|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಖಾನ್ ಅಬ್ದುಲ್ ಗಫಾರ್ ಖಾನ್ ‘ಗಡಿನಾಡ ಗಾಂಧಿ‘ ಎಂದೇ ಪ್ರಸಿದ್ಧರು. ಬ್ರಿಟಿಷರ ದಬ್ಬಾಳಿಕೆಗೆ ‘ಜಲಿಯನ್ವಾಲಾ ಬಾಗ್ ಹತ್ಯಾಕಾಂಡ‘ ಕುಖ್ಯಾತವಾಗಿರುವ ಹಾಘೆ, ‘ಕಿಸ್ಸಾ ಖ್ವಾನಿ ಬಜಾರ್ ಹತ್ಯಾಕಾಂಡ‘ವೂ ಕುಖ್ಯಾತವಾಗಿದೆ. ಖಾನ್ ಅಬ್ದುಲ್ ಗಫಾರ್ ಖಾನ್ ಗಾಂಧೀಜಿಯವರ ಜೊತೆ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗಿಯಾಗಿ ಬಂಧನಕ್ಕೊಳಗಾದರು. ಏಪ್ರಿಲ್ 23, 1930. ಇಂದಿನ ಪಾಕಿಸ್ತಾನದ ಪೇಷಾವರ್ ನಗರದ ಕಿಸ್ಸಾ ಖ್ವಾನಿ ಬಜಾರ್ ಎಂಬ ಚೌಕ. ಖಿದ್ಮತ್ಗಾರರು ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿದ್ದರು. ಬ್ರಿಟಿಷ್ ಸೇನೆಯ ಜೀಪುಗಳು ಅತ್ಯಂತ ವೇಗವಾಗಿ ಜನರ ನಡುವೆ ನುಗ್ಗಿ ಹಲವರನ್ನು ಕೊಂದವು. ಸಾಕಷ್ಟು ಜನರು ಗಾಯಗೊಂಡರು. ಗಾಯಾಳುಗಳನ್ನು ಸಾಗಿಸಲು ಅನುಮತಿಯಿತ್ತರೆ ತಾವು ಚದುರುವುದಾಗಿ ಪ್ರತಿಭಟನಕಾರರು ಹೇಳಿದರು. ಅದಕ್ಕೆ ಉತ್ತರ ನೀಡದ ಬ್ರಿಟಿಷ್ ಸೇನೆ ಒಮ್ಮೆಲೆ ನಿರಾಯುಧರ ಮೇಲೆ ಗುಂಡಿನ ಮಳೆಗರೆಯಲಾರಂಭಿಸಿತು! ಮುಂದಿನ ಸಾಲಿನಲ್ಲಿದ್ದ ಖಿದ್ಮತ್ಗಾರರು ಗುಂಡಿಗೆ ಬಲಿಯಾಗಿ ನೆಲಕ್ಕುರುಳಿದ ಮೇಲೆ ಹಿಂದೆ ನಿಂತಿದ್ದವರು ಮುಂದೆ ಬರಲಾರಂಭಿಸಿದರು! ಯಾರೂ ಸಾವಿಗೆ ಹೆದರಿ ತಲೆತಪ್ಪಿಸಿಕೊಳ್ಳಲು ಯತ್ನಿಸಲಿಲ್ಲ. ಮಧ್ಯಾಹ್ನ 12 ಗಂಟೆಗೆ ಆರಂಭವಾದ ನರಹೋಮ ಸಂಜೆ 5 ಗಂಟೆಗೆ ನಿಂತಿರು. 400ಕ್ಕೂ ಹೆಚ್ಚು ಜನ ಮರಣ ಹೊಂದಿದರು!
|
| |
|
|
|
|
|
|
|
|