|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಾನವ ಭಾವಜೀವಿ. ಲೋಕಕ್ಕೆ ಅಂಟಿಕೊಳ್ಳುವುದಕ್ಕಷ್ಟೇ ಅಲ್ಲ, ತನಗೆ ತಾನೇ ಏಕತೆಯನ್ನು ಸಾಧಿಸಿಕೊಳ್ಳಲೂ ಅವನಿಗೆ ನೆನಪುಗಳು ಬೇಕು. ಸಂಬಂಧಗಳು-ರಕ್ತಮೂಲಗಳಾಗಲೀ ಅಥವಾ ಭಾವಮೂಲಗಳಾಗಲೀ-ಮನುಷ್ಯನಲ್ಲಿ ಉಳಿಯುವುದು ಮತ್ತು ಕಳಿಯುವುದು ನೆನಪುಗಳೆಂಬ ಜಾಡಿಯಲ್ಲಿ ಮುಚ್ಚಿಟ್ಟ ನಂತರವೇ. ತಂದೆ-ಮಗ, ಗಂಡ-ಹೆಂಡತಿ ಮತ್ತು ಸ್ನೇಹಿತರಿಬ್ಬರು ತಮ್ಮ ನೆನಪಿನ ಆವರಣದೊಳಗೆ ಬದುಕುವ ಪರಿ ನಾನು ಈ ಕಥೆಯನ್ನು ಬರೆದು ಮುಗಿಸುವಲ್ಲಿನ ದೊಡ್ಡ ಪ್ರೇರಣೆಯಾಯಿತು.
ನನ್ನ ಊರಾದ ಚಿಕ್ಕಮಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳು ಈ ಕಥೆಗೆ ಪ್ರಾದೇಶಿಕ ಅಸ್ತಿತ್ವವನ್ನು ಒದಗಿಸಿವೆ. ಕಥೆಯು ಪ್ರಾರಂಭಗೊಳ್ಳುವುದು ಎಪ್ಪತ್ತರ ದಶಕದಲ್ಲಿ ಮತ್ತು ಕೊನೆಗೊಳ್ಳುವುದು ಹೊಸ ಸಹಸ್ರಮಾನದ ಆರಂಭದಲ್ಲಿ. ಚಿಕ್ಕಮಗಳೂರಿನ ಬದುಕಿನಲ್ಲಿ ಯಾವುದೋ ಒಂದು ಸ್ವರೂಪದಲ್ಲಿ ಮುಳ್ಳಯ್ಯನ ಗಿರಿಯು ಪ್ರತಿಜೀವಿಯನ್ನು ಮುಟ್ಟುವುದರಿಂದ ನನ್ನ ಈ ಕಾದಂಬರಿಯ ಪೂರ್ಣ ಬರವಣಿಗೆಯಲ್ಲಿ ಆ ಬೆಟ್ಟವೂ ಒಂದು ಪಾತ್ರದಷ್ಟೇ ತೀವ್ರ ಸ್ವರೂಪದಲ್ಲಿ ಕಾಡಿತು.
|
| |
|
|
|
|
|
|
|
|
|