|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪಂಡಿತ ಭೀಮಸೇನ ಜೋಶಿಯವರ ಹೆಸರು ಕೇಳಿದೊಡನೆಯೇ ನಾದದ ನದಿಯೊಂದರ ಮಂಜುಳರವ ಕಿವಿ ತುಂಬಿಕೊಳ್ಳುತ್ತದೆ. ಮಾತಿಗೆ ಸಿಕ್ಕದ ಪ್ರಶಾಂತ ಭಾವವೊಂದು ನಮ್ಮನ್ನು ಪರವಶಗೊಳಿಸುತ್ತದೆ. ಅವರ ಸಂಗೀತವು ಶ್ರವಣಬೆಳಗೊಳದ ಗೊಮ್ಮಟನಂತೆ, ಪರಿಸರವನೊದ್ದು, ಮೇಲೆದ್ದು, ಆಕಾಶದುದ್ದಕ್ಕೂ ಧ್ವನಿಸುವಂತದ್ದು! ಮಾರು ಬಿಹಾಗ್ ರಾಗದಲ್ಲಿ ಅವರು ಹಾಡುವಾಗ ಪ್ರಣಯಿನಿಯೊಬ್ಬಳ ಹೃದಯ ವೇದನೆಯು ಅಸಾಧಾರಣ ಮನೋವೇದನೆಯಿಂದ ತುಂಬಿ ತುಳುಕುತ್ತದೆ. ಅವರ ಶಾರೀರದಲ್ಲಿ ಅನಾವರಣಗೊಳ್ಳುವ ‘ಮುಲ್ತಾನಿ‘ ರಾಗದಲ್ಲಿ ಬೇಸಿಗೆಯ ಮಧ್ಯಾಹ್ನಗಳ ವಿಷಣ್ಣ ಭಾವಗಳ ಹಳಹಳಿಕೆಯ ವರ್ಣಗಳಾಗಿ ನುಗ್ಗಿ ಬರುತ್ತವೆ. ‘ಲಲಿತ್‘ ರಾಗವಂತೂ ಸುಕೋಮಲ ಭಾವಗಳ ರಮ್ಯ ಪ್ರವಾಹ! ‘ಮಿಯಾ ಮಲ್ಹಾರ‘ದ ಧೂಂ ಆಲಾಪನೆಯು ಸುರಿಯುವ ಮಳೆಯ ಅದ್ಭುತ ಇಂದಿಯಾನುಭವ ನೀಡುತ್ತದೆ. ಮೂರು ನಾಲ್ಕು ರಾಗಗಳ ಸುತ್ತ ಸಂಚರಿಸುವ, ಸಂಕೀರ್ಣವಾದ, ಒಂದರೊಳಗೊಂದು ಹಾಸುಹೊಕ್ಕಾಗಿರುವ ತಾನುಗಳು, ಅವರ ಪ್ರತಿಭೆಯಿಂದ ಇದ್ದಕ್ಕಿದ್ದಂತೆ ವಿವಿಧತೆಯನ್ನೂ ನಿರಂತರತೆಯನ್ನೂ ಒಟ್ಟಿಗೆ ಸಾಧಿಸಿಬಿಡುತ್ತದೆ.
|
| |
|
|
|
|
|
|
|
|