Items
0
Total
  0.00 
Welcome Guest.

 
Rs. 105    
10%
Rs. 95/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪುಸ್ತಕ ಪ್ರಕಾಶನ, Pustaka Prakashana
ಈಗಿನ ಮುದ್ರಣದ ಸಂಖ್ಯೆ : 9
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 158
ಪುಸ್ತಕದ ಗಾತ್ರ : 1/8 Demy Size
ಕೋಡ್ : 164362

ಜಿಮ್ ಕಾರ್ಬೆಟ್‌ರವರ ಸಾಹಸ ಸತ್ಯಕಥೆ ‘ರುದ್ರಪ್ರಯಾಗದ ಭಯಾನಕ ನರಭಕ್ಷಕ’ ಅದರ ವಸ್ತುವಿನಿಂದ ಮಾತ್ರವಲ್ಲದೆ ಗದ್ಯಶೈಲಿಯಿಂದಲೂ ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಖ್ಯಾತ ಕೃತಿಯಾಗಿದೆ. ಎಂಟು ವರ್ಷಗಳ ಪರ್ಯಂತ ರುದ್ರಪ್ರಯಾಗದ ಆಜುಬಾಜಿನ ಐನೂರು ಚದರಮೈಲಿ ಪ್ರದೇಶದಲ್ಲಿ ನಿರಂತರವಾಗಿ ನೂರಾರು ಕಗ್ಗೊಲೆಗಳನ್ನು ಮಾಡಿದ ಈ ಚಿರತೆಯ ಕುಯುಕ್ತಿ, ಚಾಣಾಕ್ಷತೆ, ಮನುಷ್ಯರ ನಡವಳಿಕೆಯ ತಿಳುವಳಿಕೆಗಳು ಅದನ್ನು ಈ ಕತೆಯ ಅಸಾಮಾನ್ಯ ಖಳನಾಯಕನನ್ನಾಗಿ ರೂಪಿಸಿವೆ. ಎಂಥ ಸನ್ನಿವೇಶದಲ್ಲೂ ಎದೆಗೆಡದೆ ಎಲ್ಲರಿಗೂ ಧೈರ್ಯ ಹೇಳುತ್ತಾ ಅಕ್ಷರಶಃ ಪ್ರಾಣದ ಹಂಗು ತೊರೆದು ಈ ನರಭಕ್ಷಕನ ಕೊಲೆಗಳ ಸರಣಿಯನ್ನು ತಡೆಯಲು ಹೋರಾಡಿದ ಜಿಮ್ ಕಾರ್ಬೆಟ್ ಭಾರತ ರೂಪಿಸಿದ ಸರಳ, ಧೀರ, ಅಸಾಧಾರಣ ವ್ಯಕ್ತಿ. ಈತನ ಮುಗ್ಧ ಪ್ರಾಮಾಣಿಕತೆ, ಅಲ್ಲಿನ ಜನಗಳಿಗೂ ಈತನಿಗೂ ಇದ್ದ ಪರಸ್ಪರ ಪ್ರೀತಿ ಗೌರವಗಳು ಈ ಪುಸ್ತಕದಾದ್ಯಂತ ಎಷ್ಟು ಚೆನ್ನಾಗಿ ಪ್ರತಿಬಿಂಬಿತವಾಗಿದೆ ಎಂದರೆ ಈ ಕೃತಿ ಸಾಹಸ ಕಥೆಗಿಂತಲೂ ಮಿಗಿಲಾಗಿ ನಮಗೆ ಘರ್ವಾಲಿನ ಜನರ ಸಾಮಾಜಿಕ ಕಾದಂಬರಿಯಂತೆ ಕಾಣುತ್ತದೆ. ರುದ್ರಪ್ರಯಾಗದ ನರಭಕ್ಷಕ ಮೈ ನವಿರೇಳಿಸುವಂಥ ಸತ್ಯಕಥೆಯಾಗಿರುವಂತೆಯೇ ಅದ್ಭುತ ಕಲಾಕೃತಿಯೂ ಆಗಿದೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭)- ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. ೧೯೮೭ರಲ್ಲಿ `ಚಿದಂಬರ ರಹಸ್ಯ` ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಂದೆ-ಮಕ್ಕಳಿಬ್ಬರೂ ಪ್ರಶಸ್ತಿ ಗಳಿಸಿದ ವಿಕ್ರಮವನ್ನು ಸೃಷ್ಟಿಸಿದ ಜೋಡಿಯಲ್ಲಿ ಎರಡನೆಯವರು. ವಿಜ್ಞಾನ ಮತ್ತು ಇತರ ಕೆಲವು ಸಾಹಿತ್ಯೇತರ ಕ್ಷೇತ್ರಗಳಲ್ಲಿಯೂ ತಮ್ಮತನವನ್ನು ಮೆರೆದಿರುವ ವಿಶಿಷ್ಟ ಲೇಖಕರಾಗಿದ್ದಾರೆ. ಕನ್ನಡ ಕಥೆ-ಕಾದಂಬರಿಗಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನೇ ನೆಟ್ಟ ತೇಜಸ್ವಿ ಅವರು ವಿಶಿಷ್ಟ ಪ್ರವಾಸ ಕಥನ, ಬೇಟೆ ಸಾಹಿತ್ಯ ಹಾಗೂ ಅನುವಾದಿತ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಹೊರಟವರು, ಯಶಸ್ಸನ್ನು ಮೆರೆದವರು. ತೇಜಸ್ವಿಯವರನ್ನು ಕುರಿತು ಸಂಶೋಧನೆ ನಡೆಸಿ ಪಿ‌ಎಚ್.ಡಿ ಪದವಿ ಗಳಿಸಿದ್ದಾರೆ.

uploads/authorimages/545.jpg
ಲೇಖಕರ ಇತರ ಕೃತಿಗಳು
Rs. 90    Rs. 81
Best Sellers
Home Remedies And Yoga - English
Keshava Murthy H S
Rs. 54/-   Rs. 60
ಶ್ಯಾಮನ ತಾಯಿ
ಸಾನೇ ಗುರೂಜಿ, Sane Guruji
Rs. 108/-   Rs. 120
100 ವೆಜಿಟಬಲ್ ಗ್ರೇವಿಗಳು (ಅಡಿಗೆ ಪುಸ್ತಕ)
ಮಲ್ಲಿಕಾ ಬದ್ರಿನಾಥ್, Mallika Badrinath
Rs. 67/-   Rs. 70
ಸೆಲ್ ವೆಲ್ ಯಶಸ್ವಿ ಮಾರಾಟಗಾರರಾಗಿ
ಸತ್ಯನಾರಾಯಣ ವಿ ಆರ್, Satyanarayana V R
Rs. 135/-   Rs. 150

Latest Books
ಮಹಾಭಾರತದ ಕಥೆಗಳು - ರಾಜಗೋಪಾಲಾಚಾರಿ
ರಾಜಗೋಪಾಲಾಚಾರಿ ಸಿ , Rajagopalachari C, Rajaji
Rs. 270/-   Rs. 300
ಶ್ರೀಮಾತೆ (ದಿ ಮದರ್)
ಹರೀಶ್ ಜಿ ಬಿ, Harish G B
Rs. 117/-   Rs. 130
ಮಾತು ಮೌನ ಧ್ಯಾನ ವಿಷ್ಣುವರ್ಧನ
ಜೋಗಿ, Jogi
Rs. 68/-   Rs. 75
ಧರ್ಮಾನಂದ ಕೊಸಾಂಬಿ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 23/-   Rs. 25


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.