|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕಾವೇರಿ ತೀರದ ಪಯಣ
ಕಾವೇರಿ ನದಿ ಮತ್ತು ನದಿ ಪಾತ್ರದಲ್ಲಿನ ಪುರಾತನ ನಾಗರಿಕತೆ ಮತ್ತು ಆಳಿದ ರಾಜವಂಶಗಳ ಏಳುಬೀಳನ ಚಿತ್ರಣ. ಹಲವು ಆಕರ ಗ್ರಂಥಗಳಿಂದ ಶೋಧಿಸಿದ, ಮೂಲ ಮಲಯಾಳಂ ಕೃತಿಯ ಕನ್ನಡಾನುವಾದ ಸೊಗಸಾಗಿ ಬಂದಿದೆ. ಪ್ರಾಚೀನ ಕಾಲದಿಂದ ಇತ್ತೀಚಿನವರೆಗೂ ಸಂದರ್ಭಗಳು ಹೇರಳವಾಗಿದ್ದು ಎಲ್ಲದಕ್ಕೂ ಕಾವೇರಿ ನದಿ ಸಾಕ್ಷಿಯಾಗಿ ಹರಿಯುತ್ತಿದ್ದಾಳೆ. ಉತ್ಕೃಷ್ಟ ಕನ್ನಡ ಭಾಷೆ ಮತ್ತು ಪ್ರೌಢ ಬರವಣಿಗೆ ಶೈಲಿಯಿಂದಾಗಿ ಅನುವಾದ ಎನ್ನಿಸುವುದೇ ಇಲ್ಲ. ನದಿಗಳಲ್ಲದೆ ಯಾವುದೇ ಸಂಸ್ಕೃತಿ ಬೆಳೆಯಲಾರದು ಎನ್ನುವ ಸತ್ಯದ ಅನುಭವ.
|
ಪತ್ರಕರ್ತ, ಸಿನಿಮಾ ವಿಮರ್ಶಕ ಮತ್ತು ಸಾಕ್ಷ್ಯಚಿತ್ರ ನಿರ್ದೇಶಕರಾಗಿರುವ ಒ. ಕೆ. ಜೋಣಿ ಕೇರಳದ ವಯನಾಡ್ ಜಿಲ್ಲೆಯವರು. ಅತ್ಯುತ್ತಮ ಸಾಕ್ಷ್ಯ ಚಿತ್ರಕ್ಕೆ ಎರಡು ರಾಷ್ಟ್ರೀಯ ಪ್ರಶಸ್ತಿ ಮತ್ತು ಕೇರಳ ರಾಜ್ಯ ಪ್ರಶಸ್ತಿ ಪುರಸ್ಕೃತರು. ದೂರದರ್ಶನದ ರಾಷ್ಟ್ರೀಯ ವಾಹಿನಿ ಮತ್ತು ಕೇರಳ ಚಲನಚಿತ್ರ ಅಭಿವೃದ್ಧಿ ಮಂಡಳಿಗಾಗಿ ನಿರ್ದೇಶಿಸಿದವೂ ಸೇರಿದಂತೆ ಒಟ್ಟು ಒಂಬತ್ತು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ. "ದಿ ಟ್ರ್ಯಾಪ್" (1995) ಮತ್ತು "ಸೈಲೆಂಟ್ ಸ್ಟ್ರೀಮ್ಸ್ : ಎ ವಿಲೇಜ್ ಕ್ರಾನಿಕಲ್" (1997) ಇವುಗಳಲ್ಲಿ ಪ್ರಮುಖ. ಕೈರಳಿ ಟೆಲಿವಿಷನಿಗಾಗಿ "ಅಯಲ್ ಕಾಳಗಳ್" ಎಂಬ ಪ್ರವಾಸ ಕಥನ ಸರಣಿಯನ್ನು ನಿರ್ದೇಶಿಸಿದ್ದಾರೆ. ಇಂಟರ್ ನ್ಯಾಷನಲ್ ಫಿಲ್ಡ್ ಫೆಸ್ಟಿವಲ್ ಆಫ್ ಇಂಡಿಯಾ (ಮುಂಬೈ 1995) ಮತ್ತು ನ್ಯಾಷನಲ್ ಫಿಲ್ಮ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ (ದೆಹಲಿ 1995) "ದಿ ಟ್ರ್ಯಾಪ್" ಪ್ರದರ್ಶನ ಕಂಡಿದೆ. . ರಾಷ್ಟ್ರೀಯ ರಾಜ್ಯ ಪ್ರಶಸ್ತಿ ಸಮಿತಿಗಳಲ್ಲಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. "ಮಾಧ್ಯಮ ವೃತ್ತಾಂದಂ", "ನಿಶ್ಯಬ್ದ ನಿಲವಿಳಿಗಳ್", "ವಯನಾಡ್ ರೇಖಗಳ್", "ಭೂತಾನ್ ದಿನಂಜಳ್" ಮುಂತಾದವು ಪ್ರಕಟಿತ ಕೃತಿಗಳು. ಸಿನಿಮಯುಡೆ ವರ್ತಮಾನಂ ಗೆ ಅತ್ಯುತ್ತಮ ಸಿನಿಮಾ ಕೃತಿಗೆ ನೀಡುವ ಕೇರಳ ರಾಜ್ಯ ಪ್ರಶಸ್ತಿ (2001), "ಭೂತಾನ್ ದಿನಂಜಲ್"ಗೆ ಕೇರಳ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಪ್ರವಾಸ ಸಾಹಿತ್ಯ ಪ್ರಶಸ್ತಿ (2015) ಲಭಿಸಿವೆ. ಮಾತೃಭೂಮಿ ಮತ್ತು ಕೇರಳ ಕೌಮುದಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. okjohnypost@gmail.com
|
|
| | |
|
|
|
|
|
|
|