|
|
|

| Rs. 125 | 10% |
Rs. 113/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಡಾ|| ಪಿ.ಎಸ್.ಶಂಕರ್ ಪ್ರತಿಷ್ಠಾನದ ‘ಶ್ರೇಷ್ಟ ವೈದ್ಯಸಾಹಿತ್ಯ ಪ್ರಶಸ್ತಿ’ 2000 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಯಾವುದೇ ರೋಗಕ್ಕೆ, ರೋಗಲಕ್ಷಣಕ್ಕೆ ಔಷಧವನ್ನು ಸೇವಿಸುವುದು ನಮಗೆ ಅಭ್ಯಾಸವಾಗಿದೆ. ರೋಗಕ್ಕೆ ತಕ್ಕ ಮತ್ತು ಸೂಕ್ತ ಪ್ರಮಾಣದ ಔಷಧ ಅಮೃತ, ಇಲ್ಲವಾದರೆ ಆ ಔಷಧ ನಮಗೆ ವಿಷ. ಜನರ ಔಷಧ ಪ್ರೀತಿಯನ್ನು ಕಂಡು ನೂರಾರು ಕಂಪೆನಿಗಳು ಸಾವಿರಾರು ಔಷಧಗಳನ್ನು ಮಾರುತ್ತಿವೆ. ಜನ, ವೈದ್ಯರನ್ನು ಕೇಳದೆಯೇ, ಅವುಗಳನ್ನು ಕೊಂಡು ಸೇವಿಸುತ್ತಿದ್ದಾರೆ. ಕಂಪೆನಿಗಳ ಪ್ರಚಾರ ಒತ್ತಾಸೆಗೆ ಮರುಳಾಗಿ ವೈದ್ಯರೂ, ಅನಗತ್ಯವಾಗಿ ಹೆಚ್ಚಿನ ಔಷಧಗಳನ್ನು ಬರೆದುಕೊಡುತ್ತಾರೆ. ಪ್ರತಿಯೊಂದು ಔಷಧ ಸಸ್ಯಮೂಲದಿಂದಲೋ, ಪ್ರಾಣಿ ಮೂಲದಿಂದಲೇ ಬಂದಿರುತ್ತದೆ. ನಿರೀಕ್ಷಿತ ಔಷಧೀಯ ಗುಣಗಳ ಜೊತೆಗೆ ಬೇಡದ, ಕೆಲವು ಸಲ ಅವು ಅಪಾಯಕಾರಿಯಾದ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತವೆ. ಔಷಧವನ್ನು ಕೊಂಡುಕೊಳ್ಳುವಾಗ, ಬಳಸುವಾಗ ಏನೇನು ಎಚ್ಚರಿಕೆಗಳನ್ನು ಪಾಲಿಸಬೇಕು? ಔಷಧವನ್ನು ಯಾವಾಗ, ಹೇಗೆ ಸೇವಿಸಬೇಕು? ಈ ಪುಸ್ತಕದಲ್ಲಿ ಆಲೋಪತಿ ಔಷಧಗಳ ಬಗ್ಗೆ ನೀವು ಆವಶ್ಯಕವಾಗಿ ತಿಳಿದಿರಬೇಕಾದ ಮಾಹಿತಿ ಇದೆ. ನೀವು ಸೇವಿಸಬೇಕೆಂದು ವೈದ್ಯರು ಹೇಳುವ ಔಷಧಗಳ ಬಗ್ಗೆ ತಿಳಿದುಕೊಂಡು ಸರಿಯಾಗಿ ಬಳಸಿ. ಉತ್ತಮ ಫಲವನ್ನು ಪಡೆಯಿರಿ.
|
ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.
|
|
| |
|
|
|
|
|
|
|
|
|