Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 180   
10%
 
 
Rs. 162/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 228
ಪುಸ್ತಕದ ಗಾತ್ರ : 1/8 Demy Size
ISBN : 9789384486327
ಕೋಡ್ : 187921

ಭಾರತದ 11ನೇ ರಾಷ್ಟ್ರಪತಿಯಾಗಿದ್ದ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಆ ಸ್ಥಾನದಿಂದ ವಿಶ್ರಾಂತಿ ಪಡೆದ ನಂತರ ಹಲವು ವರ್ಷಗಳೇ ಸಂದುಹೋಗಿದ್ದರೂ ಅವರು ಇಂದೂ ಕೂಡ ಅತ್ಯಂತ ಜನಪ್ರಿಯ ಸಾರ್ವಜನಿಕ ಮಹನೀಯರಾಗಿಯೇ ಉಳಿದಿರುವಂತಹುದು ಅಪೂರ್ವವಾದುದು. ಹೆಚ್ಚು ಅರಸಲ್ಪಡುವ, ಹೆಚು ಅಭಿಮಾನಿಸಲ್ಪಡುವ ಅವರತ್ತ ಯುವ ಜನತೆ ಸಲಹೆಗಳಿಗಾಗಿ, ಮಾರ್ಗದರ್ಶನಕ್ಕಾಗಿ, ಸಾಂತ್ವನಕ್ಕಾಗಿ ನೋಡುತ್ತಾರೆ ಅಥವಾ ಅವರೊಡನೆ ಸುಮ್ಮನೆ ಸಂಪರ್ಕದಿಂದಿರಲು ಆಶಿಸುತ್ತಾರೆ. ತಾವು ರಾಮೇಶ್ವರದಿಂದ ರಾಷ್ಟ್ರಪತಿ ಭವನದವರೆಗೆ ನಡೆದುಬಂದ ಬಂಡೆಗಲ್ಲುಗಳ ರಸ್ತೆಯಲ್ಲಿ ಎದುರಿಸಿದ ಪರೀಕ್ಷೆಗಳನ್ನು, ನೋವುಗಳನ್ನು ಚೆನ್ನಾಗಿ ಬಲ್ಲ ಡಾ.ಕಲಾಂ ಅವರು ಈ ಕೃತಿಯಲ್ಲಿ ನೀಡಿರುವ ಮಾರ್ಗದರ್ಶನಗಳು, ನಿರ್ದೇಶನಗಳು ಹಾಗೂ ಪರಿಹಾರಗಳು ಅವರ ಅನುಭವ ಪಾಕದಿಂದ ಹುಟ್ಟಿದ ವಿವೇಕದಿಂದ ಬಂದಿರುವವೇ ಆಗಿವೆ.

ನಾವು ಪ್ರತಿಯೊಬ್ಬರೂ ನಮ್ಮ ದೈನಂದಿನ ಬದುಕಿನಲ್ಲಿ ಎದುರಿಸುವ ವ್ಯಕ್ತಿತ್ವ ವಿಕಸನದ ಸವಾಲುಗಳಿಂದ ಹಿಡಿದು ಒಂದು ಸಮಾಜವಾಗಿ ಮತ್ತು ಒಂದು ದೇಶವಾಗಿ ನಾವು ಎದುರಿಸುವ ಇನ್ನೂ ಹೆಚ್ಚಿನ ಸಂಕೀರ್ಣ ವಿಷಯಗಳವರೆಗೆ ಪರ್ಯಾಲೋಚಿಸುವ ಈ ಕೃತಿಯು ಒಂದು ಪ್ರೇರಣಾತ್ಮಕವಾದ ಹಾಗೂ ಒಂದು ಸ್ಪಷ್ಟ ಉದ್ದೇಶವುಳ್ಳ ಬದುಕನ್ನು ಜೀವಿಸಲು ಮಾರ್ಗನಕಾಶೆಯಾಗಿದೆ.

ಅವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ ೨೦೦೨ರಿಂದ ೨೦೦೭ರ ವರೆಗೆ ಭಾರತದ ಹನ್ನೊಂದನೇ ರಾಷ್ಟ್ರಪತಿಯಾಗಿದ್ದರು. ಅವರು ಪದ್ಮಭೂಷಣ, ಪದ್ಮವಿಭೂಷಣ ಹಾಗೂ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಪಡೆದವರು. ೧೯೩೧ರಲ್ಲಿ ತಮಿಳುನಾಡಿನ ರಾಮೇಶ್ವರದ್ಲ ಜನಿಸಿದ ಡಾ. ಕಲಾಂ ಅವರು ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಲಿತರು. ಭಾರತವನ್ನು ಬಾಹ್ಯಾಕಾಶ ಯಾನದ ರಾಷ್ಟ್ರಗಳ ಸಾಲಿಗೆ ಸೇರಿಸಿದ ರೋಹಿಣಿ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾಯಿಸಿದ ಎಸ್‌ಎಲ್‌ವಿ-೩ ರಾಕೆಟ್ ಉಡಾವಣಾ ವಾಹನವನ್ನು ವಿನ್ಯಾಸ ಮಾಡಿ ಅಭಿವೃದ್ಧಿಪಡಿಸುವುದರಲ್ಲಿ ಕಲಾಂ ಮಹತ್ವದ ಪಾತ್ರ ವಹಿಸಿದರು. ಭಾರತದ ಯುದ್ಧಾನುಕೂಲದ ಕ್ಷಿಪಣಿ ವ್ಯವಸ್ಥೆಗಳ ರಚನೆಯಲ್ಲೂ ಅವರದೇ ಪ್ರಧಾನ ಪಾತ್ರ, ಹಾಗೂ ೧೯೯೮ರ ಪರಮಾಣು ಸರಣಿ ಪರೀಕ್ಷೆಗಳಲ್ಲೂ ಅವರು ಮಹತ್ವದ ಪಾತ್ರ ವಹಿಸಿದರು. ತಂತ್ರಜ್ಞಾನ ಮಾಹಿತಿ, ಭವಿಷ್ಯಗ್ರಹಣ ಹಾಗೂ ಅಂದಾಜು ಮಂಡಯ (ಟೆಕ್ನಾಲಜಿ ಇನ್‌ಫರ್ಮೇಷನ್, ಫೋರ್‌ಕಾಸ್ಟಿಂಗ್ ಅಂಡ್ ಅಸೆಸ್‌ಮೆಂಟ್ ಕೌನ್ಸಿಲ್ - ಟಿಐಎಫ್‌ಎಸಿ) ಅಧ್ಯಕ್ಷರಾಗಿ ಹಾಗೂ ಓರ್ವ ಗಣ್ಯ ವಿಜ್ಞಾನಿಯಾಗಿ ೫೦೦ ಮಂ ತಜ್ಞರ ಸಹಾಯದೊಂಗೆ ಅವರು ೨೦೨೦ರ ತಂತ್ರಜ್ಞಾನ ಕಾಣ್ಕೆಯನ್ನು ರೂಪಿಸಿದರು. ಇದು ಭಾರತವನ್ನು ಒಂದು ಮುಂದುವರಿದ ರಾಷ್ಟ್ರವಾಗಿ ರೂಪಿಸುವುದಕ್ಕೆ ಮಾರ್ಗೋಪಾಯಗಳನ್ನೂ ನೀಲಿನಕ್ಷೆಯನ್ನೂ ಹಾಕಿಕೊಟ್ಟಿತು. ಸಲಹೆ ಕೊಡುತ್ತ, ಜನರೊಡನೆ ಸಂಪರ್ಕ ಬೆಳೆಸುತ್ತ ಮತೀಯ ಹಾಗೂ ಸಾಮಾಜಿಕ ವೈಷಮ್ಯಗಳು ನಿರ್ಮಾಣವಾದಲ್ಲೆಲ್ಲ ಅವುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತ ಕಲಾಂ ಅವರು ಇಂದು ಸಾಮಾಜಿಕ ಕ್ಷೇತ್ರಗಳಲ್ಲೂ ಜನ ಸಾಮಾನ್ಯರ ಕಣ್ಮಣಿಯಾಗಿದ್ದಾರೆ. ಭಾರತವನ್ನು ೨೦೨೦ರ ವೇಳೆಗೆ ಮುಂದುವರಿದ ರಾಷ್ಟ್ರವಾಗಿ ರೂಪಿಸುವ ಕನಸನ್ನು ಅವರು ಎಡೆಬಿಡದೆ ಹಿಂಬಾಸಿದ್ದಾರೆ. ಇದಕ್ಕಾಗಿ ಅವರು ದೇಶಾದ್ಯಂತ ಸುತ್ತಿ ಕಮ್ಮಟಗಳಲ್ಲೂ ಸೆಮಿನಾರುಗಳಲ್ಲೂ ಭಾಗವಹಿಸಿ ತಜ್ಞರನ್ನೂ ಯುವ ಜನಾಂಗದವರನ್ನೂ ಹುರಿದುಂಬಿಸುತ್ತಿದ್ದಾರೆ. ತಂತ್ರಜ್ಞಾನ ಸಂಸ್ಥೆಗಳಲ್ಲೂ ವಿಶ್ವವಿದ್ಯಾಲಯಗಳಲ್ಲೂ ಐಐಟಿ ಮತ್ತು ಐಐಎಂಗಳಲ್ಲಿಯೂ ಉಪನ್ಯಾಸಗಳನ್ನು ನೀಡುತ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಲೇಖಕರ ಇತರ ಕೃತಿಗಳು
10%
ಪ್ರಜ್ವಲಿತ ದೀಪಗಳು - ....
ಅಬ್ದುಲ್ ಕಲಾಂ ಎ ಪಿ ಜೆ, Abdul Kalam A p j
Rs. 125    Rs. 113
10%
ಮಹತ್ವದ ಮಾರ್ಗಗಳು : ....
ಅಬ್ದುಲ್ ಕಲಾಂ ಎ ಪಿ ಜೆ, Abdul Kalam A p j
Rs. 160    Rs. 144
10%
ಟರ್ನಿಂಗ್ ಪಾಯಿಂಟ್ಸ್ - ....
ಅಬ್ದುಲ್ ಕಲಾಂ ಎ ಪಿ ಜೆ, Abdul Kalam A p j
Rs. 170    Rs. 153
Rs. 160    Rs. 144
Best Sellers
250 ವಿವಿಧ ಬಗೆಯ ಸಂಜೆಯ ತಿಂಡಿ ತಿನಿಸುಗಳು (ಭಾಗ-2) (ಅಡಿಗೆ ಪುಸ್ತಕ)
ವಾಣಿ ರವಿಶಂಕರ್, Vani Ravishankar
Rs. 108/-   Rs. 120
ಮಾನವ ದೇಹ
ಚಂದ್ರಶೇಖರ್ ಸಿ ಆರ್, Chandrashekar C R
Rs. 63/-   Rs. 70
ಕೌಟಿಲ್ಯನ ಅರ್ಥಶಾಸ್ತ್ರ
ಸವಿತಾ ಜೋಷಿ, Savita Joshi
Rs. 158/-   Rs. 175
ಪೀಠಿಕೆಗಳು ಲೇಖನಗಳು (HB)
ನರಸಿಂಹಾಚಾರ್ ಡಿ ಎಲ್, Narasimhachar D L
Rs. 540/-   Rs. 600

Latest Books
ಸಿರಿ ಪಾದ : ಶ್ರೀಪಾದ ಭಟ್ ಹಾಗೂ ರಂಗಭೂಮಿ
ಮೋಹನ್ ಜಿ ಎನ್, Mohan G N
Rs. 90/-   Rs. 100
ಹನಿ ಹನಿ ಇಬ್ಬನಿ : ಇದು ನಮ್ಮದೇ ಕಾವ್ಯ ಕಹಾನಿ
ಸಂಪಾದಕರು : ಖುಷಿಕೃಷ್ಣ
Rs. 90/-   Rs. 100
ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ
ಟಿ ಆರ್ ಚಂದ್ರಶೇಖರ, T R Chandrashekhar
Rs. 86/-   Rs. 95
ಶಿಕ್ಷಕನಿಗೆ ಶಿಕ್ಷಣ
ಕೃಷ್ಣಮೂರ್ತಿ ಜೆ, Krishnamurthy J
Rs. 45/-   Rs. 50


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.