|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಕರ್ನಾಟಕ ಸಂಘ, ಶಿವಮೊಗ್ಗ - ಇದರ ‘ಹಸೂಡಿ ವೆಂಕಟಶಾಸ್ತ್ರೀ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ 2012 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ವಸ್ತುವಿನ ರಚನೆಯನ್ನು ಖಚಿತವಾಗಿ ಅರಿತುಕೊಳ್ಳಲು ವಿಜ್ಞಾನಿಗಳು ಶತಮಾನಗಳಿಂದ ಪ್ರಯತ್ನಿಸುತ್ತಿದ್ದರೂ, ಅವರ ಯತ್ನಕ್ಕೆ ಚಿಮ್ಮು ಹಲಗೆ ದೊರೆತದ್ದು ಹತ್ತೊಂಭತ್ತನೆಯ ಶತಮಾನದ ಕೊನೆಯ ದಶಕದಲ್ಲಿ. ಆಧುನಿಕ ಭೌತವಿಜ್ಞಾನದ ಬಾಗಿಲು ತೆರೆದುಕೊಂಡದ್ದು ಎಕ್ಸ್-ಕಿರಣಗಳ ಆವಿಷ್ಕಾರದೊಡನೆ. ಅನಂತರ ಫ್ರೆಂಚ್ ವಿಜ್ಞಾನಿ ಬೆಕೆರಲ್, ವಿಕಿರಣಪಟುತ್ವ ವಿದ್ಯಮಾನವನ್ನು ಆವಿಷ್ಕರಿಸಿದ. ಅದರ ಬೆನ್ನಲ್ಲೇ ದ್ಯುತಿ-ವಿದ್ಯುತ್ಪರಿಣಾಮ, ಸಾಪೇಕ್ಷ ಸಿದ್ಧಾಂತ, ಕ್ವಾಂಟಂ ಸಿದ್ಧಾಂತ ಹೀಗೆ ಹಲವಾರು ಮಹತ್ವಪೂರ್ಣ ಸಂಶೋಧನೆಗಳು ಇಪ್ಪತ್ತನೆಯ ಶತಮಾನದ ಆರಂಭದ ದಶಕದಲ್ಲಿ ನಡೆದವು. ಆದ್ದರಿಂದ ಆ ಅವಧಿಯನ್ನು ಭೌತವಿಜ್ಞಾನದ ಪರ್ವಕಾಲವೆಂದು ಪರಿಗಣಿಸುತ್ತಾರೆ. ವಿಜ್ಞಾನಿ ರುದರ್ಫರ್ಡ್,ವಿಕಿರಣಪಟು ವಸ್ತುಗಳು ಉತ್ಸರ್ಜಿಸುವ ಅಲ್ಫಾಕಣಗಳಿಂದ ವಸ್ತುಗಳನ್ನು ತಾಡಿಸಿದ. ಈ ತಾಡನೆಯಲ್ಲಿ ಚದುರಿದ ಅಲ್ಫಾಕಣಗಳು ವಸ್ತುಗಳ ಪರಮಾಣುವಿನ ಕೇಂದ್ರ ಭಾಗದಲ್ಲೊಂದು ನ್ಯೂಕ್ಲಿಯಸ್ ಇರಬಹುದಾದ ಸುಳಿವನ್ನು ನೀಡಿದವು. ಕ್ವಾಂಟಂ ಸಿದ್ಧಾಂತವು ಇಲೆಕ್ಟ್ರಾನುಗಳನ್ನು ನ್ಯೂಕ್ಲಿಯಸ್ಸಿನ ಸುತ್ತ ನಿರ್ದಿಷ್ಟ ಕಕ್ಷೆಗಳಲ್ಲಿ ಇರಿಸಲು ಸಹಾಯ ಮಾಡಿತು. ಹೀಗೆ ಪರಮಾಣುರಚನೆಯ ಚಿತ್ರಣವು ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತ ಹೋಯಿತು. ವಸ್ತುವಿನ ರಾಶಿಯನ್ನು ಸಂಪೂರ್ಣವಾಗಿ ಶಕ್ತಿಯನ್ನಾಗಿ ಪರಿವರ್ತಿಸಲು ಸಾಧ್ಯವೆಂದು ಐನ್ಸ್ಟೈನ್ E=mc² ಎಂಬ ಸಮೀಕರಣದ ಮೂಲಕ ಪ್ರತಿಪಾದಿದ್ದರು. ನಂತರದ ದಶಕಗಳಲ್ಲಿ ವಿಜ್ಞಾನಿಗಳು ಪರಮಾಣು ನ್ಯೂಕ್ಲಿಯಸ್ಸಿನ ವಿದಳನೆಯನ್ನು ಪ್ರಾಯೋಗಿಕವಾಗಿ ಸಾಧಿಸಿ, ಐನ್ಸ್ಟೈನ್ರ ಸಮೀಕರಣವನ್ನು ಸಮರ್ಥಿಸಿದರು. ಆಧುನಿಕ ಭೌತವಿಜ್ಞಾನದ ಈ ವಿಷಯಗಳನ್ನೆಲ್ಲ, ಶಿಕ್ಷಕರಿಗೂ, ಮಕ್ಕಳಿಗೂ ರೋಚಕವಾಗುವಂತೆ ಇಲ್ಲಿ ವಿವರಿಸಿದೆ.
|
| |
|
|
|
|
|
|
|
|
|