|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಯಾವುದೇ ಅಡೆತಡೆಗಳು ಹಾಗೂ ಅಧಿಕ ವೆಚ್ಚವಿಲ್ಲದೆ ಸಂದೇಶಗಳನ್ನು ಸಾಗಿಸುವ ವಾಹಕ ಬಾನುಲಿ. ಸಮೂಹ ಮಾಧ್ಯಮಗಳ ಪೈಕಿ ಬಾನುಲಿಗೆ ಒಂದು ಶತಮಾನದ ಹಿನ್ನೆಲೆ ಇದೆ. ಕ್ಷಿಪ್ರವಾಗಿ ಶ್ರೋತೃಗಳಿಗೆ ಸುದ್ದಿ, ಮಾಹಿತಿ ಹಾಗೂ ಮನರಂಜನೆ ಉಣಬಡಿಸುವ ಈ ಮಾಧ್ಯಮ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಅಗಾಧವಾಗಿ ಬೆಳೆದಿದೆ. ಇಂತಹ ಶಕ್ತಿಯುತ ಮಾಧ್ಯಮವನ್ನು ಹೇಗೆ ಬಳಸಬಹುದು ಹಾಗೂ ಅದರಿಂದಾಗುವ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳು ಹೇಗಿರುತ್ತವೆ ಎಂಬುದೇ ಈ ಹೊತ್ತಿಗೆಯ ತಿರುಳು. ಈ ಅಂಕಣಗಳ ಅಂಕಣಕಾರ ಸಿ. ಯು. ಬೆಳ್ಳಕ್ಕಿ ಕನ್ನಡ ಬಾನುಲಿ ನಕಾಶೆಯಲ್ಲಿ ಹೆಸರು ಮಾಡಿದವರು. ತಮ್ಮ ಮೂರು ದಶಕಗಳ ವೃತ್ತಿ ಜೀವನದಲ್ಲಿ ತಾವು ಕಂಡ ಪ್ರಭಾವಗಳು, ಅದರ ಶಕ್ತಿ ಹಾಗೂ ಅದು ಹೊರತಂದ ಅಪ್ರತಿಮ ಪ್ರತಿಭೆಗಳನ್ನು ಬಹು ಸೊಗಸಾಗಿ ಅವರು ದಾಖಲಿಸಿದ್ದಾರೆ
|
ಆಕಾಶವಾಣಿಯಲ್ಲಿ ವೃತ್ತಿನಿರತರಾಗಿದ್ದ
ಶ್ರೀ ಸಿ. ಯು. ಬೆಳ್ಳಕ್ಕಿಯವರು ಪ್ರವೃತ್ತಿ ಯಲ್ಲಿಯೂ ಮಾಧ್ಯಮವನ್ನು ಪ್ರೀತಿಸಿದವರು. ಧ್ವನಿಮಾಧ್ಯಮದ ನೂರು ಸಾಧ್ಯತೆಗಳ ಬಗ್ಗೆ ಪ್ರಯೋಗಶೀಲರಾಗಿದ್ದಾಗಲೇ ಗಾಳಿಯಲ್ಲಿ ತೇಲಿದ ಮಾತುಗಳನ್ನು ಅಕ್ಷರರೂಪದಲ್ಲಿ ದಾಖಲಿಸಿದವರು. ಅನೇಕ ಪ್ರಸಾರಕರನ್ನು ಮಾರ್ಗದರ್ಶನ ನೀಡಿ ಬೆಳೆಸಿದವರು. ಬಾನುಲಿಯ ಕುರಿತಾಗಿ ಕನ್ನಡದಲ್ಲಿ ಇವರಷ್ಟು ನಿರಂತರವಾಗಿ ಬರೆಯುತ್ತ ಬಂದವರು ಮತ್ತೊಬ್ಬರಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಅಂತೆಯೇ ಇಂದು ಬಾನುಲಿಯ ವಿವಿಧ ವಿಭಾಗಗಳಲ್ಲಿ ಅಧ್ಯಯನ ಹಾಗೂ ಅಭಿವ್ಯಕ್ತಿ ಬೆಳೆಸಿಕೊಂಡಿರುವ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ವಿಶ್ರಾಂತ ಬದುಕಿನಲ್ಲೂ ವೃತ್ತಿಯ ನಂಟನ್ನು ನಿರ್ಲಕ್ಷಿಸದೆ ಮಾತಿನ ಮನೆಯ ಬೆÀರಗನ್ನು ಕೇಳುವ ಕೌತುಕವಾಗಿ ಲಿಪಿಬದ್ಧಗೊಳಿಸಿದ್ದಾರೆ.
|
|
| |
|
|
|
|
|
|
|
|