|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಗುರಿಯಿಲ್ಲದೇ ಅಲೆಮಾರಿಯಂತೆ ಅಲೆದಾಡುತ್ತಿದ್ದ ಹರೀಶನಿಗೆ, ಅತ್ಯಂತ ಪುರಾತನವಾದ ಮತ್ತು ಅಪಾಯದಲ್ಲಿರುವ ಜರವಾ ಸಮುದಾಯದೊಂದಿಗೆ ಆಕಸ್ಮಿಕವಾಗಿ ಸಂಪರ್ಕವುಂಟಾಯಿತು. ಅಂಡಮಾನಿನ ಉಷ್ಣವಲಯದ ಮಳೆಕಾಡುಗಳ ಮೂಲ ನಿವಾಸಿಗಳಾದ ಜರವಾ ಜನಾಂಗದವರನ್ನು ಭೇಟಿಯಾದ ಹರೀಶನಿಗೆ, ಅವರ ಉಳಿಯುವಿಕೆಗೆ ಬೇಕಾದುದೆಲ್ಲವೂ ಸಾನಗೊಳ್ಳುತ್ತಿರುವುದನ್ನು ಕಂಡು ಆಘಾತವಾಯಿತು. ಅವರಿಗಾಗಿ ಏನನ್ನಾದರೂ ಮಾಡಬೇಕೆಂಬ ಹಂಬಲವೂ ಬೆಳೆಯಿತು. ಈ ಹಾದಿಯಲ್ಲಿ ಅವನಿಗೆ ಭೇಟಿಯಾದ ದೋಣಿಯ ನಾವಿಕ ಅಂಕಲ್ ಪ್ಯಾಮ್ ಎಪ್ಪತ್ತರ ಇಳಿ ವಯಸ್ಸಿನವರಾದರೂ ಹರೀಶನಿಗೆ ಒಳ್ಳೆಯ ಸ್ನೇಹಿತರಾದರು. ‘‘ಕರೀನ್’’ ಸಮುದಾಯದ ಅಂಕಲ್ ಪ್ಯಾಮ್ರ ತಂದೆಯನ್ನು 1920ರಲ್ಲಿ ಬ್ರಿಟಿಷರು ದ್ವೀಪಗಳಿಗೆ ಕರೆತಂದಿದ್ದರು.
ದ್ವೀಪದಲ್ಲಿ ಹರೀಶನಿಗೆ ಸೀಮಾಳ ಭೇಟಿಯೂ ಆಗುತ್ತದೆ. ಸ್ಥಳೀಯ ಜನ್ಯಳಾದ ಸೀಮಾಳ ತಾಯಿ ತಂದೆಯರು ಪೋರ್ಟ್ಬ್ಲೇರಿನ ಕುಖ್ಯಾತ ಸೆಲ್ಯುಲರ್ ಜೈಲಿನಲ್ಲಿ ಖೈದಿಗಳಾಗಿದ್ದವರು. ಆಕೆಯ ಕಾಲದ ಇತರ ಯುವಕ-ಯುವತಿಯರಂತೆ, ವಿದ್ಯಾವಂತಳೂ, ಜಗತ್ತನ್ನು ಅರಿತವಳೂ ಆಗಿದ್ದ ಸೀಮಾ ಮರಳಿ ಮನೆಗೆ ಬರಬೇಕೆಂಬ ಹಂಬಲದಲ್ಲಿ ಮಾತ್ರ ವಿಭಿನ್ನಳಾಗಿದ್ದಳು. ಜರವಾ ಜನಾಂಗದ ಬಗೆಗೆ ಹರೀಶನಿಗಿದ್ದ ಕಳಕಳಿ, ದ್ವೀಪಗಳ ಬಗೆಗಿನ ಅವನ ಪ್ರೀತಿ, ಜರವಾಗಳನ್ನು ಅರ್ಥ ಮಾಡಿಕೊಳ್ಳಲು ಅವರು ಜೊತೆಯಾಗಿ ಕಳೆದ ಸಮಯ ಹಾಗೂ ಆಕೆಯ ಭಗ್ನ ಪ್ರೇಮ ಎಲ್ಲವೂ ಒಂದಾಗಿ ಸೀಮಾಳನ್ನು ಹರೀಶನತ್ತ ಸೆಳೆಯಿತು. ಎಲ್ಲವೂ ಸರಿಯಾದ ಹಾದಿಯಲ್ಲಿ ಸಾಗುತ್ತಿವೆ. ಎರಡು ಸಮಾನಾಂತರ ಬದುಕುಗಳು ಸೇರುತ್ತಿವೆ ಎನ್ನುವಾಗ ಅನಾಮಿಕ ಸ್ಪರ್ಧಿಯೊಂದರ ಪ್ರವೇಶವಾಯಿತು. ಅದುವೇ 2004ರ
ಡಿಸೆಂಬರ್ನಲ್ಲಿ ಅಪ್ಪಳಿಸಿದ ‘‘ದೈತ್ಯ ಸುನಾಮಿ’’. ‘‘ಕೊನೆಯ ಅಲೆ’’ ಕಳೆದುಹೋದ ಈ ಪ್ರೇಮಿಗಳ, ಜನಾಂಗವೊಂದರ ಸಂಸ್ಕೃತಿ, ಇತಿಹಾಸ ಮತ್ತು ಕಾಲನ ಹೊಡೆತಕ್ಕೆ ಸಿಲುಕಿ ನಲುಗಲು ಸದಾ ಸಿದ್ಧವಾಗಿರುವ ಪರಿಸರ ವ್ಯವಸ್ಥೆಯೊಂದರ ಕಥೆಯಾಗಿದೆ.
|
| | |
|
|
|
|
|
|
|
|