|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕರ್ನಾಟಕವನ್ನು ಒಡೆಯಬೇಕು ಅನ್ನುವ ಕೂಗು ಮತ್ತೆ ಎದ್ದಿರುವ ಹೊತ್ತಿನಲ್ಲಿ ಕರ್ನಾಟಕ ಯಾಕೆ ಒಂದಾಗಿರಬೇಕು, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಿಗರ ನಡುವೆ ರಾಜಕೀಯವಾದ ಒಗ್ಗಟ್ಟು ಕನ್ನಡಿಗರೆಲ್ಲರ ಏಳಿಗೆಗೆ ಯಾಕೆ ಮುಖ್ಯ ಅನ್ನುವ ಬಗ್ಗೆ ಕೆಲ ಹೊಸ ಆಯಾಮಗಳನ್ನು ಕನ್ನಡಿಗರ ಮುಂದಿಡುವ ಪ್ರಯತ್ನವನ್ನು “ಕರ್ನಾಟಕವೊಂದೇ” ಹೆಸರಿನ ಈ ಹೊತ್ತಗೆಯಲ್ಲಿ ಉದಯವಾಣಿಯ ಜನಪ್ರಿಯ ಅಂಕಣ “ಕನ್ನಡ ಜಗತ್ತು”ವಿನ ಬರಹಗಾರ ಮತ್ತು ಯುವ ಕನ್ನಡ ಪರ ಚಿಂತಕ ವಸಂತ ಶೆಟ್ಟಿ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಹುಟ್ಟಿ, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಓದಿ, ಬೆಳೆದ ವಸಂತ ಗದಗಿನ ತೊಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟವೇರ್ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಅವರು, ಕಷ್ಟದಿಂದ ಸಾಧಿಸಿದ ಕನ್ನಡಿಗರ ಒಗ್ಗಟ್ಟನ್ನು ಯಾವ ಕಾರಣಕ್ಕೂ ಒಡೆದುಕೊಳ್ಳದೇ, ಕನ್ನಡಿಗರೆಲ್ಲರ ಏಳಿಗೆ ಸಾಧ್ಯವಾಗಿಸುವ ಬಗ್ಗೆ ಎಂಟು ಚಿಕ್ಕ ಅಧ್ಯಾಯಗಳಲ್ಲಿ ಚಿಂತನೆಗೆ ಹಚ್ಚುವ ವಾದ ಮಂಡಿಸಿದ್ದಾರೆ. ಈ ಬರಹಗಳು ಮತ್ತು ಅದರ ಹಿಂದಿನ ಆಶಯ ಸಾಮಾನ್ಯ ಕನ್ನಡಿಗರನ್ನು ತಲುಪಲಿ, ಕನ್ನಡ ನಾಡು ಎಂದೂ ಒಂದಾಗಿರಲಿ ಎಂದು ಹಾರೈಸುತ್ತೇನೆ.
|
| |
|
|
|
|
|
|
|
|
|