
|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ಎಷ್ಟು ಭಾಷೆಗಳನ್ನು ಕಲಿಯಬಹುದು? ಎಷ್ಟು ವಿಷಯಗಳ ಬಗ್ಗೆ ಅಧಿಕೃತವಾಗಿ ತಿಳಿಯಬಹುದು? ಗ್ರಂಥಗಳನ್ನು ರಚಿಸಬಹುದು? ಗಂಟೆಗಟ್ಟಲೆ ಮಾತನಾಡಬಹುದು? ಹಿಂದಿ, ಸಂಸ್ಕೃತ, ಪಾಲಿ, ಭೋಜಪುರಿ, ಉರ್ದು, ಪರ್ಶಿಯನ್, ಅರಾಬಿಕ್, ತಮಿಳು, ಕನ್ನಡ, ಟಿಬೇಟಿಯನ್, ಸಿಂಹಳೀ, ಇಂಗ್ಲಿಷ್, ಫ್ರೆಂಚ್, ರಶಿಯನ್ ಮುಂತಾದ ಬಹುಭಾಷಾ ಪಾಂಡಿತ್ಯ ರಾಹುಲ ಸಾಂಕೃತ್ಯಾಯನರಿಗಿತ್ತು. ಕಥೆ, ಕಾದಂಬರಿ, ವಿಜ್ಞಾನ, ತತ್ವಶಾಸ್ತ್ರ, ರಾಜನೀತಿ, ಧರ್ಮಶಾಸ್ತ್ರ ಮುಂತಾದ ವಿಷಯಗಳ ಬಗ್ಗೆ 150ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವರು. ಸಾಂಕೃತ್ಯಾಯನರು ಬರೆದ ‘ವೋಲ್ಗಾ ಸೆ ಗಂಗಾ‘ ಎಂಬ ಕೃತಿ ಭಾರತೀಯ ಸಾಹಿತ್ಯದಲ್ಲಿಯೇ ಎದ್ದು ನಿಲ್ಲುವ ಮೇರು ಕೃತಿಯಾಗಿದೆ. ನವಕರ್ನಾಟಕ ಪ್ರಕಟಿಸಿರುವ ಇದರ ಕನ್ನಡ ಅನುವಾದವು ಈಗಾಗಲೇ ಐದಕ್ಕೂ ಹೆಚ್ಚು ಮುದ್ರಣಗಳನ್ನು ಕಂಡಿದೆ ಕ್ರಿ.ಪೂ. 6000ದಿಂದ ಕ್ರಿ.ಶ.1942ರವರೆಗೆ ಮಾನವ ಸಮಾಜದ ಐತಿಹಾಸಿಕ, ಆರ್ಥಿಕ, ರಾಜಕೀಯ ಹಾಗೂ ನೈತಿಕ ಬೆಳವಣಿಗೆಯು 20 ಕಥಾನಕಗಳ ರೂಪದಲ್ಲಿ ಅನಾವರಣಗೊಳ್ಳುತ್ತದೆ. ಓದುಗರನ್ನು ಬೆಕ್ಕಸಬೆರಗಾಗಿಸುತ್ತದೆ.
|
ಡಾ|| ಗೀತಾ ಶೆಣೈ ತಮ್ಮ ಬರವಣಿಗೆಯಲ್ಲಿ ಸೌಂದರ್ಯ ಮತ್ತು ಲಾಲಿತ್ಯವನ್ನು ಕಾಪಿಟ್ಟುಕೊಂಡವರು. ಕನ್ನಡದಲ್ಲಿ ಎಂ.ಎ., ಪಿಎಚ್.ಡಿ. ಪದವೀಧರರು. ಕನ್ನಡ, ಇಂಗ್ಲಿಷ್, ಹಿಂದಿ, ತುಳು, ಕೊಂಕಣಿ ಭಾಷೆಗಳನ್ನು ಬಲ್ಲವರು. ಸಂಶೋಧನೆ, ಭಾಷಾಂತರ ಬರೆಹಗಳಂತಹ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಉತ್ಸಾಹ. ಕರ್ನಾಟಕದ ಅನೇಕ ಪತ್ರಿಕೆಗಳಲ್ಲಿ ಇವರ ನೂರಕ್ಕು ಹೆಚು ಬರೆಹಗಳು ಪ್ರಕಟವಾಗಿವೆ. ಹಲವಾರು ಸಂಸ್ಥೆಗಳಲ್ಲಿ ಗೌರವ ಹುದ್ದೆ, ಸದಸ್ಯತ್ವ ಹೊಂದಿದ್ದವರು. ಸಾಹಿತ್ಯ ಸಂಪದ ಮಾಲಿಕೆಯ ‘ಗೋಪಾಲಕೃಷ್ಣ ಪೈ’, ಡಾ|| ಜ್ಯೋತ್ಸ್ನಾ ಕಾಮತ್ ಕೊಂಕಣಿಯಲ್ಲಿ ಬರೆದ ‘ಕಮಲಾದೇವಿ ಚಟ್ಟೋಪಾಧ್ಯಾಯ : ಬದುಕು-ಸಾಧನೆ’ಯನ್ನು ಕನ್ನಡಕ್ಕೆ ಅನುವಾದಿಸಿದ್ದು ಅವು ನವಕರ್ನಾಟಕದಿಂದ ಪ್ರಕಟವಾಗಿವೆ. ಇವರ ಸುಮಾರು 31 ಕೃತಿಗಳು ಇದುವರೆಗೆ ಪ್ರಕಟವಾಗಿವೆ.
|
|
| |
|
|
|
|