|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪೋರ್ಚುಗೀಸ್ ಲೇಖಕ ಪಾವ್ಲೊ ಕೊಯ್ಲೆರ, ಸುಪ್ರಸಿದ್ಧ ‘ದಿ ಆಲ್ಕೆಮಿಸ್ಟ್‘ ಕಾದಂಬರಿಗೆ, ಕತೆಗಾರ ಗೆಳೆಯ ಅಬ್ದುಲ್ ರಹೀಮ್ ಟೀಕೆ ನೀಡಿರುವ ಕನ್ನಡ ರೂಪ ಈ ‘ರಸವಾದಿ‘. ಸಾಮಾನ್ಯ ಕುರುಬ ಹುಡುಗನೊಬ್ಬನ ಅರಿವಿನ ಹುಡುಕಾಟದ ಈ ಅದ್ಭುತ-ರಮ್ಯ-ರೋಚಕ ಸಾಹಸಗಾಥೆಯು ಈಗಾಗಲೇ ಜಗತ್ತಿನ ಸುಮಾರು 80ರಷ್ಟು ಭಾಷೆಗಳಿಗೆ ಅನುವಾದಗೊಂಡು, 190 ಮಿಲಿಯಕ್ಕಿಂತಲೂ ಹೆಚ್ಚು ಪ್ರತಿಗಳ ಮಾರಾಟದಿಂದ ಗಿನ್ನೆಸ್ ದಾಖಲೆ ನಿರ್ಮಿಸಿದೆ. ಪ್ರತಿಯೊಬ್ಬರಿಗೂ ಇತರರು ಅವರ ಬದುಕನ್ನು ಹೇಗೆ ಬದುಕಬೇಕೆಂಬ ಸ್ಪಷ್ಟ ಕಲ್ಪನೆ ಇರುತ್ತದೆಯೇ ಹೊರತು, ಸ್ವಂತ ಬದುಕಿನ ಬಗ್ಗೆ ಅಂತಹ ಕಲ್ಪನೆಯೇ ಇರುವುದಿಲ್ಲವಲ್ಲ ಯಾಕೆ? ಎಂದು ಚಿಂತಿಸುವ ಹುಡುಗನೂ, ಕತೆಯ ನಡುವೆ ಮರುಭೂಮಿಯ ಸುಂದರಿಯೊಬ್ಬಳನ್ನು ಪ್ರೀತಿಸುತ್ತಾನೆ. ಕತೆಯ ಕೊನೆಯಲ್ಲಿ ಅವಳನ್ನು ಬಿಟ್ಟು ಹೊರಡುವಾಗ, ಆ ಹುಡುಗಿ ಹೇಳುವ ಮಾತುಗಳು ನೂರು ಹೊಸ ಕತೆಗಳನ್ನು ಹೇಳುತ್ತವೆ. “ನಾವು ಮರುಭೂಮಿಯ ಹೆಣ್ಣುಗಳು. ನಮ್ಮನ್ನು ಅಗಲಿ ಹೊರಡುವ ಪುರುಷರು ಬಹುತೇಕ ಮರಳಿ ಬರುವುದಿಲ್ಲ. ನಮಗೆ ಅದು ಅಭ್ಯಾಸವಾಗಿದೆ. ಆದರೂ, ಇದುವರೆಗೆ ಕೇವಲ ಆಸೆಯ ಕಣ್ಣುಗಳಿಂದ ಮರುಭೂಮಿಯನ್ನು ನೋಡುತ್ತಿದ್ದ ನಾನು ಇನ್ನು ಮುಂದೆ ನಿರೀಕ್ಷೆಯ ಕಣ್ಣುಗಳಿಂದ ನೋಡುವೆ. ನಾನು ಮರುಭೂಮಿಯ ಹೆಣ್ಣು; ನಿಜ. ಆದರೂ, ನಾನು ಹೆಣ್ಣೇ..“ ಜಗತ್ತಿನಾದ್ಯಂತ ಇತರ ಹಳೆ ಪುಸ್ತಕಗಳು ಏನನ್ನು ಹೇಳುತ್ತವೆಯೋ ಅದನ್ನೇ ಮತ್ತೊಂದು ಹೊಸ ಪುಸ್ತಕವೂ ಹೇಳುತ್ತದೆ. ವೈಯಕ್ತಿಕ ಮಹತ್ವಾಕಾಂಕ್ಷೆ ಸಾಧಿಸಲು ಜನರಿಗಿರುವ ಅಸಾಮರ್ಥ್ಯದ ಬಗ್ಗೆ ಮೊದಲು ವಿವರಿಸುವ ಪ್ರತಿಯೊಂದು ಪುಸ್ತಕವೂ ಕೊನೆಗೆ, “ವಿಶ್ವದ ಎಲ್ಲರೂ ಆ ಮಹಾನ್ ಸುಳ್ಳು ನಂಬಿಕೆಯನ್ನು ನಂಬುತ್ತಾರೆ“ ಎಂದು ಹೇಳು ಮುಗಿಸುತ್ತದೆ. ಹಾಗಾದರೆ, ವಿಶ್ವದ ಆ ಮಹಾನ್ ಸುಳ್ಳು ನಂಬಿಕೆ ಯಾವುದು ಎಂಬ ಪ್ರಶ್ನೆಗೆ ಉತ್ತರ ನೀಡುವ ಒಂದು ವಿಶಿಷ್ಟ ಪ್ರಯತ್ನ ಈ ‘ರಸವಾದಿ‘.
|
| | |
|
|
|
|
|
|
|
|