|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕನ್ನಡ ಉಳಿಯ ಬೇಕು. ಕನ್ನಡಿಗರ ಶಕ್ತಿ ಹೆಚ್ಚಬೇಕು. ಇದು ಎಲ್ಲ ಕನ್ನಡ ಪ್ರೇಮಿಗಳ, ಕನ್ನಡ ಹೋರಾಟಗಾರರ ಒಕ್ಕೊರಲ ಕೂಗು. ಆದರೆ, ಹೇಗೆ? ಕೇವಲ ಭಾವನಾತ್ಮಕ ಒತ್ತಡಗಳಿಂದ ಕನ್ನಡದ ಏಳಿಗೆ ಸಾಧ್ಯವೇ? ಜಾಗತೀಕರಣದ ಈ ದಿನದಲ್ಲಿ, ಕೇಂದ್ರ ಸರ್ಕಾರಿ ಪ್ರಾಯೋಜಿತ ಹಿಂದಿ ಹೇರಿಕೆಯ ಅಬ್ಬರದ ನಡುವೆ ಕನ್ನಡದ ಸವಾಲುಗಳೂ ಬದಲಾಗಿದೆ. ಹಾಗಾಗಿ ಕನ್ನಡ ಭಾಷೆಯ ಸವಾಲುಗಳ ಉತ್ತರಗಳೂ ಜಟಿಲವಾಗಿವೆ.ಕುತುಹಲದ ವಿಷಯವೆಂದರೆ, ಕನ್ನಡದ ಈ ಎಲ್ಲ ಸಮಸ್ಯೆಗಳಿಗೆ ಜಗತ್ತಿನ ಯಾವ್ಯಾವುದೋ ಮೂಲೆಯ ಭಾಷೆಗಳಲ್ಲಿ ಉತ್ತರಗಳು ಇವೆ. ನಶಿಸುತ್ತಿರುವ ಅನೇಕ ಭಾಷೆಗಳ ಜನರ ವೈವಿಧ್ಯಮಯ ಪ್ರಯೋಗಗಳಿಂದ ತಮ್ಮ ಭಾಷೆಯ ಬೇರುಗಳನ್ನು ಭದ್ರಗೊಳಿಸಿಕೊಂಡಿದ್ದಾರೆ. ಇವುಗಳನ್ನೆಲ್ಲ ಲೇಖಕ ಶ್ರೀ ವಸಂತ ಶೆಟ್ಟಿ ಅಧ್ಯಯನ ಮಾಡಿ. ವಿಶಿಷ್ಯ ಅಂಕಿ ಅಂಶಗಳನ್ನು ಕಲೆಹಾಕಿ, ದಾಖಲೆ ಸಮೇತ, ಉದಯವಾಣಿಯ ‘ಕನ್ನಡ ಜಗತ್ತು‘ ಅಂಕಣದಲ್ಲಿ, ೫೦ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಆ ಅಂಕಣಗಳ ಸಂಗ್ರಹವೇ ‘ಕನ್ನಡ ಜಗತ್ತು‘ ಅನ್ನುವ ಈ ಪುಸ್ತಕ. ಕನ್ನಡದ ಬಗ್ಗೆ ಕಾಳಜಿಯುಳ್ಳ ಹಾಗೂ ಈ ಭಾಷೆಗಿರುವ ಅನನ್ಯ ಸಾಧ್ಯತೆಗಳ ಬಗ್ಗೆ ಕುತೂಹಲವಿರುವ ಪ್ರತಿಯೋಬ್ಬರೂ ಓದಬೇಕಾದ ಕೃತಿಯಿದು.
|
| |
|
|
|
|
|
|
|
|
|