Items
0
Total
  0.00 
Welcome Guest.

 
ಕನ್ನಡ ಬರಹದ ಸೊಲ್ಲರಿಮೆ - ೬ (ಇದು ಕನ್ನಡದ್ದೇ ವ್ಯಾಕರಣ)
ಲೇಖಕರು: ಶಂಕರ ಬಟ್ ಡಿ.ಎನ್, Shankara Bhat D N

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 300    
10%
Rs. 270/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಶಂಕರ ಬಟ್ ಡಿ.ಎನ್, D N Shankara Bhat
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2018
ರಕ್ಷಾ ಪುಟ : ಸಾದಾ
ಪುಟಗಳು : 315
ಪುಸ್ತಕದ ಗಾತ್ರ : 1/8 Demy Size
ಕೋಡ್ : 1123547

"ಕನ್ನಡ ಬರಹದ ಸೊಲ್ಲರಿಮೆ-6"
ಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣವನ್ನು ಒದಗಿಸಿಕೊಡುವ ಡಿ. ಎನ್. ಶಂಕರ ಭಟ್ ಅವರ ಪ್ರಯತ್ನದಲ್ಲಿ ಇದು ಆರನೆಯ ತುಂಡಾಗಿ ಹೊರಬರುತ್ತಿದೆ. ಇದರಲ್ಲಿ ಒಳಸೊಲ್ಲುಗಳ ಬಳಕೆ ಮತ್ತು ಸೊಲ್ಲುಗಳ ಜೋಡಣೆ ಎಂಬ ಎರಡು ವಿಭಾಗಗಳಿವೆ.

ಮೊದಲನೆಯದಲ್ಲಿ ಒಂದು ಸೊಲ್ಲನ್ನು ಇನ್ನೊಂದು ಸೊಲ್ಲಿನ ಪಾಂಗನ್ನಾಗಿ, ಎಸಕಪರಿಚೆಯನ್ನಾಗಿ, ಇಲ್ಲವೇ ಅದರಲ್ಲಿ ಬರುವ ಪದದ ಪರಿಚೆನುಡಿತವನ್ನಾಗಿ ಮಾಡುವುದು ಹೇಗೆ ಎಂಬುದನ್ನು ತಿಳಿಸಲಾಗಿದೆ. ಸೊಲ್ಲಿನಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಅದನ್ನು ಈ ರೀತಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಬಹುದು, ಇಲ್ಲವೇ ಅದರಲ್ಲಿ ಯಾವ ಮಾರ್ಪಾಡನ್ನೂ ಮಾಡದೆ ಹಾಗೆಯೇ ಎತ್ತುಪದಗಳೊಂದಿಗೆ ಸೇರಿಸಿಯೂ ಇಂತಹ ಕೆಲಸಗಳಲ್ಲಿ ತೊಡಗಿಸಬಹುದು. ಇದನ್ನು ನಡೆಸುವ ಬಗೆ ಹೇಗೆ ಎಂಬುದನ್ನು ಈ ಹದಿಮೂರನೇ ಪಸುಗೆಯಲ್ಲಿ ತಿಳಿಸಲಾಗಿದೆ.

ಎರಡನೆಯದರಲ್ಲಿ ಒಂದು ಇಲ್ಲವೇ ಹೆಚ್ಚು ಸೊಲ್ಲುಗಳನ್ನು ಜೋಡಿಸಿ ಒಂದೇ ಸೊಲ್ಲನ್ನಾಗಿ ಮಾಡುವುದಕ್ಕಾಗಿ ಮತ್ತು, ಇಲ್ಲವೇ, ಆದರೆ ಎಂಬಂತಹ ಪದಗಳನ್ನು ಬಳಸುವುದು, ಊ, ಓ, ಎಂಬಂತಹ ಒಟ್ಟುಗಳನ್ನು ಬಳಸುವುದು, ಇಲ್ಲವೇ ಮಾಡಿ, ಮಾಡುವ, ಮಾಡದೆ ಎಂಬಂತಹ ಎಸಕಪದಗಳ ಜೋಡಿಸುವ ರೂಪಗಳನ್ನು ಬಳಸುವುದು ಎಂಬಂತಹ ಹೊಲಬುಗಳ ಬಳಕೆಯನ್ನು ತಿಳಿಸಲಾಗಿದೆ.

ಕನ್ನಡಕ್ಕೆ ಅದರದೇ ಆದ ಸೊಲ್ಲರಿಮೆಯ ನಡವಳಿಯನ್ನು ಬೆಳೆಸುವುದಕ್ಕಾಗಿ ಈ ಪುಸ್ತಕದಲ್ಲಿ ಕನ್ನಡದವೇ ಆದ ಕೆಲವು ಅರಿಮೆಯ ಪದಗಳನ್ನು ಹೊಸದಾಗಿ ಉಂಟುಮಾಡಲಾಗಿದೆ. ಇವುಗಳ ಪಟ್ಟಿಯೊಂದನ್ನು ಪುಸ್ತಕದಲ್ಲಿ ಮೊದಲಿಗೇನೆ ಕೊಡಲಾಗಿದೆ.

ಡಾ. ಡಿ. ಎನ್. ಶಂಕರ ಭಟ್ ಅವರು ಜಗತ್ತಿನ ಹೆಸರಾಂತ ಭಾಷಾ ವಿಜ್ಞಾನಿಗಳು. ಮದ್ರಾಸ್ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ. ಮತ್ತು ಪುಣೆ ವಿಶ್ವವಿದ್ಯಾಲಯದಿಂದ ನುಡಿಯರಿಮೆ(linguistics)ಯಲ್ಲಿ ಪಿ.ಎಚ್.ಡಿ. ಪಡೆದಿರುವ ಭಟ್ಟರು, ಅಮೇರಿಕಾದ ಸ್ಟ್ಯಾನ್ ಫೋರ್ಡ್ ಯೂನಿವರ್ಸಿಟಿ, ಆಸ್ಟ್ರೇಲಿಯಾದ ಲಾ ಟ್ರೋಬೆ ಯೂನಿವರ್ಸಿಟಿ, ಬೆಲ್ಜಿಯಂ ದೇಶದ ಆಂಟ್ವರ್ಪ್ ಯೂನಿವರ್ಸಿಟಿ, ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್‍ನಂತಹ ಜಗತ್ತಿನ ಹಲವಾರು ಮುಂಚೂಣಿಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನ, ಮಣಿಪುರ ವಿಶ್ವವಿದ್ಯಾಲಯ, ಪುಣೆಯಲ್ಲಿರುವ ಡೆಕ್ಕನ್ ಕಾಲೇಜ್ ಮುಂತಾದೆಡೆ ಕಲಿಸುಗರಾಗಿ, ಸಂಶೋಧಕರಾಗಿ ಕೆಲಸ ಮಾಡಿದ್ದಾರೆ. ನುಡಿಯರಿಮೆಯ ಸುತ್ತ ಬರೆದಿರುವ ಅವರ ಹತ್ತಾರು ಹೊತ್ತಗೆಗಳು ಮತ್ತು ಸಂಶೋಧನೆಯ ಪೇಪರಗಳು (research papers) ಜಗತ್ತಿನೆಲ್ಲೆಡೆ ಹೆಸರುಗಳಿಸಿವೆ.

ಕನ್ನಡ ನುಡಿಯ ಬಗ್ಗೆ ಶಂಕರ ಭಟ್ಟರು ಹಲವು ವರ್ಷಗಳ ಆಳವಾದ ಸಂಶೋಧನೆ ನಡೆಸಿದ್ದು, ಈ ನಿಟ್ಟಿನಲ್ಲಿ ಪಡೆದುಕೊಂಡ ತಿಳುವಳಿಕೆಗಳನ್ನು ಒಗ್ಗೂಡಿಸಿ ಹಲವು ಹೊತ್ತಗೆಗಳನ್ನು ಬರೆದಿದ್ದಾರೆ. ಕನ್ನಡ ನುಡಿಯು ನಡೆದು ಬಂದ ದಾರಿ, ಕನ್ನಡದಲ್ಲಿರುವ ವ್ಯಾಕರಣದ ನಿಜವಾದ ಕಟ್ಟಲೆಗಳು, ಕನ್ನಡದ ಪದ ಸೊಗಡು ಮುಂತಾದವುಗಳ ಕುರಿತು ಭಟ್ಟರು ಬರೆದಿರುವ ಕನ್ನಡ ನುಡಿಯರಿಮೆಯ ಹೊತ್ತಗೆಗಳು, ಹಿಂದಿನಿಂದ ಕಣ್ಣುಮುಚ್ಚಿ ನಂಬಿಕೊಂಡು ಬಂದಿದ್ದ ಹಲವಾರು ತಪ್ಪು ತಿಳುವಳಿಕೆಗಳನ್ನು ಮತ್ತು ಅವುಗಳನ್ನು ಸರಿಪಡಿಸುವ ಬಗೆಗಳನ್ನು ಕನ್ನಡ ಸಮಾಜಕ್ಕೆ ತೋರಿಸಿಕೊಟ್ಟಿವೆ.

ಭಾಷಾ ವಿಜ್ಞಾನದಲ್ಲಿ ಇವರ ಕೆಲಸವನ್ನು ಗುರುತಿಸಿ ಹಂಪಿ ವಿಶ್ವವಿದ್ಯಾಲಯವು ಇವರಿಗೆ `ನಾಡೋಜ` ಪದವಿಯನ್ನೂ ಹಾಗೂ ಕರ್ನಾಟಕ ಸರಕಾರವು ಪಂಪ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ.

ಲೇಖಕರ ಇತರ ಕೃತಿಗಳು
10%
ಕನ್ನಡಕ್ಕೆ ಬೇಕು ಕನ್ನಡದ್ದೇ ....
ಶಂಕರ ಬಟ್ ಡಿ.ಎನ್, Shankara Bhat D N
Rs. 150    Rs. 135
10%
ಇಂಗ್ಲಿಶ್ ಕನ್ನಡ ಪದನೆರಕೆ ....
ಶಂಕರ ಬಟ್ ಡಿ.ಎನ್, Shankara Bhat D N
Rs. 400    Rs. 360
10%
ಕನ್ನಡ ಪದಗಳ ಒಳರಚನೆ
ಶಂಕರ ಬಟ್ ಡಿ.ಎನ್, Shankara Bhat D N
Rs. 160    Rs. 144
Rs. 150    Rs. 135
Best Sellers
ಸಾಹಿತ್ಯ ವಿಮರ್ಶೆಯ ಕೆಲವು ತತ್ವಗಳು
ಗೋಕಾಕ ವಿ ಕೃ, Gokak V K
Rs. 275/-   Rs. 305
ಮಾಯಾಚೌಕಗಳ ಮಾಯಾ ಪ್ರಪಂಚ
ವಿಶ್ವನಾಥರಾವ್ ಬಿ ಕೆ, Vishwanatha Rao B K
Rs. 54/-   Rs. 60
ಏನೇ ಆಗಲಿ ಒಳ್ಳೆಯದನ್ನೇ ಮಾಡಿ ಮಾಡುತ್ತಲೇ ಇರಿ
ಕೆಂಟ್ ಎಂ ಕೀತ್, Kent M Keith
Rs. 81/-   Rs. 90
ಜನರಲ್ ನಾಲೆಡ್ಜ್ ಕರ್ನಾಟಕ
ಗುರುರಾಜ್, Gururaj
Rs. 86/-   Rs. 95

Latest Books
ಕಶೀರ : ಕಾದಂಬರಿ
ಸಹನಾ ವಿಜಯಕುಮಾರ್, Sahana Vijayakumar
Rs. 306/-   Rs. 340
ನಿಜಲಿಂಗ (ಕಾದಂಬರಿ) ಕುಂ ವೀರಭದ್ರಪ್ಪ
ವೀರಭದ್ರಪ್ಪ ಕುಂ, Veerabhadrappa Kum
Rs. 180/-   Rs. 200
ಉಳಿದವರು ಕಂಡಂತೆ - ವಸು ಮಳಲಿ
ಮೀನಾಕ್ಷಿ ಬಾಳಿ, Meenakshi Bali
Rs. 135/-   Rs. 150
ಪುಸ್ತಕ ಪ್ರೇಮಿ ಡಾ. ಅಂಬೇಡ್ಕರ್
ಶಿವರಾಂ ಎನ್ ಆರ್, Shivaram N R
Rs. 180/-   Rs. 200


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.