|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕಾದಂಬರಿ ಕರತಲ ರಂಗಭೂಮಿ. ಅಂಗೈಮೇಲಣ ನಾಟಕಶಾಲೆ. ಆದ್ದರಿಂದ ಕಾದಂಬರಿಯನ್ನು ಓದುವ ವಾಚಕರು ನಾಟಕವನ್ನು ನೋಡುವ ಪ್ರೇಕ್ಷಕರೂ ಆಗಬೇಕಾಗುತ್ತದೆ. ಈ ಕಾದಂಬರಿಯನ್ನು ಓದುವವರಲ್ಲಿ ಒಂದು ವಿಜ್ಞಾಪನೆ. ಇದನ್ನು ಕಥೆಯ ಕೋಲಾಹಲಕ್ಕಾಗಿ ಓದಬೇಡಿ. ಸಾವಧಾನವಾಗಿ ಸಚಿತ್ರವಾಗಿ ಸಜೀವವಾಗಿ ಓದಿ. ಇಲ್ಲಿ ಚಿತ್ರಿತವಾಗಿರುವುದು ಮಲೆನಾಡಿನ ಬಾಳಿನ ಕಡಲಿನಲ್ಲಿ ಒಂದು ಹನಿ. ಅನೇಕರಿಗೆ ಅದು ಸಂಪೂರ್ಣವಾಗಿ ಹೊಸ ಪ್ರಪಂಚವಾಗುತ್ತದೆ. ಹೊಸ ಊರಿಗೆ ಹೋಗುವವರು ಅಲ್ಲಿಯ ಜನ ಮತ್ತು ಜೀವನದ ವಿಚಾರಕ್ಕಾಗಿ ತಟಕ್ಕನೆ ಯಾವ ನಿರ್ಣಯಗಳನ್ನೂ ಮಾಡಿಕೊಳ್ಳದೆ ಸ್ವಲ್ಪಕಾಲ ತಾಳ್ಮೆಯಿಂದಿದ್ದು ಕ್ರಮೇಣ ಬಳಕೆಯಿಂದ ಜನರನ್ನೂ ಜೀವನವನ್ನೂ ಪರಿಚಯ ಮಾಡಿಕೊಳ್ಳುವಂತೆ ಈ ಕಾದಂಬರಿಯ ಅರಣ್ಯಜಗತ್ತನ್ನು ಪ್ರವೇಶಿಸುವ ವಾಚಕರು ವರ್ತಿಸಬೇಕಾಗುತ್ತದೆ. ಎಂದರೆ, ಮೊದಲನೆಯ ಸಾರಿ ಓದಿದೊಡನೆ ಎಲ್ಲವನ್ನೂ ಪೂರೈಸಿದೆವು ಎಂದುಕೊಳ್ಳುವವರು, ಮೋಟಾರಿನಲ್ಲಿ ಕುಳಿತು ಒಂದೂರಿನ ಪೂರ್ವದ್ವಾರದಿಂದ ಒಳನುಗ್ಗಿ, ಅದರ ಬೀದಿಗಳಲ್ಲಿ ಸರ್ರನೆ ಸಂಚರಿಸಿ, ಪಶ್ಚಿಮ ದ್ವಾರದಿಂದ ಹೊರಹೊರಟು, ಆ ಊರಿನ ಪೂರ್ಣಪರಿಚಯ ಮಾಡಿಕೊಂಡಿದ್ದೇವೆ ಎನ್ನುವವರಂತೆ ಹಾಸ್ಯಾಸ್ಪದರಾಗುತ್ತಾರೆ. ಈ ಕಾದಂಬರಿಯನ್ನು ರಚಿಸುವಾಗಲೂ, ತರುವಾಯ ಮತ್ತೆ ಮತ್ತೆ ಓದುವಾಗಲೂ ಬಹುವಾಗಿ ಬಂದಿರುವ ರಸಸುಖದಲ್ಲಿ ಒಂದಿನಿತನ್ನಾದರೂ ಇದನ್ನು ಓದುವವರು ಸವಿಯುತ್ತಾರೆಂದು ಗೊತ್ತಾದರೆ ಈ ಕೃತಿ ಸಾರ್ಥಕವಾಗುತ್ತದೆ.
|
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಡಿಸೆಂಬರ್ 29, 1904 - ನವೆಂಬರ್ 11, 1994)ನವರು ತಮ್ಮ ಕುವೆಂಪು ಎನ್ನುವ ಕಾವ್ಯನಾಮದಿಂದಲೇ ಪ್ರಸಿದ್ಧರು. 20ನೆಯ ಶತಮಾನದ ಮಹಾನ್ ಕನ್ನಡ ಕವಿ, ಸಾಹಿತಿ ಹಾಗೂ ಮಹಾಮಾನವತಾವಾದಿ. ಕುವೆಂಪು ಅವರು ತಮ್ಮ ಅಮರಕೃತಿ `ಶ್ರೀರಾಮಾಯಣ ದರ್ಶನಂ` ಬರೆದು `ಮಹಾಕಾವ್ಯ`ಯುಗಕ್ಕೆ ಮತ್ತೊಮ್ಮೆ ಮರುಚೇತನ ನೀಡಿದರು. ಈ ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಅಪರೂಪದ ಕೃತಿಯಾಗಿದೆ. ರಾಷ್ಟ್ರಕವಿ ಪ್ರಶಸ್ತಿಯೊಂದಿಗೆ `ಪದ್ಮವಿಭೂಷಣ` ಪ್ರಶಸ್ತಿ ಪಡೆದಿರುವ ಕನ್ನಡದ ಏಕೈಕ ಕವಿ. ಕುವೆಂಪು ಬರೆದ `ಜಯಭಾರತ ಜನನಿಯ ತನುಜಾತೆ` ನಾಡಗೀತೆಯಾಗಿ ಇಂದು ಸುಪ್ರಸಿದ್ಧವಾಗಿದೆ.
ಕುವೆಂಪು ಅವರು ಗಂಭೀರ ವ್ಯಕ್ತಿ. ಇದು ಎಲ್ಲರಿಗೂ ತಿಳಿದ ವಿಷಯ. ಆದರೆ ಅವರು ಅಷ್ಟೇ ಹಾಸ್ಯಪ್ರಿಯರು ಎನ್ನುವುದು ಹೆಚ್ಚಿಗೆ ತಿಳಿದಿಲ್ಲ. ಕುವೆಂಪು ಅವರ ಪರಿಚಯವನ್ನು ಶ್ರೀ ಟಿ.ಎಸ್.ಗೋಪಾಲ್ ಅವರು ಈ ಪುಸ್ತಕದಲ್ಲಿ ಸೊಗಸಾಗಿ ಮಾಡಿಕೊಟ್ಟಿದ್ದಾರೆ.
|
|
| |
|
|
|
|
|
|
|
|
|