Items
0
Total
  0.00 
Welcome Guest.

 
Rs. 60    
10%
Rs. 54/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2011
ರಕ್ಷಾ ಪುಟ : ಉತ್ತಮ
ಪುಟಗಳು : 64
ಪುಸ್ತಕದ ಗಾತ್ರ : 1/8 Demy Size
ISBN : 9789381055441
ಕೋಡ್ : 162835

ಪಚ್ಚೆ ರೆಸಾರ್ಟ್ ಸಂಕಲನ ಇಹದ ಹಂಗಿಗೆ ಸಿಕ್ಕಿಬಿದ್ದೂ ಬಿಡಿಸಿಕೊಳ್ಳುವ ಶೋಧವಾಗಿದೆ. ಜಗದ ಅನುರಾಗಿಯಾದವನಿಗೆ ಕಳೆದು ಹೋಗುವುದು ಯಾವುದೂ ಇಲ್ಲ. ಮನುಷ್ಯ ಬೌದ್ಧಿಕವಾಗಿ ಎಷ್ಟೇ ಎತ್ತರವನ್ನು ಸಾಧಿಸಿದರೂ ಕಳೆದುಹೋಗಲಾರದ ಕೆಲವು ಭಾವನೆಗಳೂ ನಮ್ಮೊಳಗೆ ಅಡಕವಾಗಿದ್ದು ಅವಕಾಶ ಸಿಕ್ಕಾಗಲೆಲ್ಲಾ ಧಿಗ್ಗನೆದ್ದು ನಮ್ಮನ್ನು ಸಮ್ಮೋಹನಗೊಳಿಸುತ್ತಿರುತ್ತವೆ. ಈ ಸಮ್ಮೋಹಕ ಅಂಶಗಳೇ ನಮ್ಮಲ್ಲಿ ಮಗುತ್ವವನ್ನು ಜಾಗೃತಗೊಳಿಸಿ ಜಗತ್ತನ್ನು ಹೊಸದಾಗಿ ನೋಡುವಂತೆ ಮಾಡುತ್ತವೆ. ಇಲ್ಲಿಯ ಕಥೆ-ಕವಿತೆಗಳು ನಮ್ಮೊಳಗಿನ ಯೌವ್ವನಕ್ಕೆ ಹುರುಪು ತುಂಬಿ ಬೆಚ್ಚನೆಯ ಸ್ಪರ್ಶವನ್ನು ನೀಡುತ್ತವೆ.

ಈ ಸಂಕಲನದ ಮುಖ್ಯಕಥೆ ‘ಪಚ್ಚೆ ರೆಸಾರ್ಟ್’ ಕನ್ನಡ ಸಾಹಿತ್ಯಲೋಕದ ಅಪರೂಪದ ನೆಲೆಯೊಂದರಲ್ಲಿ ನಿರೂಪಿತವಾಗಿರುವಂಥದ್ದು. ಹೆಣ್ಣಿನ ಆಂತರಂಗಿಕ ಭಾವನೆಗಳಿಗೆ ಹೊಸ ಪರಿಭಾಷೆಯನ್ನು ಕೊಡಬಲ್ಲ ಸೂಕ್ಷ್ಮತ್ವ ಈ ಕಥೆಗಿದೆ. ತನ್ನ ಎಲ್ಲಾ ನೆನಪುಗಳನ್ನು, ಕನಸುಗಳನ್ನು ಆದರ ತೀವ್ರತೆಯೊಂದಿಗೆ ಕಾಪಿಟ್ಟುಕೊಳ್ಳುವ ಭಾಗೇರತಿ ಎನ್ನುವ ಸಂಪ್ರದಾಯದೊಳಗಿನ ರತಿಯ ನಿರೂಪಣೆ ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತದೆ. ಈ ಕಥಯೊಂದೇ ಪ್ರಯೋಗಶೀಲತೆಗೆ ಎಲ್ಲಿ ಎಲ್ಲೆ, ಆಕಾಶದ ಅನಂತತೆಗೆ ಎಲ್ಲಿ ಕೊನೆ ಎನ್ನುವ ಅಚ್ಚರಿಯ ಭಾವವನ್ನು ಸುಳಿಸದೇ ಬಿಡದು.

ಯು.ಆರ್. ಅನಂತಮೂರ್ತಿಯವರು ಹುಟ್ಟಿದ್ದು ೧೯೩೨ರಲ್ಲಿ, ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ. ೧೯೫೬ರಲ್ಲಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ. ಎ. ಪದವಿ ಪಡೆದರು; ೧೯೬೩ರಲ್ಲಿ ಕಾಮನ್ವೆಲ್ತ್ ಫೆಲೊಶಿಪ್ ಪಡೆದು ಇಂಗ್ಲೆಂಡಿಗೆ ಹೋಗಿ ಬರ್ಮಿಂಗಂ ವಿಶ್ವವಿದ್ಯಾಲಯದಿಂದ ಪಿ.ಎಚ್ಡಿ ಗಳಿಸಿದರು; ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ, ಮೈಸೂರಿನ ರೀಜನಲ್ ಕಾಲೇಜಿನಲ್ಲಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು; ಅಮೆರಿಕದ ಅಯೋವಾ ವಿಶ್ವವಿದ್ಯಾಲಯದಲ್ಲಿ, ಟಫ್ಟ್ಸ್ ವಿಶ್ವವಿದ್ಯಾಲಯದಲ್ಲಿ, ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ, ಕಾರ್ನೆಗಿ ವಿಶ್ವವಿದ್ಯಾಲಯದಲ್ಲಿ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಫುಲ್ಬ್ರೈಟ್ ಪ್ರೊಫೆಸರ್ ಆಗಿ ಬೋಧಿಸಿದರು; ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷ, ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ನ ನಿರ್ದೇಶಕ, ಹೀಗೆ ಹಲವು ಹುದ್ದೆಗಳನ್ನು ನಿರ್ವಹಿಸಿದರು. ಸಂಸ್ಕಾರ ಅನಂತಮೂರ್ತಿಯವರ ಮೊದಲ ಕಾದಂಬರಿ. ಇದು ಭಾರತದ ಭಾಷೆಗಳಿಗಲ್ಲದೆ, ಯೂರೋಪಿನ ಹಾಗೂ ಏಷ್ಯದ ಹಲವು ಭಾಷೆಗಳಿಗೆ ಭಾಷಾಂತರಗೊಂಡಿದೆ; ಚಲನಚಿತ್ರವಾಗಿಯೂ ಪ್ರಸಿದ್ಧವಾಗಿದೆ. ಎಂದೆಂದೂ ಮುಗಿಯದ ಕಥೆ, ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಸೂರ್ಯನ ಕುದುರೆ, ಪಚ್ಚೆ ರಿಸಾರ್ಟ್ ಅವರ ಮುಖ್ಯ ಕಥಾ ಸಂಕಲನಗಳು. ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ, ಶತಮಾನದ ಕವಿ ಯೇಟ್ಸ್, ಶತಮಾನದ ಕವಿ ರಿಲ್ಕೆ ಅವರ ಕವನ ಸಂಕಲನಗಳು. ಭಾರತೀಪುರ, ಅವಸ್ಥೆ, ಭವ, ದಿವ್ಯ ಅವರ ಇತರ ಕಾದಂಬರಿಗಳು. ಪ್ರಜ್ಞೆ ಮತ್ತು ಪರಿಸರ, ಸನ್ನಿವೇಶ, ಸಮಕ್ಷಮ, ಪೂರ್ವಾಪರ, ಬೆತ್ತಲೆ ಸೇವೆ ಯಾಕೆ ಕೂಡದು?, ಯುಗಪಲ್ಲಟ, ನವ್ಯಾಲೋಕ, ವಾಲ್ಮೀಕಿಯ ನೆವದಲ್ಲಿ, ಆಚೀಚೆ, ಮಾತು ಸೋತ ಭಾರತ, ಕಾಲಮಾನ ಮೊದಲಾದ ವಿಮರ್ಶಾತ್ಮಕ ಚಿಂತನಪರ ಪ್ರಬಂಧ ಸಂಕಲನಗಳು ಪ್ರಕಟವಾಗಿವೆ. ಅನಂತಮೂರ್ತಿಯವರು ಪಡೆದಿರುವ ಪ್ರಶಸ್ತಿ ಪುರಸ್ಕಾರಗಳಲ್ಲಿ ಹಲವು ವಿಶ್ವವಿದ್ಯಾಲಯಗಳ ಗೌರವ ಡಿ.ಲಿಟ್, ಹೋಮಿಬಾಬಾ ಫೆಲೊಶಿಪ್, ಮಾಸ್ತಿ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ, ಭಾರತ ಸರ್ಕಾರ ನೀಡುವ ಪದ್ಮಭೂಷಣ ಪ್ರಶಸ್ತಿ ಮುಖ್ಯವಾದುವು. ೨೦೦೨ರಲ್ಲಿ ಅವರು ತುಮಕೂರಿನಲ್ಲಿ ನಡೆದ ೬೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

uploads/authorimages/616.jpg
ಲೇಖಕರ ಇತರ ಕೃತಿಗಳು
Rs. 900    Rs. 810
Rs. 225    Rs. 203
10%
ಕನ್ನಡ ಕಾವ್ಯ ಸಂಗ್ರಹ
ಅನಂತಮೂರ್ತಿ ಯು ಆರ್, Ananthamurthy U R
Rs. 55    Rs. 50
10%
ನಿಜದ ಬೆಳಕಿನೆಡೆಗೆ ಒಂದು ....
ಅನಂತಮೂರ್ತಿ ಯು ಆರ್, Ananthamurthy U R
Rs. 75    Rs. 68
Best Sellers
ಔದಾರ್ಯದ ಉರುಳಲ್ಲಿ
ಶಿವರಾಮ ಕಾರಂತ ಕೆ, Shivarama Karantha K
Rs. 342/-   Rs. 380
ಪ್ರಿಯ ಓದುಗರೇ...ಭಾಗ-9
ಸಂಧ್ಯಾ ಪೈ, Sandhya Pai
Rs. 117/-   Rs. 130
ಕರ್ನಾಟಕದ ಸಂಕ್ಷಿಪ್ತ ಇತಿಹಾಸ (ಕರ್ನಾಟಕ ಇತಿಹಾಸ)
ಸೂರ್ಯನಾಥ ಕಾಮತ್, Suryanath Kamath
Rs. 189/-   Rs. 210
Suragi : Autobiography U.R. Ananthamurthy
ಅನಂತಮೂರ್ತಿ ಯು ಆರ್, Ananthamurthy U R
Rs. 585/-   Rs. 650

Latest Books
ಹಸಿರೊಡಲ ದನಿ : ಲೇಖನಗಳು
ಕ್ಷೀರಸಾಗರ, Ksheerasagara
Rs. 126/-   Rs. 140
ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?
ಶಂಕರ ಭಟ್ ಡಿ ಎನ್, Shankar Bhat D N
Rs. 180/-   Rs. 200
ಫ್ರಮ್ ಪುಲ್ವಾಮಾ
ರವಿ ಬೆಳಗೆರೆ, Ravi Belagere
Rs. 99/-   Rs. 110
ಕಳಸಾ ಬಂಡೂರಿ ನೀರಿಗಾಗಿ ಹಾಹಾಕಾರ ಮತ್ತು ನೀಚ ರಾಜಕಾರಣ
ಸಿರಿಮನೆ ನಾಗರಾಜ್, Sirimane Nagaraj
Rs. 23/-   Rs. 25


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.