Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 64
ಪುಸ್ತಕದ ಗಾತ್ರ : 1/4 Crown Size
ISBN : 9788184673098
ಕೋಡ್ : 002038

ನಮ್ಮದು ಜೀವಂತ ಭೂಮಿ. ಇದು ಎಷ್ಟೊಂದು ವಿಧದ ಪ್ರಾಣಿ-ಪಕ್ಷಿ, ಕ್ರಿಮಿ-ಕೀಟಗಳೇ ಅಲ್ಲದೆ ನಮ್ಮ ಕಣ್ಣಿಗೆ ಕಾಣಿಸದ ಇನ್ನೂ ಎಷ್ಟೋ ಸೂಕ್ಷ್ಮಜೀವಿಗಳಿಗೆ ಆಶ್ರಯತಾಣವಾಗಿದೆ. ಮೊಟ್ಟಮೊದಲ ಜೀವಾಂಕುರವೆಂದರೆ ಏಕಕೋಶಿ - ಅಮೀಬ ಅಥವಾ ಪ್ರೊಟೊಜೋವ. ಇದು ಆದಿಜೀವಿಯೆಂದು ಪರಿಗಣಿತವಾಗಿದೆ. ಅಮೀಬಕ್ಕೆ ಗ್ರೀಕ್ ಭಾಷೆಯಲ್ಲಿ ಬದಲಾಗು ಎಂಬರ್ಥವೂ ಇದೆಯಂತೆ. ಮುಂದೆ ಮೀನು ಹಾಗೂ ಇತರ ಪ್ರಾಣಿಗಳು ಕಾಲಾಂತರದಲ್ಲಿ ಕಾಣಿಸಿಕೊಂಡವು. ಇಂದು ಭೂಮಂಡಲಕ್ಕೆ ತಾನೇ ಅಧಿಪತಿಯೆಂದು ಬೀಗುತ್ತಿರುವ ಮನುಷ್ಯ ಪ್ರಾಣಿಲೋಕಕ್ಕೆ ನಂತರದ ಸೇರ್ಪಡೆ. ಮಿದುಳೊಂದು ಹೆಚ್ಚಿನ ಬೆಳವಣಿಗೆ ಹೊಂದಿ ಬುದ್ಧಿವಂತ ಎನಿಸಿಕೊಂಡದ್ದು ಬಿಟ್ಟರೆ ಭೂಮಿ ಮತ್ತು ಪ್ರಕೃತಿಯ ದೃಷ್ಟಿಯಿಂದ ಮನುಷ್ಯನ ಹೆಚ್ಚುಗಾರಿಗೆ ಏನೂ ಇಲ್ಲ. ಭೂಮಿಯ ಮೇಲೆ ಬದುಕಲು ಎಲ್ಲ ಜೀವಿಗಳಿಗೂ ಹಕ್ಕಿದೆ. ಇಂದಿನ ಅಸಂಖ್ಯ ಜೀವಿಗಳು ತಮ್ಮ ಹಿಂದೆ ಸುದೀರ್ಘ ಚರಿತ್ರೆಯನ್ನೇ ಹೊಂದಿವೆ. ಇಂದಿನ ರೂಪ ಅವುಗಳಿಗೆ ವಿವಿಧ ಹಂತಗಳನ್ನು ದಾಟಿ ಬಂದ ನಂತರವೇ ದಕ್ಕಿದೆ. ಅದೂ ಮಿಲಿಯಾಂತರ ವರ್ಷಗಳಷ್ಟು ಸುದೀರ್ಘ! ಬದಲಾದ ಸನ್ನಿವೇಶಗಳಲ್ಲಿ ಪಲ್ಲಟಗೊಂಡ ಹವಾಮಾನಗಳಲ್ಲಿ ಪರಿಸರಕ್ಕೆ ತಕ್ಕಂತೆ ಬದುಕಲು ಕೆಲವು ಮಾರ್ಪಾಟುಗಳನ್ನು ಪ್ರತಿಯೊಂದು ಜೀವಿಯೂ ಮಾಡಿಕೊಳ್ಳುತ್ತದೆ. ಪ್ರಾಣಿಲೋಕದ ವಿಸ್ಮಯಗಳನ್ನು ಅರಿಯಲು ಹೋದಷ್ಟೂ ಅವು ನಿಗೂಢವಾಗಿ ಮತ್ತೆ ಮತ್ತೆ ನಮಗೆ ಸವಾಲೆಸೆಯುತ್ತಲೇ ಇವೆ. ನೀರಿನೊಳಗಡೆ ಮಾತ್ರ ಬದುಕುವ ಜಲಚರಗಳು, ನೀರು-ಭೂಮಿ ಎರಡೂ ಕಡೆ ಬದುಕಬಲ್ಲೆವೆನ್ನುವ ದ್ವಿಚರಿಗಳು ಎಷ್ಟೋ ಇವೆ. ಅವೆರಡೂ ನಮಗಪಾಯವೆಂದು ಮರಗಳ ಮೇಲೇ ಗೂಡುಕಟ್ಟಿ, ಆಕಾಶಮಾರ್ಗದಲ್ಲೇ ಸಂಚರಿಸುತ್ತ ಆಹಾರ ಸಿಕ್ಕರೆ ಮಾತ್ರ ಕೆಳಗಿಳಿಯುವ ಪಕ್ಷಿಗಳೇ ಒಂದು ವಿಧ. ಹಿಂದೆ ಇದ್ದ ಎಷ್ಟೋ ಪ್ರಭೇದಗಳು ಇಂದು ನಿರ್ನಾಮವಾಗಿವೆ ಇಲ್ಲವೇ ತನ್ನ ಕುಲದ ಕೊಂಡಿ ಕಳಚಿಕೊಂಡು ಬೇರೆಯೇ ರೂಪ ಪಡೆದಿವೆ. ಬಲಶಾಲಿಯಾದ್ದು, ಬುದ್ಧಿಶಾಲಿಯಾದ್ದು ಮುಂದಿನ ಪೀಳಿಗೆಗೆ ಉಳಿಯುವುದು. ಹಾರಲಾರದ - ಓಡಲಾಗದ ಮೊದ್ದು ಪಕ್ಷಿ ಡೋಡೋ ಮನುಷ್ಯನಿಗೆ ಸುಲಭವಾಗಿ ಆಹಾರವಾಯಿತು... ಕಣ್ಣುಗಳಿದ್ದರೂ ಕಣ್ಣು ಕಾಣದ ಬಾವಲಿ... ಆರ್ಕಿಯಾಪ್ಟರಿಕ್ಸ್ ಪಕ್ಷಿಯೇ ಸರೀಸೃಪವೇ...? ನೂರೈವತ್ತು ವರ್ಷ ಬದುಕಿದ ಗ್ಯಾಲಪೊಗಾಸ್ ದ್ವೀಪದ ದೈತ್ಯ ಆಮೆ... ನಕ್ಷತ್ರದಂತೆ ಮಿಂಚುವ ಮಿಂಚುಹುಳು... ಆನೆಯ ಪೂರ್ವಜ ಮ್ಯಾಮತ್ ಮತ್ತೆ ಬಂದನೆ?... ಈ ಕೃತಿಯಲ್ಲಿ ಇಂಥ ವಿಸ್ಮಯ - ಕುತೂಹಲಕಾರಿ ಸಂಗತಿಗಳು ಒಂದಲ್ಲ, ಎರಡಲ್ಲ; ನೂರಾರು ಇವೆ.

ಲೇಖಕರ ಇತರ ಕೃತಿಗಳು
10%
ಇಂದ್ರಜಾಲದ ಅಂತರಂಗ
ಗಣೇಶಯ್ಯ ಜಿ ವಿ, Ganeshaiah G V
Rs. 55    Rs. 50
10%
ನೀವೇ ಮಾಡಿ ಬಳಸಿ ....
ಗಣೇಶಯ್ಯ ಜಿ ವಿ, Ganeshaiah G V
Rs. 70    Rs. 63
10%
ವಿಚಿತ್ರ ಸತ್ಯಗಳು ಕುತೂಹಲಕರ ....
ಗಣೇಶಯ್ಯ ಜಿ ವಿ, Ganeshaiah G V
Rs. 125    Rs. 113
10%
ಶೃಂಗೇರಿ ಉಪಚಾರ
ಗಣೇಶಯ್ಯ ಜಿ ವಿ, Ganeshaiah G V
Rs. 80    Rs. 72
Best Sellers
ಭಾರತದ ವನ್ಯಧಾಮಗಳು
ಸುಹಾಸ್ ಬಿ ಆರ್, Suhas B R
Rs. 203/-   Rs. 225
ನೀಲಿಬಾನಿನಲ್ಲಿ ಕೆಂಪು ಸೂರ್ಯ : ಜೆಎನ್ಯೂ (JNU) ಆಜಾದಿ ಭಾಷಣಗಳು
ಚೇತನಾ ತೀರ್ಥಹಳ್ಳಿ, Chetana Teerthahalli
Rs. 90/-   Rs. 100
ಮೆಂಟಲ್ ಎಬಿಲಿಟಿ ಮಾನಸಿಕ ಸಾಮರ್ಥ್ಯ
ಹರಿಪ್ರಸಾದ್ ಎಂ, Hariprasad M
Rs. 126/-   Rs. 140
Junior Encyclopedia Awesome Facts About Our Environment
Raymond Duff
Rs. 113/-   Rs. 125

Latest Books
ಅರೇಬಿಯನ್ ನೈಟ್ಸ್ : ಭಾಗ ೨
ಸರ್ ರಿಚರ್ಡ್ ಬರ್ಟನ್, Sir Richard Burton
Rs. 383/-   Rs. 425
ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ
ವ್ಯಾಲೇಸ್ ಡಿ ವ್ಯಾಟಲ್ಸ್, Wallace D Wattles
Rs. 99/-   Rs. 110
ಉತ್ತರ : ಕಾದಂಬರಿ (Pre Order) ಜನವರಿ 15 ರೊಳಗೆ ಪುಸ್ತಕ ಬಿಡುಗಡೆ
ಸುಪ್ರೀತ್ ಕೆ ಎನ್, Supreeth K N
Rs. 225/-   Rs. 250
ಪವಿತ್ರ ಕಾಶಿ : ಭಾರತೀಯ ಸಂಸ್ಕೃತಿಯ ಕಿರು ಸಂಗ್ರಹಾಲಯ
ಚಂದ್ರಮೌಳಿ ಕೆ, Chandramouli K
Rs. 361/-   Rs. 380


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.