Items
0
Total
  0.00 
Welcome Guest.

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಭಾಷಾ ಪ್ರಕಾಶನ, Bhasha Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Demy Size
ಕೋಡ್ : 182693

ಒಂದಲ್ಲ ಒಂದು ಬಗೆಯ ನಲ್ಬರಹ(ಸಾಹಿತ್ಯ)ಕ್ಕಾಗಿ ಮಾತ್ರ ಬಳಸಲಾಗುತ್ತಿದ್ದ ಕನ್ನಡವಿಂದು ಹಿಂದೆಂದೂ ಇಡದ ಹೆಜ್ಜೆಯನ್ನು ಇಡಬೇಕಿದೆ. ಕವಿತೆ, ನಾಟಕ, ಕಾದಂಬರಿ ಮುಂತಾದವುಗಳನ್ನು ಬರೆಯುವವರು ಮಾತ್ರ ಬಳಸುತ್ತಿದ್ದ ಕನ್ನಡವನ್ನು ಇಂದು ಇವಾವುದರ ಗಂದವೂ ಇಲ್ಲದ ಅರಿಗರು, ಇಂಜಿನಿಯರುಗಳು, ಡಾಕ್ಟರುಗಳು, ಮುಂತಾದವರು ತಂತಮ್ಮ ಕೆಲಸಗಳಿಗೆ ಚೆನ್ನಾಗಿ ಬಳಸಿಕೊಂಡು ಕನ್ನಡವನ್ನು ಜಪಾನೀಸ್, ಕೊರಿಯನ್, ಜರ್ಮನ್, ಹೀಬ್ರೂ, ಮುಂತಾದ ನುಡಿಗಳ ಸಾಲಿನಲ್ಲಿ ನಿಲ್ಲಿಸಬೇಕಿದೆ.

ಆದರೆ ಹಿಂದೆಯೂ ಆಗಿರುವಂತೆ, ಬರವಣಿಗೆಯ ಇಟ್ಟಳದಲ್ಲಾಗುತ್ತಿರುವ ಈ ಬೆಳವಣಿಗೆಯು ಬರಿಗೆಮಣೆ, ಪದಬಳಕೆ ಮತ್ತು ಬರವಣಿಗೆಯ ಒಡ್ಡವದಲ್ಲಿಯೂ ಮಾರ್ಪಾಡುಗಳನ್ನು ಚಿಗುರಿಸುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ಮಾರ್ಪಾಡುಗಳಿಂದ ಈಗ ‘ಎಲ್ಲರ ಕನ್ನಡ’ವೊಂದು ರೂಪುಗೊಳ್ಳುತ್ತಿದೆ. ‘ಎಲ್ಲರ ಕನ್ನಡ’ವೆಂದರೆ ನಿಜಕ್ಕೂ ಪದಗಳನ್ನು ಕನ್ನಡದಲ್ಲೇ ಕಟ್ಟಲಾಗುತ್ತದೆ. ಕನ್ನಡವನ್ನು ಮುಂಬೊತ್ತಿಗೆ ಸಜ್ಜಾಗಿಸುವ ಹೊಣೆ ಎಲ್ಲರದೂ ಆಗಿದೆಯೆಂದು ಕಂಡುಕೊಂಡರೆ ಈ ಮಾರ್ಪಾಡುಗಳು ಏತಕ್ಕೆ ಬೇಕೆಂದು ತಾನಾಗಿಯೇ ತಿಳಿದು ಬರುತ್ತದೆ.

ಹೀಗೆ ಕನ್ನಡವನ್ನು ನಾಳೆಗೆ ಸಜ್ಜುಗೊಳಿಸಬೇಕಿರುವಾಗ, ನಿಜಕ್ಕೂ ಕನ್ನಡವೆಂದರೆ ಏನು? ಇದರ ಸೊಗಡೇನು? ನುಡಿಯೊಂದರ ಹರವು ಏನು? ಕಸುವು ಏನು? ಮಾತು ಹೇಗೆ ಬದಲಾಗುತ್ತದೆ? ಇದರ ಸೊಲ್ಲರಿಮೆಯೇನು? ಎಂಬುದರ ಬಗ್ಗೆ ಕನ್ನಡಿಗರಲ್ಲಿ ಅರಿವುಂಟಾಗುವುದು ಕನ್ನಡಿಗರ ನಾಳೆಗಳ ಹಿನ್ನೆಲೆಯಲ್ಲಿ ತುಂಬಾ ಬೇಕಾದುದಾಗಿದೆ. ಈ ನಿಟ್ಟಿನಲ್ಲಿ ಬೆಳಕು ಚೆಲ್ಲುವ ಬರಹಗಳನ್ನು ಈ ಹೊತ್ತಗೆಯಲ್ಲಿ ಕೊಡಮಾಡಲಾಗಿದೆ.

ಡಾ. ಡಿ. ಎನ್. ಶಂಕರ ಭಟ್ ಅವರು ಜಗತ್ತಿನ ಹೆಸರಾಂತ ಭಾಷಾ ವಿಜ್ಞಾನಿಗಳು. ಮದ್ರಾಸ್ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ. ಮತ್ತು ಪುಣೆ ವಿಶ್ವವಿದ್ಯಾಲಯದಿಂದ ನುಡಿಯರಿಮೆ(linguistics)ಯಲ್ಲಿ ಪಿ.ಎಚ್.ಡಿ. ಪಡೆದಿರುವ ಭಟ್ಟರು, ಅಮೇರಿಕಾದ ಸ್ಟ್ಯಾನ್ ಫೋರ್ಡ್ ಯೂನಿವರ್ಸಿಟಿ, ಆಸ್ಟ್ರೇಲಿಯಾದ ಲಾ ಟ್ರೋಬೆ ಯೂನಿವರ್ಸಿಟಿ, ಬೆಲ್ಜಿಯಂ ದೇಶದ ಆಂಟ್ವರ್ಪ್ ಯೂನಿವರ್ಸಿಟಿ, ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್‍ನಂತಹ ಜಗತ್ತಿನ ಹಲವಾರು ಮುಂಚೂಣಿಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನ, ಮಣಿಪುರ ವಿಶ್ವವಿದ್ಯಾಲಯ, ಪುಣೆಯಲ್ಲಿರುವ ಡೆಕ್ಕನ್ ಕಾಲೇಜ್ ಮುಂತಾದೆಡೆ ಕಲಿಸುಗರಾಗಿ, ಸಂಶೋಧಕರಾಗಿ ಕೆಲಸ ಮಾಡಿದ್ದಾರೆ. ನುಡಿಯರಿಮೆಯ ಸುತ್ತ ಬರೆದಿರುವ ಅವರ ಹತ್ತಾರು ಹೊತ್ತಗೆಗಳು ಮತ್ತು ಸಂಶೋಧನೆಯ ಪೇಪರಗಳು (research papers) ಜಗತ್ತಿನೆಲ್ಲೆಡೆ ಹೆಸರುಗಳಿಸಿವೆ.

ಕನ್ನಡ ನುಡಿಯ ಬಗ್ಗೆ ಶಂಕರ ಭಟ್ಟರು ಹಲವು ವರ್ಷಗಳ ಆಳವಾದ ಸಂಶೋಧನೆ ನಡೆಸಿದ್ದು, ಈ ನಿಟ್ಟಿನಲ್ಲಿ ಪಡೆದುಕೊಂಡ ತಿಳುವಳಿಕೆಗಳನ್ನು ಒಗ್ಗೂಡಿಸಿ ಹಲವು ಹೊತ್ತಗೆಗಳನ್ನು ಬರೆದಿದ್ದಾರೆ. ಕನ್ನಡ ನುಡಿಯು ನಡೆದು ಬಂದ ದಾರಿ, ಕನ್ನಡದಲ್ಲಿರುವ ವ್ಯಾಕರಣದ ನಿಜವಾದ ಕಟ್ಟಲೆಗಳು, ಕನ್ನಡದ ಪದ ಸೊಗಡು ಮುಂತಾದವುಗಳ ಕುರಿತು ಭಟ್ಟರು ಬರೆದಿರುವ ಕನ್ನಡ ನುಡಿಯರಿಮೆಯ ಹೊತ್ತಗೆಗಳು, ಹಿಂದಿನಿಂದ ಕಣ್ಣುಮುಚ್ಚಿ ನಂಬಿಕೊಂಡು ಬಂದಿದ್ದ ಹಲವಾರು ತಪ್ಪು ತಿಳುವಳಿಕೆಗಳನ್ನು ಮತ್ತು ಅವುಗಳನ್ನು ಸರಿಪಡಿಸುವ ಬಗೆಗಳನ್ನು ಕನ್ನಡ ಸಮಾಜಕ್ಕೆ ತೋರಿಸಿಕೊಟ್ಟಿವೆ.

ಭಾಷಾ ವಿಜ್ಞಾನದಲ್ಲಿ ಇವರ ಕೆಲಸವನ್ನು ಗುರುತಿಸಿ ಹಂಪಿ ವಿಶ್ವವಿದ್ಯಾಲಯವು ಇವರಿಗೆ `ನಾಡೋಜ` ಪದವಿಯನ್ನೂ ಹಾಗೂ ಕರ್ನಾಟಕ ಸರಕಾರವು ಪಂಪ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ.

ಲೇಖಕರ ಇತರ ಕೃತಿಗಳು
10%
ಕನ್ನಡ ವ್ಯಾಕರಣವನ್ನು ಕಲಿಸುವುದು ....
ಶಂಕರ ಭಟ್ ಡಿ ಎನ್, Shankar Bhat D N
Rs. 125    Rs. 113
10%
ಕನ್ನಡಕ್ಕೆ ಮಹಾಪ್ರಾಣ ಯಾಕೆ ....
ಶಂಕರ ಭಟ್ ಡಿ ಎನ್, Shankar Bhat D N
Rs. 50    Rs. 45
10%
ಕನ್ನಡ ಬರಹದ ಸೊಲ್ಲರಿಮೆ ....
ಶಂಕರ ಭಟ್ ಡಿ ಎನ್, Shankar Bhat D N
Rs. 280    Rs. 252
10%
ಕನ್ನಡ ಬರಹದ ಸೊಲ್ಲರಿಮೆ ....
ಶಂಕರ ಭಟ್ ಡಿ ಎನ್, Shankar Bhat D N
Rs. 300    Rs. 270
Best Sellers
ಆಧುನಿಕ ಯೂರೋಪಿನ ಇತಿಹಾಸ
ಸದಾಶಿವ ಕೆ, Sadashiva K
Rs. 270/-   Rs. 300
ಶಬ್ದಮಣಿ ದರ್ಪಣಂ - ತ. ಸು. ಶಾಮರಾಯ
ಶಾಮರಾಯ ತ ಸು, Shamaraya T S
Rs. 180/-   Rs. 200
Ramayana - Rajagopalachari
Rajagopalachari C, Rajaji
Rs. 238/-   Rs. 250
ಸ್ಫೂರ್ತಿ ಕಥಾ ವಲ್ಲರಿ
ಹೇಮಾ ವೆಂಕಟೇಶ್, Hema Venkatesh
Rs. 77/-   Rs. 85

Latest Books
ಕಣ್ಣೀರು (ಕವನ ಸಂಕಲನ)
ಚಲಪತಿ ವಿ, Chalapathi V
Rs. 72/-   Rs. 80
ಆಪ್ತಗೀತೆ : ಭಗವಗ್ದೀತೆಯ ತಿಳಿಗನ್ನಡ ಅವತರಣ
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 248/-   Rs. 275
ನನ್ನ ದೇವರು ಹೆಣ್ಣು
ನೂರ್ ಜಾಹೀರ್, Noor Zaheer
Rs. 203/-   Rs. 225
ಕುಂಡಲಿನಿ : ಒಂದು ಅನುಕ್ತ ಕಥೆ
ಓಂ ಸ್ವಾಮಿ, Om Swami
Rs. 166/-   Rs. 175


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.