Items
0
Total
  0.00 
Welcome Guest.

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪುಸ್ತಕ ಪ್ರಕಾಶನ, Pustaka Prakashana
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 158
ಪುಸ್ತಕದ ಗಾತ್ರ : 1/8 Demy Size
ಕೋಡ್ : 177577

ಇದು ಶ್ರೀ ಪೂರ್ಣಚಂದ್ರ ತೇಜಸ್ವಿಯವರ ಪ್ರಥಮ ಕಾದಂಬರಿ. ಕಾದಂಬರಿಯ ಗುಣಾವಗುಣಗಳೇನೇ ಇರಲಿ, ನವ್ಯಶೈಲಿಯ ನೈರಾಶ್ಯ, ಹಳಹಳಿಕೆ ಇವ್ಯಾವೂ ಇಲ್ಲದೆ ಈ ಕತೆ ಸರಳ ಸುಂದರವಾಗಿದೆ. ಹದಿಹರೆಯದ ದಿನಗಳಲ್ಲೇ ತೇಜಸ್ವಿಯವರಿಗಿದ್ದ ಬುದ್ಧಿಮತ್ತೆ, ಯಾವುದನ್ನೇ ಆಗಲಿ ಪ್ರಾಂಜಲ ಮನಸ್ಸಿನಿಂದ ವಿಶ್ಲೇಷಿಸುವ ಅವರ ಆಲೋಚನಾ ಕ್ರಮವನ್ನು ಅವರ ಪ್ರಥಮ ಪ್ರಯತ್ನವೇ ಸಾಬೀತು ಪಡಿಸಿದೆ. ಇಲ್ಲಿ ‘ಕರ್ವಾಲೋ’ ಮತ್ತು ‘ಜುಗಾರಿ ಕ್ರಾಸ್’ ಕಾದಂಬರಿಗಳ ಕುತೂಹಲ ಜಗತ್ತು, ‘ನಿಗೂಢ ಮನುಷ್ಯರು’ ಕೃತಿಯ ನಿಗೂಢತೆ ‘ಚಿದಂಬರ ರಹಸ್ಯ’ದ ಪ್ರಕೃತಿ ಮತ್ತು ಮಾನವನ ಅವಿನಾ ಸಂಬಂಧ ಇತ್ಯಾದಿ ಅವರ ಬರಹಗಳ ಮುಖ್ಯ ಗುಣಗಳೆಲ್ಲವೂ ಈ ಪ್ರಥಮ ಕಾದಂಬರಿಯಲ್ಲಿ ಬೀಜಸ್ವರೂಪದಲ್ಲಿವೆ. ಓದುಗರು ಪತ್ತೇದಾರಿ ಕಾದಂಬರಿಯನ್ನೇ ಓದಿದಂತೆ ಮೊದಲಿಂದ ಕೊನೆಯವರೆಗೂ ಒಂದೇ ಸಲಕ್ಕೆ ಓದಿ ಮುಗಿಸುವಂತಹ ಈ ಕಾದಂಬರಿಯಲ್ಲಿ ಮಾಟಮಂತ್ರ, ಹಂದಿ, ಕಾಡುಗಳ ನಿಗೂಢ ಜಗತ್ತು ನಿಮ್ಮ ಮೈ ನವಿರೇಳಿಸುತ್ತವೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭)- ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. ೧೯೮೭ರಲ್ಲಿ `ಚಿದಂಬರ ರಹಸ್ಯ` ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಂದೆ-ಮಕ್ಕಳಿಬ್ಬರೂ ಪ್ರಶಸ್ತಿ ಗಳಿಸಿದ ವಿಕ್ರಮವನ್ನು ಸೃಷ್ಟಿಸಿದ ಜೋಡಿಯಲ್ಲಿ ಎರಡನೆಯವರು. ವಿಜ್ಞಾನ ಮತ್ತು ಇತರ ಕೆಲವು ಸಾಹಿತ್ಯೇತರ ಕ್ಷೇತ್ರಗಳಲ್ಲಿಯೂ ತಮ್ಮತನವನ್ನು ಮೆರೆದಿರುವ ವಿಶಿಷ್ಟ ಲೇಖಕರಾಗಿದ್ದಾರೆ. ಕನ್ನಡ ಕಥೆ-ಕಾದಂಬರಿಗಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನೇ ನೆಟ್ಟ ತೇಜಸ್ವಿ ಅವರು ವಿಶಿಷ್ಟ ಪ್ರವಾಸ ಕಥನ, ಬೇಟೆ ಸಾಹಿತ್ಯ ಹಾಗೂ ಅನುವಾದಿತ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಹೊರಟವರು, ಯಶಸ್ಸನ್ನು ಮೆರೆದವರು. ತೇಜಸ್ವಿಯವರನ್ನು ಕುರಿತು ಸಂಶೋಧನೆ ನಡೆಸಿ ಪಿ‌ಎಚ್.ಡಿ ಪದವಿ ಗಳಿಸಿದ್ದಾರೆ.

uploads/authorimages/545.jpg
ಲೇಖಕರ ಇತರ ಕೃತಿಗಳು
Rs. 1392    Rs. 1183
Best Sellers
Oxford School Atlas With CD - English
Oxford
Rs. 337/-   Rs. 374
ಪ್ರಪಂಚದ ಪ್ರಸಿದ್ಧ ವಿಜ್ಞಾನಿಗಳು
ರಮೇಶ್ ಬೆ ಗೋ, Ramesh B G
Rs. 45/-   Rs. 50
ತಿಂಮನ ತಲೆ : ಬೀchi
ಬೀChi, Beechi
Rs. 68/-   Rs. 75
ಮನೋನಂದನ
ರಾಶಿ (ಎಂ ಶಿವರಾಂ), Rashi (M Shivaram)
Rs. 149/-   Rs. 165

Latest Books
ರೂಪ ರೂಪಗಳನು ದಾಟಿ
ನಾಗಭೂಷಣ ಡಿ ಎಸ್, Nagabhushana D S
Rs. 360/-   Rs. 400
ವಾಸನ್ಸ್ ಈಯರ್ ಬುಕ್ 2017
ವಾಸನ್ ಪಬ್ಲಿಕೇಷನ್ಸ್ ಸಂಪಾದಕ ಮಂಡಳಿ, Vasan publications Editorial Board
Rs. 225/-   Rs. 250
ಶ್ರೀ ಭಾಗವತ ಕಥಾ ಪ್ರಪಂಚ
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 315/-   Rs. 350
ಕೇಡಿಲ್ಲವಾಗಿ ಹಾಡುವೆ (ವಚನಗಾಯನ ಪರಂಪರೆಯ ನೆಲೆ ನಿಲುವುಗಳು)
ಜಯದೇವಿ ಜಂಗಮಶೆಟ್ಟಿ, Jayadevi Jangamashetty
Rs. 225/-   Rs. 250


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.