Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 85    
10%
Rs. 77/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Demy Size
ISBN : 9788184674262
ಕೋಡ್ : 002280

ಮಹಿಳೆಯರನ್ನು ಕೇಂದ್ರವಾಗಿರಿಸಿಕೊಂಡು ಅವಳ ಹಿಂದಿನ-ಇಂದಿನ ಸ್ಥಾನಮಾನಗಳತ್ತ ವಿಶ್ಲೇಷಣಾತ್ಮಕ ನೋಟ ಬೀರಿ ವಾಸ್ತವದತ್ತ ಮುಖ ಮಾಡಿದ ಲೇಖನಗಳು. ಅವಳ ಸುತ್ತ ಮೌಢ್ಯದ ಕೋಟೆ ಕಟ್ಟಿ, ನಿಬಂಧನೆಗಳನ್ನು ಹೇರಿ ಅಂದಿನ ಪುರುಷ ಪ್ರಾಧಾನ್ಯ ಸಮಾಜ ಆಕೆಯನ್ನು ಹೈರಾಣಗೊಳಿಸಿತ್ತು. ಸಂಪ್ರದಾಯದ ನೆಪದಲ್ಲಿ ಇಂದಿಗೂ ಅವಳು ಈ ಕೋಟೆಯಿಂದ ಹೊರಬಂದಿಲ್ಲವೆಂದು ಇಲ್ಲಿನ ಲೇಖನಗಳು ಹೇಳುತ್ತಿವೆ. ಎಷ್ಟೇ ಆಧುನಿಕ ಸಮಾಜದಲ್ಲಿ ಜೀವಿಸುತ್ತಿದ್ದರೂ ಹಲವು ಕುಟುಂಬಗಳಲ್ಲಿ ಮೇಲ್ವರ್ಗ-ಕೆಳವರ್ಗಗಳೆಂಬ ತಾರತಮ್ಯವಿಲ್ಲದೆ ಅವಳು ವಿಧವಿಧವಾದ ಕಟ್ಟುಪಾಡುಗಳಿಗೆ ಗುರಿಯಾಗಿದ್ದಾಳೆ. ನೆರೆಯ ರಾಜ್ಯವಿರಬಹುದು ದೂರ ರಾಷ್ಟ್ರವಿರಬಹುದು - ಆಯಾ ಪ್ರದೇಶದ ಕ್ರೂರ - ಮೂಢನಂಬಿಕೆಗಳಿಗೆ ಅವಳು ಬಲಿಯಾಗಿದ್ದಾಳೆ. ಹೆಣ್ಣನ್ನು ಒಂದು ಆಸ್ತಿ ಎಂದು ಪರಿಗಣಿಸಿ ಇನ್ನಿತರ ವಸ್ತುಗಳ ಮೇಲಿನ ಒಡೆತನದಂತೆ ಆಕೆಯ ಮೇಲೆ ಗಂಡಿನ ಅಧಿಕಾರವಿತ್ತೆಂದೂ ಅವಳಿಗೆ ಸ್ವತಂತ್ರವಾಗಿ ಯೋಚಿಸುವ ಹಕ್ಕು ಕೂಡ ಇಲ್ಲಿಲ್ಲ ಎಂಬ ಅಂಶವನ್ನು ಇಲ್ಲಿ ಹಲವು ಸಾಹಿತ್ಯಗಳ ಓದಿನಿಂದ ಶ್ರುತಪಡಿಸಲಾಗಿದೆ. ಇಂದು ಇಂಥ ವ್ಯವಸ್ಥೆಯಿಂದ ಹೊರಬರುವ ಸಾಧ್ಯತೆಗಳು ಸಾಕಷ್ಟಿದ್ದು ನಿಧಾನವಾಗಿ ಅದರತ್ತ ಮುಖಮಾಡಿದ ಕ್ರಾಂತಿಕಾರಿ ಬದಲಾವಣೆಯ ಬಗ್ಗೆಯೂ ಇಲ್ಲಿ ಸ್ತ್ರೀ ದನಿ ಎತ್ತಿದ್ದಾಳೆ.

ಡಾ|| ವಸುಂಧರಾ ಭೂಪತಿ ಪ್ರಖ್ಯಾತ ಆಯುರ್ವೇದ ವೈದ್ಯೆ. ಪ್ರವೃತ್ತಿಯಲ್ಲಿ ಸಾಹಿತಿಯಾದ ಇವರ ೩೬ ಪುಸ್ತಕಗಳು ಪ್ರಕಟಗೊಂಡಿವೆ. ಇಂಗ್ಲಿಷ್, ಹಿಂದಿ ಭಾಷೆಗೆ ಇವರ ಕೆಲವು ಪುಸ್ತಕಗಳು ಅನುವಾದಗೊಂಡಿವೆ. ವೈದ್ಯಲೋಕ ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ. ಇವರು ಸಹಲೇಖಕಿಯಾಗಿ ರಚಿಸಿದ ಮನೆಯಂಗಳದಲ್ಲಿ ಔಷಧಿವನ ಪುಸ್ತಕ ಹಲವು ಮುದ್ರಣಗಳನ್ನು ಕಂಡಿದ್ದು, ‘ಶ್ರೇಷ್ಠ ಲೇಖಕಿ ಪುರಸ್ಕಾರ‘ ದೊರೆತಿದೆ. ೨೦೦೭ರಲ್ಲಿ ಎಚ್.ಐ.ವಿ.ಏಡ್ಸ್ ಲೇಖನಕ್ಕೆ ‘ಯೂನಿಸೆಫ್ ಪತ್ರಿಕೋದ್ಯಮ ಪ್ರಶಸ್ತಿ‘, ಹೂವು ಮತ್ತು ಆರೋಗ್ಯ ಪುಸ್ತಕಕ್ಕೆ ‘ಅಕಲಂಕ ಪ್ರಶಸ್ತಿ‘, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ೨೦೧೨ರಲ್ಲಿ ‘ಶ್ರೇಷ್ಠ ವಿಜ್ಞಾನ ಸಂವಹನಕಾರ ರಾಜ್ಯ ಪ್ರಶಸ್ತಿ‘, ಮುಂತಾದ ಪ್ರಶಸ್ತಿಗಳು ದೊರೆತಿವೆ. ಪ್ರಸ್ತುತ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದಾರೆ.

ಲೇಖಕರ ಇತರ ಕೃತಿಗಳು
50%
ಸೌಂದರ್ಯವರ್ಧಕಗಳು ಏಕೆ ಬೇಕು ....
ವಸುಂಧರಾ ಭೂಪತಿ, Vasundhara Bhupathi
Rs. 45    Rs. 23
10%
ವಿಜ್ಞಾನಮಯಿ (ವಿಜ್ಞಾನ ನಾಟಕಗಳು)
ವಸುಂಧರಾ ಭೂಪತಿ, Vasundhara Bhupathi
Rs. 150    Rs. 135
10%
ಜೀವಸೆಲೆ : ಸಂದರ್ಶನ, ....
ವಸುಂಧರಾ ಭೂಪತಿ, Vasundhara Bhupathi
Rs. 200    Rs. 180
Rs. 140    Rs. 126
Best Sellers
ಮಲಾಲ ಯೂಸಫೈಜಿಯಾ (ಜೀವನ ಚಿತ್ರ)
ಇನ್ ಸೈಟ್ ಪಬ್ಲಿಕ, Insight Publica
Rs. 72/-   Rs. 80
ಅಪಜಯ - ತ್ರಿವೇಣಿ
ತ್ರಿವೇಣಿ , Triveni
Rs. 124/-   Rs. 130
100 ರುಚಿಕರವಾದ ಮೈಕ್ರೋವೇವ್ ಪಾಕಶಾಸ್ತ್ರ (ಅಡಿಗೆ ಪುಸ್ತಕ)
ಮಲ್ಲಿಕಾ ಬದ್ರಿನಾಥ್, Mallika Badrinath
Rs. 95/-   Rs. 100
Astronomy Quiz Book - English
Chandran V
Rs. 108/-   Rs. 120

Latest Books
ಗತಿ ಸ್ಥಿತಿ ಮತ್ತೆಲ್ಲ
ಗಿರಿ, Giri
Rs. 405/-   Rs. 450
ಚೀಣಾದಲ್ಲಿ ತತ್ತ್ವಶಾಸ್ತ್ರ
ರಾಮಕೃಷ್ಣ ಜಿ, Ramakrishna G
Rs. 158/-   Rs. 175
ತಲ್ಲಣಿಸದಿರು ಕಂಡ್ಯ ತಾಳು ಮನವೆ
ಸೋಮೇಶ್ವರ ನಾ, Someshwara N
Rs. 108/-   Rs. 120
ಸ್ಮೃತಿ ವಿಸ್ಮೃತಿ : ಭಾರತೀಯ ಸಂಸ್ಕೃತಿ
ಬಾಲಗಂಗಾಧರ ಎಸ್ ಎನ್, Balagangadhara S N
Rs. 396/-   Rs. 440


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.