|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮನಸೂರೆಗೊಳ್ಳುವ ರಮ್ಯತಾಣಗಳಿಂದ, ಬಗೆಬಗೆಯ ತೀರ್ಥಕ್ಷೇತ್ರಗಳಿಂದ ಪ್ರಸಿದ್ಧವಾಗಿರುವ ನಾಡು ನಮ್ಮ ಚೆಲುವ ಕನ್ನಡ ನಾಡು. ಇಲ್ಲಿ ಧುಮ್ಮಿಕ್ಕುವ ಜೋಗ್ ಜಲಪಾತ ವಿಶ್ವಪ್ರಸಿದ್ಧ; ಧರ್ಮಸ್ಥಳ, ಹೊರನಾಡು, ನಂಜನಗೂಡು ಮೊದಲಾದ ಅನೇಕ ಊರುಗಳು ಮತ್ತು ಪಟ್ಟಣಗಳು ಪವಿತ್ರ ತೀರ್ಥಕ್ಷೇತ್ರಗಳು. ಜೊತೆಗೆ ಕಣ್ಮನ ತಣಿಸಬಲ್ಲ ಗಿರಿಗದ್ವರಗಳಿಂದಲೂ ನಿತ್ಯಹರಿದ್ವರ್ಣದ ಅರಣ್ಯಗಳಿಂದಲೂ ಬಗೆಬಗೆಯ ಪ್ರಾಣಿ-ಪಕ್ಷಿ ಸಂಕುಲದಿಂದಲೂ ಮನಸೆಳೆವ ಅಪೂರ್ವ ನಿಸರ್ಗ ಸೌಂದರ್ಯ ಇಲ್ಲಿ ತಾನೇ ತಾನಾಗಿ ಮೈದಾಳಿದೆ. ಕೊಡಗಿನಲ್ಲಿ ಕಾವೇರಿ, ಕೊಲ್ಲೂರಿನಲ್ಲಿ ಮೂಕಾಂಬಿಕೆ, ಮೈಸೂರಿನಲ್ಲಿ ಚಾಮುಂಡಿ, ಶ್ರೀರಂಗಪಟ್ಟಣದಲ್ಲಿ ನಿಮಿಷಾಂಬೆ, ಶೃಂಗೇರಿಯಲ್ಲಿ ಶಾರದೆ, ಹೀಗೆ ನಮ್ಮ ಜನತೆ ಸದಾ ಭಯಭಕ್ತಿಗಳಿಂದ ಪೂಜಿಸುವ ದೇವತೆಯರ ಆಲಯಗಳು ಒಂದೆರಡಲ್ಲ. ಎಲ್ಲರೂ ನೋಡಬಯಸುವ, ನೋಡಿದಷ್ಟೂ ಇನ್ನಷ್ಟು ನೋಡಬೇಕೆನ್ನಿಸುವ ಸೌಂದರ್ಯವನ್ನೂ ಪಾವಿತ್ರ್ಯವನ್ನೂ ಕಣ್ಣಾರೆ ಕಂಡು ಅನುಭವಿಸಬೇಕಾದರೆ ಕನ್ನಡ ನಾಡಿಗೇ ಬರಬೇಕು. ಭಕ್ತಿಪರವಶಗೊಳಿಸುವ, ಸೌಂದರ್ಯಾನುಭೂತಿ ಉಂಟುಮಾಡುವ ಇಷ್ಟೆಲ್ಲ ತಾಣಗಳಿದ್ದರೂ ಇವುಗಳ ಬಗೆಗೆ ಅಗತ್ಯ ಮಾಹಿತಿ ಇಲ್ಲದಿರುವುದೊಂದು ಕೊರತೆಯೇ. ವಿ.ಎಸ್. ಕುಮಾರ್ ರಚಿಸಿರುವ ಈ ಪುಸ್ತಕ ಆ ಕೊರತೆಯನ್ನು ನೀಗಿಸುವ ದಿಸೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು. ಇದರಲ್ಲಿ ಕರ್ನಾಟಕದ ಪ್ರಸಿದ್ಧ ತಾಣಗಳ ಬಗ್ಗೆ ಹೇಗೋ ಹಾಗೆ ಕಂಡುಕೇಳಿರದ ಅನೇಕಾನೇಕ ಕ್ಷೇತ್ರಗಳ ಬಗೆಗೂ ವಿಪುಲವಾದ ಮಾಹಿತಿಯಿದೆ. ಈ ಎಲ್ಲ ಕ್ಷೇತ್ರಗಳಿಗೂ ಸ್ವತಃ ಭೇಟಿಕೊಟ್ಟಿರುವ ಈ ಲೇಖಕರ ನಿರೂಪಣೆ ತನ್ನ ಲವಲವಿಕೆಯ ಯಾತ್ರಾರ್ಥಿಗಳ ಮನಸೂರೆಗೊಳ್ಳುವುದರಲ್ಲಿ ಸಂಶಯವಿಲ್ಲ.
|
| |
|
|
|
|
|
|
|
|