ಕುವೆಂಪು, Kuvempu
Rs. 200/-
ವಿರೋಧ ವಿಲಾಸ : ವಕ್ರೋಕ್ತಿ ವರಸೆಗಳು (ಎಂ ಎಸ್ ಕೆ ಪ್ರಭು)
ಎಂ ಎಸ್ ಕೆ ಪ್ರಭು, M S K Prabhu
Rs. 120/-
ಬಹುವಚನ ಭಾರತ (ಸಮಕಾಲೀನ ಸಮಾಜಕ್ಕೊಂದು ಪ್ರತಿಕ್ರಿಯೆ)
ರಾಜಶೇಖರ್ ಜಿ, Rajashekar G
Rs. 225/-   Rs. 250


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.