|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಕುವೆಂಪು ಭಾಷಾ ಭಾರತಿ ಬಹುಮಾನ ಪಡೆದ ಕೃತಿ |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
1990ರ ದಶಕದಲ್ಲಿ ಜಾಹಿರಾತು ಜಗತ್ತಿನಲ್ಲಿ ರಾಣಿಯಂತೆ ಮೆರೆದ ವಾರಿಸ್ ಡೆರಿನ್ಳ ಬದುಕು ಸಾಹಸಮಯ ಮತ್ತು ರೋಮಾಂಚನಕಾರಿಯಾದುದು. ಜಗತ್ತಿನ ಎಂಬತ್ತೈದು ಭಾಷೆಗಳಿಗೆ ಅನುವಾದಗೊಂಡಿರುವ ಈಕೆಯ ಆತ್ಮಚರಿತ್ರೆಯಲ್ಲಿ ಅಕ್ಷರದಲ್ಲಿ ಹಿಡಿದಿಡಲು ಮುಜುಗರವಾಗುವಂತಹ ಅಪಮಾನ ಮತ್ತು ಅತ್ಯಾಚಾರದ ಘಟನೆಗಳಿವೆ.
ಆಫ್ರಿಕಾದ ಸೋಮಾಲಿಯಾ ಬುಡಕಟ್ಟು ಜನಾಂಗದ ಕುಟುಂಬದಲ್ಲಿ ಜನಿಸಿ ಅನಕ್ಷರಸ್ಥೆಯಾಗಿ ಬೆಳೆದು ಮರುಭೂಮಿಯನ್ನು ದಾಟಿ, ಪಾಶ್ಚಿಮಾತ್ಯ ಜಗತ್ತಿನಲ್ಲಿ ಬದುಕು ಕಟ್ಟಿಕೊಂಡಿದ್ದು ಯಶಸ್ವಿ ಸಿನಿಮಾವೊಂದರ ಚಿತ್ರಕತೆಯಂತಿದೆ. ಆಫ್ರಿಕಾ ದೇಶಗಳಲ್ಲಿ ಇರುವ ಅಮಾನವೀಯ ಆಚರನೆ ಕುರಿತು ವಾರಿಸ್ ದಾಖಲಿಸಿರುವ ಘಟನೆಗಳು ಮೈ ನಡುಗಿಸುವಂತಿವೆ. ಯಾವುದೇ ಸಂಕೋಚ, ಮುಜುಗರವಿಲ್ಲದೆ ತನ್ನ ಹೋರಾಟದ ಬದುಕನ್ನು ದಾಖಲಿಸಿರುವುದು ಈಕೆಯ ವಿಶೇಷ. ಈ ಕಾರಣಕ್ಕಾಗಿ ವಾರಿಸ್ ನಮಗೆ ಆಪ್ತವಾಗಿ ಬಿಡುತ್ತಾಳೆ.
ಈ ಅನಾಮಿಕ ಹೆಣ್ಣು ಮಗಳ ಸಾಹಸಗಾಥೆ ಎಲ್ಲರ ಎದೆಯಲ್ಲಿ ಬಹುಕಾಲ ಉಳಿಯುವಂತಹದ್ದು. ಇದು ಹೆಣ್ಣು ಮಕ್ಕಳಿಗೆ ಇಷ್ಟವಾಗುವ ಗಂಡಸರ ಮನ ಕಲಕುವ ಹಾಗೂ ಎಂತಹ ಮಡಿವಂತಿಕೆಯವರಿಗೂ ಅಶ್ಲೀಲವೆನಿಸದ ಅಪರೂಪದ ಆತ್ಮಕಥನ.
|
| | |
|
|
|
|
|
|
|
|