|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬದುಕಲು ಒಂದು ಉದ್ಯೋಗ ಸಿಕ್ಕರೆ ಸಾಕು, ಸಾಮಾಜಿಕ ಸಂಬಂಧ ಕಳೆದುಕೊಂಡು `ಸ್ವಾರ್ಥ`ದ ಕೋಟೆಯಲ್ಲಿ ವಾಸಿಸುವ ವಿದ್ಯಾವಂತ ಯುವಕರೇ ಇಂದು ಹೆಚ್ಚಾಗಿ ಕಾಣುವ ಸಂದರ್ಭದಲ್ಲಿ, ತರುಣ ಮಿತ್ರ ಶ್ರೀ ಶಿವಶರಣಪ್ಪ ಮೋತಕಪಲ್ಲಿಯವರು ಈ ಮಾತಿಗೆ ಅಪವಾದವಾಗಿರುವುದು ಸಂತಸ, ಸಮಾಧಾನದ ಸಂಗತಿ. ಎಂ.ಎ., ಎಂ.ಫಿಲ್., ಬಿಎಡ್ ಅಧ್ಯಯನ ಪೂರೈಸಿರುವ ಶಿವಶರಣಪ್ಪನವರು, ಏನನ್ನಾದರೂ ಸಾಧಿಸಬೇಕೆನ್ನುವ ಛಲ ಸ್ವಭಾವದವರು ಕೆ.ಎ.ಎಸ್. ಪರೀಕ್ಷೆಯಲ್ಲಿ ಗೆದ್ದು ಸೋತವರು ಸರಕಾರದ ಹಲವು ಉನ್ನತ ಉದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿದ ಅಪಾರ ಅನುಭವ ಇವರದಾಗಿದೆ. ಈಶಾನ್ಯ ವಲಯ ಶಿಕ್ಷಕರ ವೇದಿಕೆಯ ಆಶ್ರಯದಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ತರಗತಿಗಳನ್ನು ನಡೆಸುವ ಮುಖಾಂತರ ವಿದ್ಯಾವಂತ ಯುವಕರ ಭವಿಷ್ಯ ರೂಪಿಸುವಲ್ಲಿ ನೆರವಾಗಿದ್ದಾರೆ. ತಮ್ಮ ಸಾಹಿತ್ಯಕ, ಶೈಕ್ಷಣಿಕ, ಸ್ಪರ್ಧಾತ್ಮಕ ಪರೀಕ್ಷೆಗಳ ಅಪಾರ ಅನುಭವದ ಹಿನ್ನೆಲೆಯಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತ ಮಾರ್ಗದರ್ಶಿ ಬೃಹತ್ ಪುಸ್ತಕ `ಕನ್ನಡ ಸಾಹಿತ್ಯ ಸಂಜೀವಿನಿ`ಯನ್ನು ಹೊರತಂದಿರುವುದು ಸ್ವಾಗತಾರ್ಹ ಕಾರ್ಯವಾಗಿದೆ.
ಕನ್ನಡ ಸಾಹಿತ್ಯ ಚರಿತ್ರೆ, ಭಾರತೀಯ, ಪಾಶ್ಚಾತ್ಯ ಕಾವ್ಯಮೀಮಾಂಸೆ, ಸಾಹಿತ್ಯ ವಿಮರ್ಶೆ ಅಲಂಕಾರ, ಭಾಷಾಶಾಸ್ತ್ರ, ವ್ಯಾಕರಣ, ಶಾಸನ ಸಾಹಿತ್ಯ ವಿವರಗಳನ್ನೊಳಗೊಂಡ ಈ ಪುಸ್ತಕದ ವೈಶಿಷ್ಟ್ಯವೆಂದರೆ - ಇಲ್ಲಿ ಲೇಖಕರು ಒದಗಿಸಿರುವ ವಿವರಗಳು ವರ್ಣನಾತ್ಮಕವಾಗಿರದೆ, ಸಂಭವನೀಯ ಪ್ರಶ್ನೋತ್ತರಗಳ ರೂಪದಲ್ಲಿರುವುದು. ಇದರಿಂದಾಗಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ಪರೀಕ್ಷೆಗೆ ಬೇಕಾದ ವಿಷಯ ಸಂಗ್ರಹಣೆಯಿಂದಾಗಿ, ಪರೀಕ್ಷೆ ಸುಲಭ, ಸರಳವಾಗುತ್ತದೆ.
|
| |
|
|
|
|
|
|
|
|