|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |  | 2008ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಗೌರವ ಪ್ರಶಸ್ತಿ’ ಪುರಸ್ಕೃತ ಕೃತಿ |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಈ ಕೃತಿಯ ಲೇಖಕರಾದ ಶ್ರೀ ಟಿ. ಆರ್. ಅನಂತರಾಮು ಭೂವಿಜ್ಞಾನಿ ಮತ್ತು ಜನಪ್ರಿಯ ವಿಜ್ಞಾನ ಲೇಖಕರು. ತಮ್ಮ ಶ್ರೀಮತಿಯೊಂದಿಗೆ ಪಶ್ಚಿಮಮುಖಿಯಾಗಿ ಹೊರಟು ಯೂರೋಪಿನ ಪೋರ್ಚುಗಲ್, ಸ್ಪೇನ್, ಫ್ರಾನ್ಸ್ ಹಾಗೂ ಇಟಲಿದೇಶಗಳಲ್ಲಿ ಪ್ರವಾಸ ಮಾಡಿ ಬಂದು ತಮ್ಮ ನೆನಪುಗಳನ್ನು ದಾಖಲಿಸಿದ್ದಾರೆ. ಪ್ರವಾಸದ ಪ್ರತಿಯೊಂದು ಕ್ಷಣವನ್ನೂ ಕಣ್ತೆರೆದು, ಹೃದಯ ತೆರೆದು, ಕುತೂಹಲದಿಂದ ಅನುಭವಿಸಿದ್ದಾರೆ. ಅಷ್ಟೇ ಬೆರಗಿನಿಂದ ಅಲ್ಲಿನ ಹಲವು ನಗರ-ನದಿ-ಬೆಟ್ಟಗಳನ್ನು, ಜನರನ್ನು, ಸಾವಿರಾರು ವರ್ಷಗಳ ಹಿಂದೆ ಸ್ಫೋಟಗೊಂಡ ವೆಸೂವಿಯಸ್ ಅಗ್ನಿಪರ್ವತವನ್ನು, ಅದರಿಂದ ಉಕ್ಕಿ ಹರಿದ ಲಾವಾರಸ ತನ್ನ ದಾರಿಯಲ್ಲಿ ಸಿಕ್ಕಿದುದನ್ನೆಲ್ಲ ದಹಿಸಿದುದನ್ನು, ಆಕಾಶದತ್ತ ಹರಡಿದ ಬೂದಿ ಪಾಂಪೆ ನಗರವನ್ನು ಆವರಿಸಿದ ಪರಿಯನ್ನು ನಮಗೆ ಪರಿಚಯ ಮಾಡಿಕೊಡುತ್ತಾರೆ. ಆಗಾಗ ಕನ್ನಡ ಕವಿಗಳ ಪದ್ಯ ಸಾಲುಗಳನ್ನು ನೆನಪಿಸಿಕೊಳ್ಳುತ್ತ, ಮತ್ತೆ ಆ ದೇಶಗಳ ದೃಶ್ಯಗಳಲ್ಲಿ ತನ್ಮಯರಾಗುತ್ತಾರೆ. ಪ್ರವಾಸದಲ್ಲಿ ಕಂಡ ದೃಶ್ಯವನ್ನು ವೈಜ್ಞಾನಿಕ ದೃಷ್ಟಿಯಿಂದ ಗಮನಿಸುತ್ತ ಕವಿ ಹೃದಯದಿಂದ ಸ್ಪಂದಿಸುತ್ತಾರೆ.
|
ಟಿ ಆರ್ ಅನಂತರಾಮುರವರು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ಹಿರಿಯ ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದವರು. ನಾಲ್ಕು ದಶಕಗಳಿಂದ ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ನವಕರ್ನಾಟಕದ ‘ವಿಜ್ಞಾನ-ತಂತ್ರಜ್ಞಾನ ಪದಸಂಪದ’ದ ಸಂಪಾದಕರಲ್ಲೊಬ್ಬರು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನಕ್ಕೆ ಪಾತ್ರರು. ಕರ್ನಾಟಕ ಸರ್ಕಾರದ ‘ವಿಶನ್ ಗ್ರೂಪ್’ ನೀಡುವ ‘ಅತ್ಯುತ್ತಮ ವಿಜ್ಞಾನ ಸಂವಹನಕಾರ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
|
|
| |
|
|
|
|
|
|
|
|
|