|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಭರತ ಬಿ ರಾವ್, Bharata B Rao |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2019 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
302 |
ಪುಸ್ತಕದ ಗಾತ್ರ |
: |
1/8 Demy |
ISBN |
: |
9789353611293 |
ಕೋಡ್ |
: |
1115025 |
ಪಂಚತಂತ್ರವು ಸಾವಿರಾರು ವರ್ಷಗಳ ಹಳೆಯ ರಚನೆಯಾದರೂ, ನಮ್ಮ ಈಗಿನ ಸಮಾಜಕ್ಕೂ ಅತ್ಯಂತ
ಪ್ರಸ್ತುತವಾಗಿ ನಿಲ್ಲಬಲ್ಲ ಕೃತಿ. ಸಮಾಜವು ಯಾವಾಗಲೂ ಧರ್ಮದ ಆದರ್ಶದಂತೆ
ನಡೆಯುವುದಿಲ್ಲವೆಂಬ ವಾಸ್ತವಿಕತೆಯ ಅರಿವಿದ್ದಾಗ, ಧರ್ಮದ ದಾರಿಯಲ್ಲಿ ನಡೆಯಲು ಏನೇನು
ತಂತ್ರವನ್ನು ಮಾಡಬೇಕೋ ಅವೆಲ್ಲವನ್ನೂ ಸಮಯ ಸಂದರ್ಭಕ್ಕನುಗುಣವಾಗಿ ಬಳಸಲು
ಸಿದ್ಧವಿರಬೇಕೆಂಬುದು ಪಂಚತಂತ್ರದಿಂದ ಕಲಿಯಬಹುದಾದ ಮುಖ್ಯವಾದ ಪಾಠ. ರಾಜಧರ್ಮ,
ಮೈತ್ರಿಧರ್ಮ, ಶತ್ರುನಿಗ್ರಹ, ಸೇವಾವೃತ್ತಿ, ಬುದ್ಧಿಯ ಬಳಕೆ, ಮೂರ್ಖರೊಂದಿಗಿನ
ವ್ಯವಹಾರ, ಸ್ವಾರ್ಥ ಸಾಧನೆ, ತಂತ್ರಗಳ ಬಳಕೆ ಮುಂತಾದ ಹಲವು ವಿಚಾರಗಳನ್ನು
ಕುತೂಹಲಕಾರಿಯಾದ ಕಥೆಗಳ ಮೂಲಕ ವಿವರಿಸುವ ಪಂಚತಂತ್ರದ ನಿಜವಾದ ಪ್ರಯೋಜನವನ್ನು
ಪಡೆಯಲು ಸರಳೀಕರಿಸಿದ ಮಕ್ಕಳ ಪುಸ್ತಕಗಳಿಗೆ ಮೊರೆಹೋಗದೆ, ಮೂಲವನ್ನು ಓದುವುದು
ಅವಶ್ಯಕ. ಮೂಲ ಪಂಚತಂತ್ರವನ್ನು ಕನ್ನಡ ಓದುಗರಿಗೆ ಪರಿಚಯಿಸುವ ಪ್ರಯತ್ನವಿದು.
ಈ ಪುಸ್ತಕದಲ್ಲಿ ಪಂಡಿತ ವಿಷ್ಣುಶರ್ಮ ವಿರಚಿತ ಮೂಲ ಸಂಸ್ಕೃತ ಪಂಚತಂತ್ರದ ಸಂಪೂರ್ಣ
ಕನ್ನಡಾನುವಾದವನ್ನು ಕೊಡಲಾಗಿದೆ. ಮಿತ್ರಭೇದ ಮಿತ್ರಸಂಪ್ರಾಪ್ತಿ, ಕಾಕೋಲೂಕೀಯ,
ಲಬ್ಧಪ್ರಣಾಶ ಹಾಗೂ ಅಪರೀಕ್ಷಿತಕಾರಕ ಎಂಬ ಪಂಚತಂತ್ರದ 5 ತಂತ್ರಗಳ 5 ಸೂತ್ರ ಕಥೆಗಳು
ಹಾಗೂ ಅವುಗಳಲ್ಲಿ ಬರುವ 70 ಉಪಕಥೆಗಳನ್ನು ಈ ಪುಸ್ತಕವು ಒಳಗೊಂಡಿದೆ. ಮಕ್ಕಳಿಗಾಗಿ ಈಗ
ಲಭ್ಯವಿರುವ ಪಂಚತಂತ್ರದ ಕಥೆಗಳಲ್ಲಿ ಮೂಲ ಆಶಯವು ಕಳೆದುಹೋಗಿರುವ ಹಿನ್ನಲೆಯಲ್ಲಿ,
ಮೂಲ ಪಂಚತಂತ್ರವನ್ನು ಯಥಾವತ್ತಾಗಿ ಕನ್ನಡ ಓದುಗರಿಗೆ ಈ ಪುಸ್ತಕವು ಪರಿಚಯಿಸುತ್ತದೆ.
|
ಬೆಂಗಳೂರಿನ ನಿವಾಸಿಯಾದ ಭರತ ಬಿ ರಾವ್ ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರ್. ಚಾರಣ, ಪರ್ವತಾರೋಹಣ ಮುಂತಾದ ತಮ್ಮ ಸಾಹಸ ಪ್ರವಾಸಗಳನ್ನು ತಮ್ಮದೇ ಆದ ಬ್ಲಾಗ್ ನಲ್ಲಿ ದಾಖಲಿಸುವುದರ ಮೂಲಕ ಇವರು ಹವ್ಯಾಸಿ ಬರವಣಿಗೆಯನ್ನು ಪ್ರಾರಂಭಿಸಿದರು. ಕರ್ನಾಟಕದ ಪಶ್ಚಿಮ ಘಟ್ಟಗಳ ಅನೇಕ ಅಪರೂಪದ ಚಾರಣಯೋಗ್ಯ ಸ್ಥಳಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಇವರ ಬ್ಲಾಗ್ ಲೇಖನಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದಿವೆ. ಕನ್ನಡ ಹಾಗೂ ಸಂಸ್ಕೃತ ಭಾಷೆಗಳ ಬಗ್ಗೆ ವಿಶೇಷವಾದ ಒಲವನ್ನು ಬೆಳೆಸಿಕೊಂಡ ಇವರು ಸಂಸ್ಕೃತದ ಮೂಲ ಪಂಚತಂತ್ರ ಗ್ರಂಥದಿಂದ ಪ್ರಭಾವಿತರಾಗಿ ಅದನ್ನು ಯಥಾವತ್ತಾಗಿ ಕನ್ನಡಕ್ಕೆ ಅನುವಾದಿಸುವುದರ ಮೂಲಕ ತಮ್ಮ ಮೊದಲನೆಯ ಪೂರ್ಣಪ್ರಮಾಣದ ಪುಸ್ತಕವನ್ನು ಹೊರತಂದಿರುವರು.
|
|
| |
|
|
|
|
|
|
|
|