
| Rs. 80 | 10% |
Rs. 72/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವಸಂತ ಪ್ರಕಾಶನ, Vasantha Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2010 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
160 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789381001059 |
ಕೋಡ್ |
: |
114136 |
ನಮ್ಮ ದೇಶದಲ್ಲಿ ರಾಮ, ಸೀತೆ, ಧರ್ಮರಾಯ, ಭೀಮ, ದುರ್ಯೋಧನ, ದುಶ್ಶಾಸನ, ದ್ರೌಪದಿ, ಕೃಷ್ಣ, ಕಂಸ, ಬಲರಾಮ ಮೊದಲಾದ ಹೆಸರುಗಳನ್ನು ಕೇಳದವರಾರು? ಭಾರತೀಯರಿಗೆ ಇವು ಕೇವಲ ಹೆಸರುಗಳಲ್ಲ, ಒಳಿತನ್ನು, ಕೆಡುಕನ್ನು, ಧರ್ಮ-ಅಧರ್ಮಗಳನ್ನು, ಮೌಲ್ಯ, ಸಂಸ್ಕೃತಿಗಳನ್ನು ಪ್ರತಿನಿಧಿಸುವ ಪ್ರತೀಕಗಳು. ಹೆತ್ತವರು ತಮ್ಮ ಮಕ್ಕಳಿಗೆ ಇಂಥ ಹೆಸರು ಗಳನ್ನು ಇಡುವುದುಂಟು. ಉದಾಹರಣೆಗೆ ರಘುನಾಥ, ಸೀತಾಪತಿ, ವೇಣು ಗೋಪಾಲ, ಮಾರುತಿ, ವೈದೇಹಿ, ಇತ್ಯಾದಿ. ಮಕ್ಕಳು ಶಾಲೆಗೆ ಸೇರುವ ಮೊದಲೇ ಹಿರಿಯರಿಂದ ಇಂಥವರ ಕೆಲವು ಕತೆಗಳನ್ನು ಕೇಳಿರುವುದೂ ಉಂಟು. ನಮ್ಮ ಜನಸಾಮಾನ್ಯರ ದೃಷ್ಟಿಯಲ್ಲಿ ಸೀತೆ, ಧರ್ಮರಾಯ, ಲಕ್ಷ್ಮಣ, ಭೀಮ, ಆಂಜನೇಯ ಒಳ್ಳ್ಳೆಯ ನಡತೆಯನ್ನು ಬಿಂಬಿಸುವವರು; ದುರ್ಯೋಧನ, ದುಶ್ಶಾಸನ, ರಾವಣ, ಶೂರ್ಪನಖಿ ಮೊದಲಾದವರದು ಕೆಟ್ಟ ಗುಣಗಳು. ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಸಮಾಜದ ಎಲ್ಲ ವರ್ಗಗಳ ಜನರಿಗೂ ಪ್ರಿಯವಾಗಿರುವ ಇಂಥವರ ಕತೆಗಳಿಗೆ ರಾಮಾಯಣ, ಮಹಾಭಾರತ, ಭಾಗವತ ಗ್ರಂಥಗಳೇ ಮೂಲ. ನಮ್ಮಲ್ಲಿ ಕಾವ್ಯ, ಕಥೆ, ನಾಟಕ, ಶಿಲ್ಪಕಲೆ, ನೃತ್ಯಕಲೆ, ಚಿತ್ರಕಲೆ ಎಲ್ಲವುಗಳಲ್ಲಿ ಈ ಗ್ರಂಥಗಳ ಪಾತ್ರ, ಸಂಗತಿಗಳು ಹರಳುಗಟ್ಟಿವೆ. ಹೀಗೆ ನಾಡಿನ ಜನಜೀವನದ, ಸಂಸ್ಕೃತಿಯ ಒಂದು ಭಾಗವೇ ಆಗಿಬಿಟ್ಟಿರುವ ಈ ಗ್ರಂಥಗಳನ್ನು ನಮ್ಮ ಮಕ್ಕಳು ಸಂಗ್ರಹರೂಪದಲ್ಲಾದರೂ ಓದುವುದು ಅತ್ಯಗತ್ಯ. ಪ್ರಸಿದ್ಧ ಲೇಖಕ, ವಿಮರ್ಶಕ ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಕಿರಿಯ ಓದುಗರಿಗೆಂದೇ ಬರೆದಿರುವ ‘ಕಿರಿಯರ ಮಹಾಭಾರತ’ ಕೃತಿಯಲ್ಲಿ ಸರಳ ಸುಂದರ ಭಾಷೆಯಿದೆ, ಆತ್ಮೀಯ ನಿರೂಪಣೆಯಿದೆ, ಓದುಗರ ಮನಸ್ಸನ್ನು ಹಿಡಿದಿಡುವ ಸರಸ ಶೈಲಿಯಿದೆ, ಮಾಗಿದ ಚೇತನವೊಂದರ ಜೀವನದರ್ಶನವಿದೆ. ಹಾಗಾಗಿ ಇದನ್ನು ಓದುವುದೇ ಒಂದು ಹಬ್ಬ.
|
| |
|
|
|
|