|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕಾಲ-ದೇಶಗಳ ಗಡಿ ಮೀರಿದ ತಮ್ಮ ವಿಸ್ತಾರವಾದ ಓದು-ಅನುಭವಗಳಿಂದ, ಲೌಕಿಕ-ಅಲೌಕಿಕಗಳ ನಡುವೆ ಸಲೀಸು ಸುತ್ತಿ ಸುಳಿವ ಸೂಕ್ಷ್ಮ ಸಂವೇದನೆಯ ಒಳನೋಟ-ತಿಳಿನೋಟಗಳಿಂದ ಕನ್ನಡ ಕಾವ್ಯ ಮತ್ತು ನಾಟಕ ಕ್ಷೇತ್ರಗಳಲ್ಲಿ ತಮ್ಮದೇ ಮೀಸಲು ನಿನದವನ್ನು ಕಡೆದು ಕಾಣಿಸಿದ ಎಚ್.ಎಸ್. ಶಿವಪ್ರಕಾಶ ಅವರ ಈ ಮೀಸಲು ಕವಿತೆಗಳು ತಮ್ಮ ಅನಾದಿ ನಾದ-ಲಯಗಳ ಹೊಸ ಹೊಳಪಿನಿಂದ ಹೊಸ ಯುಗದ ಹೊಸ ಬಗೆಯ ಶಿವ-ಶಕ್ತಿ ಯೋಗವನ್ನು ಸಾಧ್ಯವಾಗಿಸುತ್ತಿವೆ. .ಶಿವಲಿಂಗವೆಂಬ ತಿಳಿನೀರಿನಲ್ಲಿ. ..ನಾನೆಂಬ ಹಮ್ಮು ಸೋಕದೆ.. ಕವಿಯೊಡನೆ ನಾವೂ ..ನೀನಾಗಿ ಅನುವಾದವಾಗುವ.. ಅನುಭಾವದ ನೆಲೆಯನ್ನು ಕಾಣಬಹುದಾದ ಎತ್ತರದ ಮುಗಿಲ ಅಲೆಯನೇರುವ ಗರಿಯಾಗುತ್ತೇವೆ. ಅಂತಹ ಅರಿವಿಗೆ ಅಭಿಜ್ಞಾನವಾಗಿ ಇಲ್ಲಿನ ಕವಿತೆಗಳು ಮೌನದಲ್ಲೇ ಮಾತಾಗುತ್ತವೆ. ವರ್ತಮಾನದ ತಲ್ಲಣಗಳಿಗೆ ತೀವ್ರವಾಗಿ ಸ್ಪಂದಿಸುತ್ತಲೇ ಪ್ರೀತಿ ನೀತಿ ಭಕ್ತಿ ರಕ್ತಿ ವಿರಕ್ತಿಗಳ ಸುಗಮ ಸಾಂಗತ್ಯದ ಈ ಕವಿತೆಗಳನ್ನು ಕೆತ್ತಿದ ಶಿವಪ್ರಕಾಶರಿಗೆ ಪ್ರೀತಿಯ ಅಭಿನಂದನೆಗಳು.
- ಬಿ.ಆರ್. ವೆಂಕಟರಮಣ ಐತಾಳ
|
| |
|
|
|
|
|
|
|
|
|